Cinema News
ಎರಡನೇ ಭಾರಿ ಹಸೆ ಮಣೆ ಏರಲು ಸಿದ್ದರಾದ ನಾಗಚೈತನ್ಯ: ಟಾಲಿವುಡ್ ನಟಿಗೆ ಗ್ರೀನ್ ಸಿಗ್ನಲ್ ಕೊಟ್ಟ ನಾಗಾರ್ಜುನ್ ಕುಟುಂಬ

ಸಮಂತರಿಂದ ದೂರವಾದ ಬಳಿಕ ನಟ ನಾಗಚೈತನ್ಯ ಗರ್ಲ್ ಫ್ರೆಂಡ್ ಕಾರಣಕ್ಕೆ ಮತ್ತೆ ಮತ್ತೆ ಸುದ್ದಿಯಾಗ್ತಿದ್ದಾರೆ. ಸದ್ಯ ನಾಗಚೈತನ್ಯ ಅದೇ ಗರ್ಲ್ ಫ್ರೆಂಡ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದ್ದು ಅವರನ್ನೇ ಮದುವೆಯಾಗಲಿದ್ದಾರಂತೆ. ಈ ಮದುವೆಗೆ ನಾಗಚೈತನ್ಯ ಕುಟುಂಬದವರು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.
ಡಿವೋರ್ಸ್ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದ ನಾಗಚೈತನ್ಯ ಇತ್ತೀಚೆಗೆ ತೆಲುಗು ನಟಿ ಶೋಭಿತಾ ಧಲಿಪಾಲ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ಐಷಾರಾಮಿ ಹೋಟೆಲ್ ಗಳಲ್ಲಿ ಭೇಟಿಯಾಗ್ತಿದ್ದ ಜೋಡಿ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳೊಕೆ ಶುರುಮಾಡಿತ್ತು. ಇದೀಗ ಇಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ವಿಷಯ ಟಾಲಿವುಡ್ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ.
ಸಮಂತಾ ಮತ್ತು ನಾಗಚೈತನ್ಯ ದೂರುವಾದ ಬಳಿಕವೇ ಶೋಭಿತಾ ಮತ್ತು ನಾಗಚೈತನ್ಯ ತೀರಾ ಹತ್ತಿರವಾಗಿದ್ದರಂತೆ. ಹಾಗಾಗಿ ಸಮಂತಾ ಡಿವೋರ್ಸ್ ವಿಚಾರಕ್ಕೂ ಶೋಭಿತಾಗೂ ಯಾವುದೇ ಸಂಬಂಧವಿಲ್ಲ ಎನ್ನಲಾಗುತ್ತಿದೆ. ಸದ್ಯಕ್ಕೆ ಈ ಜೋಡಿಯ ಸುದ್ದಿ ಗಾಸಿಮ್ ಕಾಲಮ್ ಗಳಲ್ಲಿ ಹರಿದಾಡುತ್ತಿದೆಯೇ ಹೊರತು ನಾಗಚೈತನ್ಯ ಕುಟುಂಬದ ಕಡೆಯಿಂದಾಗಲಿ ಅಥವಾ ಶೋಭಿತಾ ಆಗಲಿ ಇದರ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
