Connect with us

Cinema News

ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್: ಟೀಕಾಕಾರರಿಗೆ ಟ್ವೀಟ್ ನಲ್ಲಿ ಬಿಸಿ ಮುಟ್ಟಿಸಿದ ಸಮಂತ

Published

on

ಟಾಲಿವುಡ್ ನಟಿ ಸಮಂತಾ ಹಾಗೂ ನಟ ನಾಗ ಚೈತನ್ಯ ದೂರವಾಗಿ 1 ವರ್ಷ ಆಗುತ್ತಾ ಬಂದಿದೆ. ಸದ್ಯ ಇಬ್ಬರೂ ವೃತ್ತಿ ಜೀವನದ ಕಡೆ ಗಮನ ನೀಡುತ್ತಿದ್ದ ನಟಿ ಸಮಂತ ಟಾಲಿವುಡ್ ಜೊತೆಗೆ ಬಾಲಿವುಡ್ ನಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಈ ಮಧ್ಯೆ
ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ವಿಚಾರದಲ್ಲಿ ಅನಗತ್ಯವಾಗಿ ಸಮಂತಾ ಅವರನ್ನು ನಾಗಚೈತನ್ಯ ಫ್ಯಾನ್ಸ್ ಎಳೆದು ತಂದಿದ್ದು, ಇದಕ್ಕೆ ಸಮಂತಾ ಖಡಕ್ ಉತ್ತರ ನೀಡಿದ್ದಾರೆ.
ಸಾಕಷ್ಟು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ಸಮಂತಾ ಹಾಗೂ ನಾಗ ಚೈತನ್ಯ ಜೋಡಿ ಕಳೆದ ವರ್ಷ ವಿಚ್ಚೇದನ ಪಡೆದುಕೊಂಡಿತ್ತು. ಇದೀಗ ಎಲ್ಲವನ್ನು ಮರೆತು ಈ ಜೋಡಿಗಳು ಹೊಸ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಕೆಲವರು ಇವರ ಗಾಯದ ಮೇಲೆ ಮತ್ತೆ ಬರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಸಮಂತಾ ತಕ್ಕ ಉತ್ತರ ನೀಡಿದ್ದಾರೆ.
ಸಮಂತಾ ಜತೆಗಿನ ವಿಚ್ಛೇದನ ನಂತರ ನಾಗಚೈತನ್ಯ ನಟಿ ಶೋಭಿತಾ ಧುಲಿಪಾಲ ಜತೆ ಪ್ರೀತಿಯಲ್ಲಿದ್ದಾರಂತೆ. ಸಾಕಷ್ಟು ದಿನಗಳಿಂದ ನಾಗ ಚೈತನ್ಯ ಶೋಭಿತಾ ಜತೆ ಡೇಟಿಂಗ್ನಲ್ಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ವಿಷ್ಯಕ್ಕೆ ಸಮಂತಾ ಅವರನ್ನು ಎಳೆದಿದ್ದಾರೆ. ಅದಕ್ಕೆ ಸಮಂತಾ ಟ್ವೀಟ್ ಮೂಲಕ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.
ಹೆಣ್ಣು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಅದು ನಿಜ ಎನ್ನುತ್ತೀರಿ. ಗಂಡು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಇದು ಹೆಣ್ಣಿನ ಕೆಲಸ ಎನ್ನುತ್ತೀರಿ. ಇದರಲ್ಲಿ ಭಾಗಿಯಾದವರೇ ಎಲ್ಲವನ್ನು ಬಿಟ್ಟು ಮುಂದೆ ಸಾಗಿದ್ದಾರೆ. ನೀವೂ ಇದನ್ನು ಬಿಟ್ಟು ಮುಂದೆ ಸಾಗಿ. ನಿಮ್ಮ ಕೆಲಸ ನೋಡಿಕೊಳ್ಳಿ, ನಿಮ್ಮ ಕುಟುಂಬದ ಕಡೆ ಗಮನ ನೀಡಿ ಎಂದು ಸಮಂತ ತಿರುಗೇಟು ನೀಡಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *