Connect with us

Cinema News

ನಾಗತಿಹಳ್ಳಿ ಚಂದ್ರಶೇಖರ್ ಕನಸಿನ ಮತ್ತೊಂದು ಪಯಣ; ‘ಅಮೇರಿಕಾ ಅಮೇರಿಕಾ 2’ ಅಧಿಕೃತ ಘೋಷಣೆ

Published

on

ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದಾದ ‘ಅಮೇರಿಕಾ ಅಮೇರಿಕಾ’ ಬಿಡುಗಡೆಯಾಗಿ ಮೂರು ದಶಕಗಳಾದ ಬಳಿಕ, ಅದೇ ಶೀರ್ಷಿಕೆಯಲ್ಲಿ ‘ಅಮೇರಿಕಾ ಅಮೇರಿಕಾ 2’ ಸಿನಿಮಾ ಘೋಷಣೆಯಾಗಿದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರೇ ಮತ್ತೊಮ್ಮೆ ಈ ಚಿತ್ರವನ್ನು ನಿರ್ದೇಶಿಸಿದ್ದು, ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ್ ಹಾಗೂ ಪೃಥ್ವಿ ಅಂಬರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ‘ಅಮೇರಿಕಾ ಅಮೇರಿಕಾ 2’ ಮೊದಲ ಚಿತ್ರದ ಸೀಕ್ವೆಲ್ ಅಲ್ಲ ಎಂದು ಸ್ಪಷ್ಟಪಡಿಸಿದರು. “ಶೀರ್ಷಿಕೆ ಮಾತ್ರ ಅದೇ, ಆದರೆ ಕಥೆ ಸಂಪೂರ್ಣ ಹೊಸದು. ಹಿಂದಿನ ಚಿತ್ರದ ಪಾತ್ರಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಸಿನಿಮಾ. ಸಹನಾ ವಿಜಯಕುಮಾರ್ ಅವರ ಕಾದಂಬರಿಯನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದ್ದು, ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಮನೋಮೂರ್ತಿ ಸಂಗೀತ, ನಕುಲ್ ಅಭಯಂಕರ್ ಹಿನ್ನೆಲೆ ಸಂಗೀತ ಹಾಗೂ ಎಸ್.ಕೆ. ರಾವ್ ಅವರ ಛಾಯಾಗ್ರಹಣ ಚಿತ್ರದ ಪ್ರಮುಖ ಆಕರ್ಷಣೆ” ಎಂದು ಹೇಳಿದರು.

ನಟ ನಿರೂಪ್ ಭಂಡಾರಿ, “ನಾಗತಿಹಳ್ಳಿ ಸರ್ ಕಥೆ ಹೇಳಿದ ಕ್ಷಣವೇ ಸಿನಿಮಾ ಮಾಡಲು ಒಪ್ಪಿಕೊಂಡೆ. ಮೂವತ್ತು ವರ್ಷಗಳ ಹಿಂದೆ ನೋಡಿದ ‘ಅಮೇರಿಕಾ ಅಮೇರಿಕಾ’ ಚಿತ್ರದ ನೆನಪು ಇನ್ನೂ ಹಸಿರಾಗಿದೆ. ಇದು ಸೀಕ್ವೆಲ್ ಅಲ್ಲದಿದ್ದರೂ, ಕಥೆ ಮತ್ತು ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಉಳಿಯುವಂತಿವೆ” ಎಂದರು. ನಟಿ ಶಾನ್ವಿ ಶ್ರೀವಾಸ್ತವ್ ಕೂಡ, ತಮ್ಮ ಸಿನಿ ಜೀವನದಲ್ಲೇ ವಿಭಿನ್ನ ಪಾತ್ರ ಸಿಕ್ಕಿದ್ದು, ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.

ನಟ ಪೃಥ್ವಿ ಅಂಬರ್, “ನಾಗತಿಹಳ್ಳಿ ಚಂದ್ರಶೇಖರ್ ಅವರ ಉತ್ಸಾಹ ನಮಗೆಲ್ಲ ಪ್ರೇರಣೆ. ಅವರ ನಿರ್ದೇಶನದಲ್ಲಿ, ಅದೇ ಹೆಸರಿನ ಚಿತ್ರದಲ್ಲಿ ಅಭಿನಯಿಸಿರುವುದು ಸಂತಸದ ವಿಷಯ” ಎಂದರು. ನಿರ್ಮಾಣದ ಉಸ್ತುವಾರಿ ವಹಿಸಿರುವ ಶೋಭ ನಾಗತಿಹಳ್ಳಿ ಚಂದ್ರಶೇಖರ್, ಛಾಯಾಗ್ರಾಹಕ ಎಸ್.ಕೆ. ರಾವ್, ಸಂಕಲನಕಾರ ಶ್ರೀ ಕ್ರೇಜಿ ಮೈಂಡ್ಸ್ ಸೇರಿದಂತೆ ಚಿತ್ರತಂಡದ ತಂತ್ರಜ್ಞರು ಚಿತ್ರದ ನಿರ್ಮಾಣದ ಅನುಭವಗಳನ್ನು ಹಂಚಿಕೊಂಡರು. ಶೀಘ್ರದಲ್ಲೇ ಚಿತ್ರದ ಬಿಡುಗಡೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಪ್ರಕಟಿಸುವುದಾಗಿ ಚಿತ್ರತಂಡ ತಿಳಿಸಿದೆ.

Spread the love

Continue Reading