Connect with us

Cinema News

`ಗುಮ್ಮಡಿ ನರಸಯ್ಯ’ ಬಯೋಪಿಕ್ ಚಿತ್ರಕ್ಕೆ ಮುಹೂರ್ತ..ತೆಲುಗಿನಲ್ಲಿ ಶಿವಣ್ಣ ಹವಾ ಶುರು

Published

on

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಟಿಸುತ್ತಿರುವ ಮೊದಲ ತೆಲುಗು ಸಿನಿಮಾ ಗುಮ್ಮಡಿ ನರಸಯ್ಯ. 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಸರಳ ಜೀವನ ನಡೆಸಿದ ಆಂಧ್ರದ ಮಾಜಿ ಶಾಸಕ ಗುಮ್ಮಡಿ ನರಸಯ್ಯ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ಈ ಚಿತ್ರದ‌ ಮುಹೂರ್ತ ಸಮಾರಂಭ ಇಂದು ತೆಲಂಗಾಣದ ಪಾಲ್ವಂಚದಲ್ಲಿ ಅದ್ಧೂರಿಯಾಗಿ ನಡೆದಿದೆ.

ಗುಮ್ಮಡಿ ನರಸಯ್ಯ ಸಿನಿಮಾದ ಮುಹೂರ್ತದಲ್ಲಿ ಪಾತ್ರವರ್ಗದ ಜೊತೆಗೆ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಕವಿತಾ, ಮಲ್ಲು ಭಟ್ಟಿ ವಿಕ್ರಮಾರ್ಕ ಅವರ ಪತ್ನಿ ನಂದಿನಿ ಮಲ್ಲು ಮತ್ತು ಇತರ ಹಲವಾರು ರಾಜಕೀಯ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೀತಾ ಶಿವರಾಜ್ ಕುಮಾರ್ ಚಿತ್ರಕ್ಕೆ ಕ್ಲಾಪ್‌ ಮಾಡಿದರು, ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಮಲ್ಲು ಭಟ್ಟಿ ವಿಕ್ರಮಾರ್ಕ ಅವರ ಪತ್ನಿ ನಂದಿನಿ ಸ್ಕ್ರಿಪ್ಟ್ ನಿರ್ದೇಶಕರಿಗೆ ಹಸ್ತಾಂತರಿಸಿದರು.

ಮುಹೂರ್ತದ ಬಳಿಕ ಶಿವಣ್ಣ ಮಾತನಾಡಿ, “ಇಂದು ನಾನು ಅಂತಹ ಉದಾತ್ತ ಮನುಷ್ಯನನ್ನು ಚಿತ್ರಿಸಲು ನಿಜವಾಗಿಯೂ ಸಂತೋಷ ಮತ್ತು ಹೆಮ್ಮೆಪಡುತ್ತೇನೆ. ಈ ಅವಕಾಶಕ್ಕಾಗಿ ಪರಮೇಶ್ವರ್ ಅವರು ಮತ್ತು ಎನ್. ಸುರೇಶ್ ರೆಡ್ಡಿ ಅವರಿಗೆ ನನ್ನ ಧನ್ಯವಾದಗಳು. ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯನಂತೆಯೇ ಜನರ ಸೇವೆ ಸಲ್ಲಿಸಿದ್ದಾರೆ. ಅವರು ಯಾವಾಗಲೂ ‘ನಿಮಗಾಗಿ ಬದುಕಬೇಡಿ, ಇತರರಿಗಾಗಿ ಬದುಕಿ’ ಎಂದು ಹೇಳುತ್ತಿದ್ದರು. ನಾನು ಇತ್ತೀಚೆಗೆ ಗುಮ್ಮಡಿ ನರಸಯ್ಯ ಅವರ ಮನೆಗೆ ಭೇಟಿ ನೀಡಿದಾಗ, ನಾನು ನನ್ನ ತಂದೆಯ ಬಳಿಗೆ ಹಿಂತಿರುಗಿದಂತೆ ಭಾಸವಾಯಿತು. ಈ ಚಿತ್ರದಲ್ಲಿ ಅವರ ಪಾತ್ರದಲಿ ನಾನು ನಟಿಸುತ್ತಿರುವುದು ನನ್ನ ಆಶೀರ್ವಾದ. ನಾನು ಈ ಚಿತ್ರಕ್ಕಾಗಿ ತೆಲುಗು ಕಲಿಯುತ್ತಿದ್ದೇನೆ ಮತ್ತು ನನಗಾಗಿ ಡಬ್ಬಿಂಗ್ ಮಾಡುತ್ತೇನೆ. ನಿಮ್ಮ ಆಶೀರ್ವಾದ ನನಗೆ ಸಿಗಲಿ ಎಂದು ನಾನು ಭಾವಿಸುತ್ತೇನೆ. ಈ ಚಿತ್ರವು ಎಲ್ಲಾ ರಾಜಕೀಯ ನಾಯಕರಿಗೆ ಸ್ಫೂರ್ತಿಯಾಗಲಿದೆ” ಎಂದರು.

ಗುಮ್ಮಡಿ ನರಸಯ್ಯ ಮಾತನಾಡಿ, “ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಮತ್ತು ಆ ಬದಲಾವಣೆ ನಮ್ಮೊಳಗೇ ಆರಂಭವಾಗಬೇಕು. ನಾವು ಒಬ್ಬರನ್ನೊಬ್ಬರು ಮೋಸಗೊಳಿಸುವುದನ್ನು ಕೊನೆಗಾಣಿಸಬೇಕು – ಅದು ನನ್ನ ಏಕೈಕ ಆಸೆ. ನಾನು ಮಹಾನ್ ನಾಯಕನಲ್ಲ; ನಾನು ಎಲ್ಲರಂತೆ ಸಾಮಾನ್ಯ ವ್ಯಕ್ತಿ. ನನ್ನನ್ನು ವೈಭವೀಕರಿಸುವ ಬದಲು, ಚಿತ್ರವು ನನ್ನ ನಂಬಿಕೆಗಳನ್ನು ತಿಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಪರಮೇಶ್ವರ್ ಅವರು ಬಾಲ್ಯದಿಂದ ಇಲ್ಲಿಯವರೆಗೆ ನನ್ನ ಜೀವನವನ್ನು ಅಧ್ಯಯನ ಮಾಡಿ ಈ ಚಿತ್ರವನ್ನು ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಅವರು ನನ್ನನ್ನು ಚಿತ್ರಿಸುತ್ತಿರುವುದು ನನಗೆ ಸಂತೋಷವಾಗಿದೆ. ಈ ಚಿತ್ರ ಬಿಡುಗಡೆಯಾದ ನಂತರ ಸಮಾಜ ಮತ್ತು ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿ ಎಂದು ಆಶಿಸುತ್ತೇನೆ” ಎಂದರು.

ನಿರ್ದೇಶಕ ಪರಮೇಶ್ವರ್ ಹಿವ್ರಾಳೆ ಅವರು ಗುಮ್ಮಡಿ ನರಸಯ್ಯ ಅವರ ಜೀವನಗಾಥೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರವಲ್ಲಿಕಾ ಆರ್ಟ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎನ್. ಸುರೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿದ್ದ ಫಸ್ಟ್ ಲುಕ್ ನಲ್ಲಿ ಶಿವಣ್ಣನ ವಿಶೇಷವಾಗಿ ಕಾಣಿಸಿಕೊಂಡಿದ್ದರು. ಧೋತಿ ಉಟ್ಟು. ಶರ್ಟ್ ಹಾಕಿದ್ದಾರೆ. ಹೆಗಲ ಮೇಲೆ ಒಂದು ಕೆಂಪು ಬಣ್ಣದ ಶಾಲು ಇದೆ. ಓಡಾಡೋಕೆ ಒಂದು ಸೈಕಲ್ ಇದೆ. ಇದು ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್.

Spread the love

Continue Reading
Click to comment

Leave a Reply

Your email address will not be published. Required fields are marked *