Connect with us

Cinema News

“ನಾನ್ ಪೋಲಿ” ಆದ್ರೂ ಸ್ನೇಹಕ್ಕೆ ಬದ್ದ

Published

on

ಯಾವುದೇ ಜವಾಬ್ದಾರಿ ಇಲ್ಲದೆ ಪೋಲಿ ಥರ ಇದ್ದ ಹುಡುಗನೊಬ್ಬನ ಜೀವನ ಹೇಗೆಲ್ಲಾ ತಿರುವು ತೆಗೆದುಕೊಂಡಿತು ಎಂಬ ಕಥಾನಕ ಹೊಂದಿರುವ ಚಿತ್ರ ನಾನ್ ಪೋಲಿ. ಎಂ.ಯಶವಂತ್ ಕಥೆ, ಚಿತ್ರಕಥೆ ಬರೆದು ಮೊದಲಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ನಾಗರಭಾವಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಹರೀಶ್‌ ವಿ. ಈ ಚಿತ್ರದ ನಾಯಕ ಮತ್ತು ನಿರ್ಮಾಪಕ, ದಿಶಾ ಶೆಟ್ಟಿ ನಾಯಕಿ, ಕೀರ್ತಿ ವರ್ಧನ್ ಅವರ ಕ್ಯಾಮೆರಾವರ್ಕ್ ಈ ಚಿತ್ರಕ್ಕಿದ್ದು, ಚೇತನ್ ಸಿ.ವಿ. ಸಂಗೀತ ಸಂಯೋಜಿಸುತ್ತಿದ್ದಾರೆ.

ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಯಶವಂತ್, ಈ ಚಿತ್ರಕ್ಕಾಗಿಯೇ ೬ ತಿಂಗಳ ಕಾಲ ವರ್ಕ್ ಮಾಡಿದೆ. ಒಳ್ಳೆ ಕಂಟೆಂಟ್ ಸಿಕ್ಕಿತು, ಜೊತೆಗೆ ಒಳ್ಳೆಯ ತಂಡವೂ ರಚನೆ ಆಯಿತು. ಸ್ನೇಹಿತರಿಬ್ಬರ ಕಥೆಯಿದು. ನಾಯಕ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಹೋದಾಗ ಅಲ್ಲಿ ಒಂದಷ್ಟು ತೊಂದರೆಗಳುಂಟಾಗುತ್ತವೆ. ಪೋಷಕರ ಕನಸುಗಳ ಕಾರಣದಿಂದ ಮಕ್ಕಳ ಜೀವನ ಹೇಗೆ ಹಾಳಾಗುತ್ತೆ ಎಂದು ಈ ಚಿತ್ರದಲ್ಲಿ ಹೇಳಹೊರಟಿದ್ದೇನೆ. ಸ್ನೇಹದ ಮಹತ್ವ, ತಾಯಿ ಸೆಂಟಿಮೆಂಟ್ ಮೇಲೆ ಚಿತ್ರದ ಕಥೆ ಸಾಗುತ್ತದೆ. ನಾಯಕ ಹರೀಶ ನೇರ ಮಾತು ಮತ್ತು ಯಾರಿಗೂ ಹೆದರದ ಸ್ವಭಾವದ ಹುಡುಗ, ಆತನಿಗೆ ತಾಯಿ ಹಾಗೂ ಸ್ನೇಹಿತ ಯಶ್ ಎರಡು ಕಣ್ಣುಗಳಿದ್ದ ಹಾಗೆ. ಇಂಥ ಸ್ನೇಹಿತರಿಬ್ಬರ ಸಂಬಂಧದಲ್ಲಿ ಹುಳಿ ಹಿಂಡುವ ಕೆಲಸ ವಿಲನ್ ಗಳಿಂದ ನಡೆಯುತ್ತದೆ. ನಂತರ ಕಥೆ ಹೇಗೆ ಟರ್ನ್ ಆಗುತ್ತದೆ ಅನ್ನೋದೇ ನಾನ್ ಪೋಲಿ ಚಿತ್ರದ ಕುತೂಹಲ. ತಾಯಿಯ ಪಾತ್ರದಲ್ಲಿ ಸ್ವಪ್ನರಾಜ್ ಹಾಗೂ ಖಳನಾಯಕನ ಪಾತ್ರದಲ್ಲಿ ಶೋಭರಾಜ್ ಅವರುಗಳು ನಟಿಸುತ್ತಿದ್ದಾರೆ. ಚಿತ್ರಕ್ಕೆ ೪೫ ದಿನಗಳ ಕಾಲ ಚಿತ್ರೀಕರಣದ ಪ್ಲಾನ್ ಹಾಕಿಕೊಳ್ಳಲಾಗಿದ್ದು, ಬೆಂಗಳೂರಿನಲ್ಲಿ ಟಾಕಿ ಮುಗಿಸಿ, ಹಾಡುಗಳಿಗೆ ಉತ್ತರ ಬಾರತದ ಕಡೆ ಹೋಗುವ ಯೋಜನೆಯಿದೆ ಎಂದರು.
ನಾಯಕ ಹಾಗೂ ನಿರ್ಮಾಪಕ ಹರೀಶ್ ಮಾತನಾಡಿ ಕಲಾವಿದನಾಗಬೇಕೆಂದು ೨೦೦ಕ್ಕೂ ಹೆಚ್ಚು ಆಡಿಷನ್ ಗಳಲ್ಲಿ ಭಾಗವಹಿಸಿದ್ದೆ, ಈ ಚಿತ್ರದ ಮೂಲಕ ನಾಯಕನಾಗುವ ಅವಕಾಶ ಸಿಕ್ಕಿದೆ. ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಹೋದ ನಂತರ ನನ್ನ ಲೈಫ್ ನಲ್ಲಿ ಏನೆಲ್ಲ ಬದಲಾವಣೆಯಾಗುತ್ತದೆ?, ಸ್ನೇಹಿತ ಯಶ್ ಬುದ್ದಿವಂತ, ಆ ಕಾರಣದಿಂದಲಾದರೂ ಮಗ ಒಂದಷ್ಟು ಓದಿಕೊಂಡರೆ ಸಾಕೆಂದು ಕನಸು ಕಾಣುವ ತಾಯಿಯ ಆಸೆ ಈಡೇರಿತೇ ಇಲ್ಲವೇ ಎಂದು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ ಎಂದರು.

ನಾಯಕಿ ದಿಶಾ ಶೆಟ್ಟಿ ಮಾತನಾಡಿ ಕಿರುಚಿತ್ರ ಅಲ್ಲದೆ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದೆ. ಮೊದಲಬಾರಿಗೆ ನಾಯಕಿಯಾಗಿದ್ದು, ಅಭಿನಯಕ್ಕೆ ಹೆಚ್ಚು ಅವಕಾಶವಿರುವ ಹೋಮ್ಲಿ‌ ಗರ್ಲ್ ಪಾತ್ರ ನನ್ನದೆಂದು ಹೇಳಿಕೊಂಡರು. ಛಾಯಾಗ್ರಾಹಕ ಕೀರ್ತಿವರ್ಧನ ಮಾತನಾಡಿ ಚಿತ್ರದಲ್ಲಿ ಲವ್ ಗಿಂತ ಸ್ನೇಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕ್ಯಾಮೆರಾವರ್ಕ್ ನಲ್ಲಿ ಹೊಸದಾಗಿ ಟ್ರೈ ಮಾಡುತ್ತಿದ್ದೇವೆ ಎಂದರು. ಸಂಗೀತ ನಿರ್ದೇಶಕ ಚೇತನ್ ಮಾತನಾಡಿ ರ್ಯಾಪ್ ಸಾಂಗ್ ಮಾಡಿದ್ದೆ, ನಿರ್ದೇಶಕರು ಬಂದು ನಮ್ಮ ಚಿತ್ರಕ್ಕೆ ಮ್ಯೂಸಿಕ್ ಮಾಡು ಎಂದರು. ದಿ ಬೆಸ್ಟ್ ಕೊಡಲು ಟ್ರೈ ಮಾಡುತ್ತಿದ್ದೇನೆ. ಟಪಾಂಗುಚಿ, ತಾಯಿ ಸೆಂಟಿಮೆಂಟ್, ಲವ್ ಸಾಂಗ್, ಐಟಮ್ ಸಾಂಗ್ ಸೇರಿ ೪ ಹಾಡುಗಳು ಚಿತ್ರದಲ್ಲಿವೆ ಎಂದರು,
ಖಳನಟರಾದ ಮೋಹನ್ ಗಿರಿ, ರಾಮೇಗೌಡ, ತಮ್ಮ ಪಾತ್ರಗಳ ಕುರಿತು ಹೇಳಿದರು. ಮುಬೈ, ಹೈದರಾಬಾದ್ ನಲ್ಲಿ ವರ್ಕ್ ಮಾಡಿದ್ದ ಭಾರ್ಗವ ಈ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡುತ್ತಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *