Connect with us

Cinema News

‘ಮೆಹಬೂಬಾ’ನಿಗೆ ಮಾರ್ಟಿನ್ ಸಾಥ್…ಮಾರ್ಡನ್ ರೈತ ಶಶಿ ಚಿತ್ರದ ಟೈಟಲ್ ಟ್ರ್ಯಾಕ್ ಅನಾವರಣ

Published

on

ಮಾಡ್ರನ್ ರೈತನಿಂದ ಶಶಿ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಮೆಹಬೂಬಾ ಚಿತ್ರದ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮಾರ್ಚ್ 15ಕ್ಕೆ ಶಶಿ ತಮ್ಮ ಕನಸಿನ ಸಿನಿಮಾವನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದಾರೆ. ಚಿತ್ರ ಬಿಡುಗಡೆಗೆ ದಿನಗಣನೆ ಬಾಕಿ ಇದ್ದು, ಭರದಿಂದ ಪ್ರಚಾರ ಕಾರ್ಯ ಸಾಗುತ್ತಿದೆ. ಅದರ ಭಾಗವಾಗಿ ಮೆಹಬೂಬಾ ಟೈಟಲ್ ಟ್ರ್ಯಾಕ್ ಬಿಡುಗಡೆ‌ ಮಾಡಲಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೈಟಲ್ ಟ್ರ್ಯಾಕ್ ಅನಾವರಣ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಕಠಿಣ ಪರಿಶ್ರಮ ಹಾಗೂ ಪ್ರಯತ್ನ ಕಾಣುತ್ತಿದ್ದು, ಪ್ರತಿಯೊಬ್ಬರು ಬೆಂಬಲಿಸಿ ಎಂದು ಧ್ರುವ ಚಿತ್ರತಂಡದ ಶ್ರಮವನ್ನು ಹೊಗಳಿದ್ದಾರೆ‌.

ಮೆಹಬೂಬಾ ಟೈಟಲ್ ಟ್ರ್ಯಾಕ್ ಗೆ ರಘು ವಿ ಶಾಸ್ತ್ರೀ ಸಾಹಿತ್ಯ ಬರೆದಿದ್ದು, ಜಸ್ಕರಣ್ ಸಿಂಗ್ ಕಂಠ ನೀಡಿದ್ದಾರೆ. ಮ್ಯಾಥ್ಯೂಸ್‌ ಮನು ಟ್ಯೂನ್ ಹಾಕಿದ್ದಾರೆ. ಶಶಿ ಹಾಗೂ ಪಾವನಾ ಗೌಡ ಟೈಟಲ್ ಟ್ರ್ಯಾಕ್ ಗೆ ಹೆಜ್ಜೆ ಹಾಕಿದ್ದು, ಕಿರಣ್ ಹಂಪಾಪುರ ಸುಂದರ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ಸರ್ವ ಧರ್ಮ ಸಮಾನತೆ ಸಂದೇಶವನ್ನೊತ್ತ ಮೆಹಬೂಬಾ, ಕೇರಳದಲ್ಲಿ ನಡೆದ ಸತ್ಯಘಟನೆಯನ್ನಾಧರಿಸಿದ ಸಿನಿಮಾ. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಪಾವನಾ ಗೌಡ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ.

ಮೆಹಬೂಬಾ ಚಿತ್ರಕ್ಕೆ ಶಶಿ ಕೇವಲ ನಾಯಕರಷ್ಟೇ ಅಲ್ಲ, ಚಿತ್ರದ ನಿರ್ಮಾಪಕರು ಹೌದು. ದಕ್ಷ್ ಎಂಟರ್ಟೇನ್ಮೆಂಟ್ಸ್’ ಸಹಯೋಗದಲ್ಲಿ ‘ಬಾಲಾಜಿ ಮೋಷನ್ ಪಿಕ್ಚರ್ಸ್’ ಬ್ಯಾನರ್ ಮೂಲಕ ‘ಮೆಹಬೂಬಾ’ ಚಿತ್ರವನ್ನು ಅವರೇ ನಿರ್ಮಾಣ ಮಾಡಿದ್ದಾರೆ. ಅನೂಪ್ ಆಂಟೋನಿ ಈ ಚಿತ್ರದ ನಿರ್ದೇಶಕರು. ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನ ಹಾಗೂ ಕಿರಣ್ ಹಂಪಾಪುರ ಛಾಯಾಗ್ರಹಣ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

Spread the love

Continue Reading