Cinema News

ಮೆಗಾ ಸ್ಟಾರ್ ಚಿರಂಜೀವಿಗೆ ಕೆವಿಎನ್ ಸಿನಿಮಾ ನಿರ್ಮಾಣ

Published

on

ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಇದೀಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ನಿರ್ಮಾಣ ಹಾಗೂ ವಿತರಣೆಯಲ್ಲಿ ದೊಡ್ಡ ಹೆಸರು ಮಾಡಿರುವ ಈ ಸಂಸ್ಥೆ ಈಗ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ.

 

 

 

ಬಹುನಿರೀಕ್ಷಿತ ಟಾಕ್ಸಿಕ್, ಕೆಡಿ ಸಿನಿಮಾ ನಿರ್ಮಿಸುತ್ತಿರುವ ಕೆವಿಎನ್ ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರ ನಿರ್ಮಾಣ ಮಾಡುವ ಮೂಲಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದೆ. ಇದೀಗ ತೆಲುಗು ಚಿತ್ರರಂಗ ದತ್ತ ಮುಖ ಮಾಡಿರುವ ಕೆವಿಎನ್ ಚಿರಂಜೀವಿ ಅವರ 158ನೇ ಸಿನಿಮಾಗೆ ಬಂಡವಾಳ ಹೂಡಲು ಮುಂದಾಗಿದೆ.

ಮೆಗಾ ಸ್ಟಾರ್ 70ನೇ ಹುಟ್ಟುಹಬ್ಬದ ವಿಶೇಷವಾಗಿ ಈ ಪ್ರಾಜೆಕ್ಟ್ ಅನೌನ್ಸ್ ಮಾಡಲಾಗಿದೆ. ಈ ಹಿಂದೆ ವಾಲ್ತೇರು ವೀರಯ್ಯ ಸಿನಿಮಾ ಮಾಡಿದ್ದ ಬಾಬಿ ಕೊಲ್ಲಿ ಮತ್ತೊಮ್ಮೆ‌ ಚಿರುಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

 

 

 

 

ಚಿರಂಜೀವಿ-ಬಾಬಿ-ಕೆವಿಎನ್ ಕಾಂಬಿನೇಷನ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮೂಡಿ ಬರಲಿದೆ. ಈ ಚಿತ್ರವನ್ನು ದಸರಾಗೆ ಲಾಂಚ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ವರ್ಷದ ಕೊನೆಗೆ ಶೂಟಿಂಗ್ ಆರಂಭವಾಗಲಿದೆ.

Spread the love
Click to comment

Copyright © 2019 PopcornKannada.com