Cinema News

ದಬಾಂಗ್‌ಗೆ ಧ್ವನಿ ನೀಡಿದ ಜಿಂಕೆ ಮರಿ ನಂದಿತಾ

Published

on

ಇದೇ 20ರಂದು ದಬಾಂಗ್‌ 3 ಸಿನಿಮಾ ರಿಲೀಸ್‌ ಆಗಲಿದ್ದು, ಇದು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗೂ ಡಬ್ ಆಗಿದೆ. ಇದರಲ್ಲಿ ಸೋನಾಕ್ಷಿಯ ಪಾತ್ರಕ್ಕೆ ಕನ್ನಡದ ಹುಡುಗಿ, ತೆಲುಗು, ತಮಿಳಿನಲ್ಲಿ ಫೇಮಸ್‌ ಆಗಿರುವ ನಂದಿತಾ ಶ್ವೇತಾ ವಾಯ್ಸ್‌ ನೀಡಿದ್ದಾರೆ.

 

 

ಪ್ರಭುದೇವ ನಿರ್ದೇಶನದ ಸಲ್ಮಾನ್‌ ಖಾನ್‌, ಸುದೀಪ್‌ ನಟನೆಯ ದಬಾಂಗ್‌ 3 ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ನಟಿಸಿದ್ದಾರೆ. ಹಿಂದಿಯನ್ನು ಬಿಟ್ಟು ತೆಲುಗು ಮತ್ತು ತಮಿಳು, ಕನ್ನಡ ಭಾಷೆಗೆ ನಂದಿತಾ ಧ್ವನಿ ನೀಡಿದ್ದಾರೆ.ನಂದ ಲವ್ಸ್‌ ನಂದಿತಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಎಂಟ್ರಿ ಕೊಟ್ಟ ಇವರು ಕನ್ನಡಕ್ಕಿಂತಲೂ ತಮಿಳಿನಲ್ಲೇ ಫೇಮಸ್‌ ಆಗಿದ್ದಾರೆ. ಒಟ್ಟಿನಲ್ಲಿ ದಬಾಂಗ್‌-3 ಚಿತ್ರತಂಡದ ಭಾಗವಾಗಿದ್ದಕ್ಕೆ ಅವರು ಖುಷಿಯಾಗಿದ್ದಾರೆ.

 

 

ಇನ್ನು ಈ ಸಿನಿಮಾದ ಬೇರೆ ಬೇರೆ ಪಾತ್ರಗಳಿಗೆ ಶಿವರಾಜ್‌ ಕೆ ಆರ್‌ ಪೇಟೆ, ಗೋವಿಂದೇಗೌಡ, ಸೇರಿದಂತೆ ಸಾಕಷ್ಟು ಮಂದಿ ಧ್ವನಿ ನೀಡಿದ್ದಾರೆ. ಒಟ್ಟಿನಲ್ಲಿ ಇದು ಕನ್ನಡ ಸಿನಿಮಾದಂತೆ ಫೀಲ್‌ ಆಗಬೇಕು ಎಂದು ಚಿತ್ರತಂಡ ಸಿಕ್ಕಾಪಟ್ಟೆ ಸರ್ಕಸ್‌ ಮಾಡುತ್ತಿದೆ.

Spread the love

Copyright © 2019 PopcornKannada.com