Cinema News
‘ನನ್ನ ಪ್ರಕಾರ’ದಲ್ಲಿ ಥ್ರಿ ಡೈಮೆನ್ಷನ್ ಸ್ಟೋರಿ!!
ನವ ನಿರ್ದೇಶಕ ವಿನಯ್ ನಿರ್ದೇಶನ ಮಾಡಿರುವ ನನ್ನ ಪ್ರಕಾರ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸ್ಯಾಂಡಲ್‌ವುಡ್ ಭರವಸೆಯ ಸಿನಿಮಾ ಎನಿಸುತ್ತದೆ.
ಈ ಟ್ರೇಲರ್‌ನ್ನು ಇದೇ ಆಗಸ್ಟ್ 15ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ್ದು ಇದೊಂದು ಮರ್ಡರ್ ಮಿಸ್ಟರಿ ಕಥೆಯನ್ನು ಹೊಂದಿದೆ. ಕಿಶೋರ್ ಇಲ್ಲಿ ಪೊಲೀಸ್ ಅಧಿಕಾರಿಯಾಗಿದ್ದು, ಒಬ್ಬ ಯುವತಿಯ ಕೊಲೆಯ ಹಿಂದೆ ಈ ಸಿನಿಮಾದ ಕಥೆ ಸುತ್ತತ್ತದೆ ಎಂಬ ಅಂಶ ಟ್ರೇಲರ್ ನೋಡಿದಾಗ ಗೊತ್ತಾಗುತ್ತದೆ.
ಇನ್ನು ಟ್ರೇಲರ್ ಬಿಡುಗಡೆ ಮಾಡಿದ ದರ್ಶನ್ ಕೂಡಾ ಅದನ್ನೇ ಹೇಳಿದ್ದು, ಹೊಸ ನಿರ್ದೇಶಕ ವಿನಯ್ ಬಾಲಾಜಿ ಥ್ರಿ ಡೈಮೆನ್ಷನ್‌ನಲ್ಲಿ ಕಥೆಯನ್ನು ಹೇಳಿರುವಂತಿದೆ. ಬರೀ ಟ್ರೇಲರ್ ನೋಡಿದರೆ ಸಿನಿಮಾ ಮೇಲಿನ ಕುತೂಹಲ ಹೆಚ್ಚಾಗುತ್ತದೆ. ಎಲ್ಲರಿಗೂ ಆಲ್ ದಿ ಬೆಸ್ಟ್ ಎಂದಿದ್ದಾರೆ.
ಇನ್ನು ಪ್ರಿಯಾಮಣಿ , ಮಯೂರಿ, ನಿರಂಜನ್ ದೇಶಪಾಂಡೆ ಸೇರಿದಂತೆ ಸಾಕಷ್ಟು ಮಂದಿ ಈ ಚಿತ್ರದಲ್ಲಿ ನಟಿಸಿದ್ದಾರೆ.
ಇದೇ 23ಕ್ಕೆ ನನ್ನ ಪ್ರಕಾರ ರಿಲೀಸ್ ಆಗಲಿದೆ.