Connect with us

Cinema News

ಮೊದಲ ಹಾಡಿನಲ್ಲೇ ಗಮನ ಸೆಳೆದ ‘ನೀ ನಂಗೆ ಅಲ್ಲವಾ’; ‘ನೋ ನೋ’ ಸಾಂಗ್‌ಗೆ ಭರ್ಜರಿ ಮೆಚ್ಚುಗೆ

Published

on

ಸುರಮ್ ಮೂವೀಸ್ ಬ್ಯಾನರ್‌ನಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಮನೋಜ್ ಪಿ. ನಡಲುಮನೆ ನಿರ್ದೇಶನದ ‘ನೀ ನಂಗೆ ಅಲ್ಲವಾ’ ಚಿತ್ರದ ಮೊದಲ ಹಾಡು ‘ನೋ ನೋ’ ಇತ್ತೀಚೆಗೆ ಬಿಡುಗಡೆಯಾಗಿದೆ. ರಾಹುಲ್ ಆರ್ಕಟ್ ಹಾಗೂ ಕಾಶಿ ಮಾ ನಾಯಕ–ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ ಸಂಯೋಜಿಸಿದ್ದಾರೆ. ವಿಶೇಷವೆಂದರೆ, ಹಾಡಿನ ಸಾಹಿತ್ಯ ರಚನೆಯ ಜೊತೆಗೆ ನಿರ್ದೇಶಕ ಮನೋಜ್ ಪಿ. ನಡಲುಮನೆ ಅವರೇ ಗಾಯನವನ್ನೂ ಮಾಡಿದ್ದಾರೆ. ನಟಿಯರಾದ ಸಂಜನಾ ಆನಂದ್ ಹಾಗೂ ರಾಶಿಕಾ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಸರಿಗಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ‘ನೋ ನೋ’ ಹಾಡು ಕಡಿಮೆ ಅವಧಿಯಲ್ಲೇ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾಯಕಿಯ ಪ್ರೀತಿಗಾಗಿ ಕಾಯುತ್ತಿರುವ ಪ್ರೇಮಿಯೊಬ್ಬ ತನ್ನ ಮನದ ಮಾತುಗಳನ್ನು ಹಾಡಿನ ಮೂಲಕ ಹೇಳಿಕೊಳ್ಳುವ ರೀತಿಯಲ್ಲಿ ಈ ಹಾಡನ್ನು ರೂಪಿಸಲಾಗಿದೆ. ಹೀಗಾಗಿ ಇದೊಂದು ಒನ್‌ಸೈಡ್ ಲವ್ ಸಾಂಗ್ ಆಗಿದ್ದು, ನಿರ್ದೇಶಕ ಮನೋಜ್ ಅವರ ಸಾಹಿತ್ಯ ಹಾಗೂ ಗಾಯನಕ್ಕೆ ಸೂರಜ್ ಜೋಯಿಸ್ ಅವರ ಸಂಗೀತ ಮತ್ತಷ್ಟು ಮೆರುಗು ನೀಡಿದೆ. ಅಭಿಷೇಕ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.

ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಮನೋಜ್ ಪಿ. ನಡಲುಮನೆ, ತಮ್ಮ ಮೊದಲ ನಿರ್ದೇಶನದ ‘ಆನ’ ಚಿತ್ರದಿಂದಲೂ ಪ್ರೋತ್ಸಾಹ ನೀಡುತ್ತಿರುವ ಪ್ರೇಕ್ಷಕರು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು. ‘ನೀ ನಂಗೆ ಅಲ್ಲವಾ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿರುವುದು ಸಂತಸ ತಂದಿದ್ದು, ಇಡೀ ತಂಡದ ಪರಿಶ್ರಮದಿಂದ ಹಾಡು ಉತ್ತಮವಾಗಿ ಮೂಡಿಬಂದಿದೆ ಎಂದರು. ನಿರ್ಮಾಪಕರು, ಚಿತ್ರತಂಡದ ಸದಸ್ಯರು ಹಾಗೂ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಸಂಜನಾ ಆನಂದ್ ಮತ್ತು ರಾಶಿಕಾ ಅವರಿಗೆ ಧನ್ಯವಾದ ಅರ್ಪಿಸಿದರು.

ನಿರ್ಮಾಪಕ ಜಯರಾಮ ದೇವಸಮುದ್ರ ಮಾತನಾಡಿ, ಇಡೀ ತಂಡದೊಂದಿಗೆ ಸಿನಿಮಾ ಮಾಡಿರುವುದು ಸಂತೋಷ ತಂದಿದೆ ಎಂದರು. ಚಿತ್ರದ ಪ್ರತಿಯೊಂದು ಹಾಡು ವಿಭಿನ್ನವಾಗಿದ್ದು, ಯಾವ ಹಾಡನ್ನು ಮೊದಲು ಬಿಡುಗಡೆ ಮಾಡಬೇಕು ಎಂಬುದರಲ್ಲೇ ತಂಡದೊಳಗೆ ಪೈಪೋಟಿ ನಡೆದಿತ್ತು ಎಂದು ಹೇಳಿದರು. ಸಿನಿಮಾ ಈಗಾಗಲೇ ವೀಕ್ಷಿಸಿದ್ದು, ಉತ್ತಮವಾಗಿ ಮೂಡಿಬಂದಿರುವ ವಿಶ್ವಾಸವಿದೆ ಎಂದು ತಿಳಿಸಿದರು. ಇದೇ ವೇಳೆ ಸೂರಜ್ ಜೋಯಿಸ್ ‘ನೋ ನೋ’ ಹಾಡಿನ ವಿಶೇಷತೆಗಳನ್ನು ಹಂಚಿಕೊಂಡರೆ, ರಾಹುಲ್ ಆರ್ಕಟ್ ಹಾಗೂ ಕಾಶಿ ಮಾ ಹಾಡಿನ ಚಿತ್ರೀಕರಣದ ಅನುಭವವನ್ನು ವಿವರಿಸಿದರು. ಆರತಿ ಪಡುಬಿದ್ರಿ, ತಾರಕ್ ಮಾಸ್ಟರ್, ಭಾವನ ಚಂದ್ರ, ರೋಹಿತ್, ಛಾಯಾಗ್ರಾಹಕ ಉದಯ್ ಲೀಲಾ, ನೃತ್ಯ ನಿರ್ದೇಶಕ ಅಭಿಷೇಕ್ ಸೇರಿದಂತೆ ಚಿತ್ರತಂಡದ ಹಲವರು ಮಾತನಾಡಿದರು. ಸಂಕಲನಕಾರ ನಾಗೇಂದ್ರ ಉಜ್ಜನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Spread the love

Continue Reading