Connect with us

Cinema News

Mr & Mrs Rajahuli | ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಮಿಸ್ಟರ್ ಅಂಡ್ ಮಿಸಸ್ ರಾಜಾ ಹುಲಿ

Published

on

ರಾಜಾಹುಲಿ ಸಂದರ್ಭದಲ್ಲಿ ಕೆ.ಮಂಜು ಜೊತೆ ಕೆಲಸ ಮಾಡಿದ್ದ ಹೊನ್ನರಾಜ್ ಈಗ ನಿರ್ದೇಶಕರಾಗಿದ್ದಾರೆ. ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ ಹೆಸರಿನ ಈ ಚಿತ್ರಕ್ಕೆ ಅವರೇ ನಿರ್ದೇಶನ ಮಾಡುವ ಜೊತೆಗೆ ನಾಯಕನಾಗೂ ನಟಿಸಿದ್ದಾರೆ. ಹೊನ್ನರಾಜ್ ಪ್ರಥಮ ಬಾರಿಗೆ ಆಕ್ಷನ್ ಕಟ್ ಹೇಳುವ ಜೊತೆಗೆ ನಾಯಕ, ನಿರ್ಮಾಪಕರೂ ಆಗಿರುವ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಕುರಿತು ಮಾಹಿತಿ ಹಂಚಿಕೊಂಡ ಹೊನ್ನರಾಜ್ , ಸಿನಿಮಾ ಮಾಡಬೇಕು ಎನ್ನುವುದು ನನ್ನ ಬಹಳ ವರ್ಷದ ಕನಸು. ಕುಟುಂಬದಲ್ಲಿ ನಡೆದ ನೈಜ ಘಟನೆ ಆಧರಿಸಿ ಚಿತ್ರ ಮಾಡಲಾಗಿದೆ. ಶೀರ್ಷಿಕೆಗೆ ನ್ಯಾಯ ಒದಗಿಸಿದ್ದು, ಒಳ್ಳೆಯ ಚಿತ್ರ ನೀಡಲಿದ್ದೇವೆ.

ಯಾವುದೇ ತೊಂದರೆ ಇಲ್ಲದೆ ಚಿತ್ರೀಕರಣ ಪೂರ್ಣಗೊಂಡಿದೆ. ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಚಿತ್ರ ಇದಾಗಿದ್ದು ಇದರಲ್ಲಿ ನಾಯಕ ಯಶ್ ಅಭಿಮಾನಿ, ಸ್ನೇಹಕ್ಕೆ ಹೆಚ್ಚು ಕೊಡುವವನು‌, ಸಮಾಜ ಸೇವೆಯಲ್ಲಿರುವ ನಾಯಕ ಮದುವೆ ಆಗ್ತಾನೋ ಇಲ್ಲವೋ, ಎನ್ನುವುದೇ ಚಿತ್ರದ ತಿರುಳು.ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂದಿದೆ ಎಂದು ಮಾಹಿತಿ ಹಂಚಿಕೊಂಡರು. ಈ ಸಙದ ಈ ಚಿತ್ರಕ್ಕೆ ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಹಾಡೊಂದನ್ನು 12 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಈಗಾಗಲೇ ಒಂದೂ ಕಾಲು ಕೋಟಿ ಖರ್ಚಾಗಿದೆ. ನಿರ್ಮಾಣದಲ್ಲಿ ಇಡೀ ಕುಟುಂಬ ಸಹಕಾರ ನೀಡಿದ್ದಾರೆ ಎಂದರು.

ನಾಯಕಿ ಶೃತಿ ಬಬಿತ ಮಾತನಾಡಿ, ಎರಡು ವರ್ಷದ ನಂತರ ನಟಿಸಿದ್ದೇನೆ. ಮೊದಲು ನನ್ನ ಹೆಸರು ಶೃತಿರಾಜ್ ಅಂತಿತ್ತು. ಈಗ ಶೃತಿ ಬಬಿತಾ ಅಂತ ಇಟ್ಟುಕೊಂಡಿದ್ದೇನೆ. ಮಾರ್ಡನ್, ಬಜಾರಿ ಹುಡುಗಿ, ಹಳ್ಳಿಯಲ್ಲಿ ನಾಯಕ ಬುದ್ದಿ ಕಲಿಸುತ್ತಾರೆ ಎಂದು ಮಾಹಿತಿ ಹಂಚಿಕೊಂಡರು.
ಸಂಜಯ್ ಶ್ರೀನಿವಾಸ ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ವಿನು ಮನಸು ಅವರ ಸಂಗೀತ, ಶಿವಪುತ್ರ ಅವರ ಛಾಯಾಗ್ರಹಣ, ಗಿರೀಶ್ ನೃತ್ಯ ನಿರ್ದೇಶಕರಾಗಿ ಕೆಲಸ ನಾಡಿದ್ದಾರೆ.

ಕೊನೆಯಲ್ಲಿ ಮಾತನಾಡಿದ ಕೆ.ಮಂಜು, ಈಗ ಸಿನಿಮಾ ನೋಡಲು ಯಾರೂ ಬರುತ್ತಿಲ್ಲ. ನೀವು ನೋಡಿ ಖರ್ಚು ಮಾಡಿ, ಸಾಲ ತಗೊಂಡು ಮಾಡೋದು ಸರಿಯಲ್ಲ ಎಂದು‌ ನೇರವಾಗಿ ನಿರ್ದೇಶಕ ಹೊನ್ನರಾಜ್ ಗೆ ಬುದ್ದಿವಾದ ಹೇಳಿದರು. ಅಲ್ಲದೆ ಈಗಾಗಲೇ ಸಾಕಷ್ಟು ಮಲ್ಪಿಫ್ಲೆಕ್ಸ್ ಗಳು ಮುಚ್ಚುತ್ತಿವೆ. ರೆಗ್ಯೂಲರ್ ನಿರ್ಮಾಪಕರು ಯಾರೂ ಈಗ ಚಿತ್ರ ಮಾಡ್ತಾ ಇಲ್ಲ. ನಿಮಗೆ ಆಸೆ ಇದ್ದರೆ ಬೇರೆ ಕೆಲಸ ಮಾಡಿ, ಎಲ್ಲರ ಬಳಿ ಹಣ ಪಡೆದು ಅವರಿಗೆ ಕೊಡದಿದ್ದರೆ ತೊಂದರೆ ಆಗಲಿದೆ ಎಂದೂ ಹೇಳಿದರು. ಕಲಾವಿದರಾದ ಮೈಸೂರು ಮಂಜುಳ , ರೇಖಾದಾಸ್ ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ

Spread the love

Continue Reading
Click to comment

Leave a Reply

Your email address will not be published. Required fields are marked *