Connect with us

Cinema News

ನವೆಂಬರ್‌ ಮಳೆಯಲ್ಲಿ ನಾಗಶೇಖರ್ ಪ್ರೇಮಕಥೆ

Published

on

ಸಂಜು ವೆಡ್ಸ್ ಗೀತಾ, ಮೈನಾ, ಅಮರ್ ನಂಥಾ ಅದ್ಭುತ ದೃಶ್ಯಕಾವ್ಯಗಳನ್ನು ಕನ್ನಡ ಬೆಳ್ಳಿ ತೆರೆಗೆ ಕೊಡುಗೆಯಾಗಿ ನೀಡಿದ ನಾಗಶೇಖರ್ ಈಗೇನು ಮಾಡ್ತಿದ್ದಾರೆ ಎನ್ನುವ ಪ್ರಶ್ನೆಗೆ ಅವರೇ ಮಾಧ್ಯಮದ ಮುಂದೆಬಂದು ಉತ್ತರ ನೀಡಿದ್ದಾರೆ. ನಾಗಶೇಖರ್ ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ “ನವೆಂಬರ್ ಮಳೆಯಲ್ ನಾನುಂ ಅವಳುಂ” ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಬೆಂಗಳೂರಿನ ಮಿನರ್ವ ಮಿಲ್ ಆವರಣದಲ್ಲಿ ತಮ್ಮ ಮುಂಬರುತ್ತಿರುವ ಪ್ರಾಜೆಕ್ಟ್‌ ಗಳ ಬಗ್ಗೆ ವಿವರಿಸಿದರು.

ಮಳೆಯ ಸೀನೊಂದರ ಚಿತ್ರೀಕರಣ ನಡೆಸಿದ ನಂತರ ನಡೆದ ಅಲ್ಲೇ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಂಡದ ಜೊತೆ ಸಂಪೂರ್ಣ ಮಾಹಿತಿ ನೀಡಿದರು. ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗಿಗೆ ಡಬ್ ಆಗಲಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಸೆನ್ಸಾರ್ ಶಿವು, ಫೋಲೀಸ್ ಕಮೀಷನ್ ಪಾತ್ರ ಮಾಡುತ್ತಿರುವ ಸುಮನ್ ರಂಗನಾಥ್, ಏಳು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಡೆಲ್ಲಿ ಗಣೇಶ್, ಅರ್ಜುನ್, ರಾಜಶೇಖರ್, ರಾಜಶೇಖರ ರೆಡ್ಡಿ, ಸಹನಿರ್ಮಾಪಕರಾದ ನಾಗೇಂದ್ರ ಶೆಟ್ಟಿ, ಛಾಯಾಗ್ರಾಹಕ ಸತ್ಯ ಹೆಗ್ಡೆ ಮುಂತಾದವರು ಹಾಜರಿದ್ದು ಮಾತನಾಡಿದರು.
ಇದು ಮಳೆಗಾಲದಲ್ಲಿ ನಡೆಯೋ ಪ್ರೇಮಕಥೆ. ತಮಿಳುನಾಡಲ್ಲಿ ನವೆಂಬರ್‌ ನಲ್ಲಿ ಭಾರೀಮಳೆ, ಹಾಗಾಗಿ ಈ ಚಿತ್ರಕ್ಕೆ ನವೆಂಬರ್ ಮಳೆಯಲ್ ನಾನುಂ ಅವಳುಂ ಶೀರ್ಷಿಕೆ ಇಟ್ಟಿದ್ದೇನೆ. ಮೊದಲು ಈ ಕಥೆಯನ್ನು ಬೇರೆ ಹೀರೋಗಾಗಿ ಮಾಡಿದ್ದೆ. ಇಲ್ಲಿ ನಾಯಕನಿಗೆ ಸೀಳುತುಟಿಯಿರುತ್ತೆ. ಆತನಿಗೆ ತಾನೊಬ್ಬ ದೊಡ್ಡ ಸಿಂಗರ್ ಆಗಬೇಕೆಂಬ ಕನಸು. ಆತನ ಜೀವನದಲ್ಲೊಂದು ಲವ್ ಸ್ಟೋರಿ. ಇದು ಚಿತ್ರದ ಕಂಟೆಂಟ್. ಆ ನಾಯಕ ಈ ಕಥೆ ಮಾಡಿದರೆ ಸೆನ್ಸಾರ್ ನಿಂದ ಪ್ರಾಬ್ಲಂ ಆಗಬಹುದು ಎಂದಾಗ ನಾನು ಸ್ನೇಹಿತ ಸೆನ್ಸಾರ್ ಶಿವು ಬಳಿ ಚರ್ಚಿಸಿದೆ. ಈ ಕಥೆ ಕೇಳಿದ ಶಿವು ಇದರಲ್ಲಿ ನೀನೇ ಹೀರೋ ಆದ್ರೆ ಚೆನ್ನಾಗಿರುತ್ತೆ ಎಂದರು. ನನ್ನ ಮೇಲೆ ಯಾರಪ್ಪ ಬಂಡವಾಳ ಹಾಕ್ತಾರೆ ಎಂದಾಗ, ಬೇರೆ ಯಾಕೆ ನಾನೇ ಹಾಕ್ತೇನೆ ಎಂದು ಈಗವರೇ ಪ್ರೊಡ್ಯೂಸ್ ಮಾಡ್ತಿದ್ದಾರೆ. ನಾಗೇಂದ್ರ ಶೆಟ್ಟರೂ ಜೊತೆಗೆ ಕೈಜೋಡಿಸಿದ್ದಾರೆ. ತಮಿಳಲ್ಲಿ ಈ ಥರದ ಕಥೆಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ ಮೊದಲು ತಮಿಳಲ್ಲಿ ಮಾಡುತ್ತಿದ್ದೇನೆ.

ಅಲ್ಲದೆ ನವೆಂಬರ್ 11ಕ್ಕೇ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ. ಮಲಯಾಳಂನ ಅನು ಸಿತಾರಾ ನಾಯಕಿ ಪಾತ್ರ ಮಾಡಿದ್ದು, ಏಳು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಡೆಲ್ಲಿ ಗಣೇಶ್, ದತ್ತಣ್ಣ, ರಂಗಾಯಣ ರಘು ಕೂಡ ಅಭಿನಯಿಸಿದ್ದಾರೆ. ಐಡಿಯಲ್ ಹೋಮ್ಸ್‌ ನ ರಾಜಶೇಖರ್ ಅವರು ಸಿಎಂ ಪಾತ್ರ ಮಾಡಿದ್ದಾರೆ, ಶಬ್ಬೀರ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದು, ಮದನ್ ಕಾರ್ಕಿ(ವೈರಮುತ್ತು ಮಗ) ಸಾಹಿತ್ಯ ಬರೆದಿದ್ದಾರೆ. ವೇಣು ವೇಲ್ ಮುರುಗನ್ ಕೋಪ್ರೊಡ್ಯೂಸರ್ ಆಗಿದ್ದಾರೆ. ಇದರ ಜೊತೆಗೆ ಲವ್ ಮಾಕ್ಟೇಲ್ ನ ತೆಲುಗು ವರ್ಷನ್ ಕೂಡ ರೆಡಿಯಾಗಿದೆ. ಅದರಲ್ಲಿ ಸತ್ಯದೇವ್ ಹೀರೋ ಪಾತ್ರ ಮಾಡಿದ್ದು, ತಮನ್ನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭಾವನಾರವಿ ಪ್ರೊಡ್ಯೂಸ್‌ ಮಾಡಿದ್ದಾರೆ ಎಂದು ವಿವರಿಸಿದರು. ಎ2 ಮ್ಯೂಸಿಕ್‌ ನವರು ಹಾಡುಕೇಳಿ ಅರ್ಧಕೋಟಗೆ ಆಡಿಯೋ ರೈಟ್ಸ್ ತಗೊಂಡಿದ್ದಾರೆ. 3 ಕೋಟಿಗೆ ಹಿಂದಿ ರೈಟ್ಸ್ ಮಾರಾಟವಾಗಿದೆ ಎಂಬ ಮಾಹಿತಿಯನ್ನೂ ನೀಡಿದರು.

ನಟಿ ಸುಮನ್ ರಂಗನಾಥ್ ಮಾತನಾಡಿ ನಾಗಶೇಖರ್ ಕಾಲ್ ಮಾಡಿ ಈ ಪೋಲಿಸ್ ಕಮೀಷನರ್ ಪಾತ್ರದ ಬಗ್ಗೆ ಹೇಳಿದರು. ಚಿಕ್ಕದಾದರೂ ಪ್ರಮುಖ ಪಾತ್ರ, ಯೂನಿಫಾರ್ಮ್ ಹಾಕಿದಕೂಡಲೇ ಅದೇನೋ ಪವರ್ ಬಂದುಬಿಡುತ್ತೆ ಎಂದು ಹೇಳಿದರು. ಹಿರಿಯ ಕಲಾವಿದ ಡೆಲ್ಲಿ ಗಣೇಶ್ ಮಾತನಾಡಿ ಸೌತ್ ಇಂಡಿಯಾ ಸಿನಿಮಾಗಳು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿವೆ. 47ವರ್ಷಗಳಿಂದ ಬಣ್ಣ ಹಚ್ಚುತ್ತಿದ್ದೇನೆ. ಇದರಲ್ಲೊಂದು ಸಾಫ್ಟ್ ನೇಚರ್ ವ್ಯಕ್ತಿಯಪಾತ್ರ ಮಾಡಿದ್ದೇನೆ ಎಂದು ಹೇಳಿದರು. ನಟ ಅರ್ಜುನ್ ಮಾತನಾಡಿ ನಾಗಶೇಖರ್ ಮುಹೂರ್ತಕ್ಕೆ ಕರೆದಿದ್ದರು. ಚಿತ್ರದಲ್ಲಿ ಒಬ್ಬ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರ ಮಾಡಿದ್ದೇನೆ ಎಂದರು. ನಿರ್ಮಾಪಕರಾದ ಶಿವು, ನಾಗೇಂದ್ರ ಶೆಟ್ಟಿ, ಅಲ್ಲದೆ ತೆಲುಗು ನಿರ್ಮಾಪಕರೂ ಸಹ ತಮ್ಮ ಅಭಿಪ್ರಾಯ ಹಂಚಿಕೊಂಡರು.

Spread the love

Continue Reading
Click to comment

Leave a Reply

Your email address will not be published. Required fields are marked *