Cinema News

ಮುಂದಿನ ವರ್ಷ ಮನುರಂಜನ್‌ ಮದುವೆ

Published

on

ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಪುತ್ರ ಮನುರಂಜನ್‌ ಬರುವ ವರ್ಷ ಮದುವೆ ಆಗಲಿದ್ದಾರಂತೆ. ಈ ವಿಷಯವನ್ನು ಅವರೇ ಸ್ವತಃ ಹೇಳಿದ್ದು, ತಂಗಿಯ ಮದುವೆ ನಂತರ ನನ್ನ ಮದುವೆ ಎಂದು ನಿರ್ಧಾರವಾಗಿತ್ತು.ಹಾಗಾಗಿ 2020ಕ್ಕೆ ನಾನು ಮದುವೆ ಆಗುತ್ತೇನೆ ಎಂದಿದ್ದಾರೆ.

 

 

ಸಕಲೇಶಪುರದಲ್ಲಿ ಮುಗಿಲ್‌ಪೇಟೆ ಶೂಟಿಂಗ್‌ನಲ್ಲಿರುವ ಮನು ಅಲ್ಲಿಯೇ ಮಾಧ್ಯಮದವರ ಮುಂದೆ ಹೇಳಿದ್ದಾರೆ. ಇದಕ್ಕೆ ಯಾರಾನ್ನಾದ್ರೂ ಲವ್‌ ಮಾಡಿದ್ದೀರಾ ಎಂದರೆ ಅಂತಹ ಅವಕಾಶ ಸಿಗಲಿಲ್ಲ ಎಂದಿದ್ದಾರೆ ಅವರು. ಅಲ್ಲಿಗೆ ಮನು ಮನೆಯವರು ನೋಡಿದ ಹುಡುಗಿಯನ್ನೇ ಮುಂದಿನ ವರ್ಷ ಮದುವೆ ಆಗಲಿದ್ದಾರೆ.

Spread the love

Copyright © 2019 PopcornKannada.com