Connect with us

Cinema News

“ವೃಷಭ” ಗೂಳಿ ತರಹ ಮುನ್ನುಗ್ಗಲಿ. ಸಮರ್ಜಿತ್ ಲಂಕೇಶ್ ಅವರಿಗೂ ಒಳ್ಳೆಯದಾಗಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ .

Published

on

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಮೋಹನ್‌ಲಾಲ್‌ ಅಭಿನಯದ ‘ವೃಷಭ’ ಇದೇ ಬರುವ ಡಿಸೆಂಬರ್ 25 ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ. ತಂದೆ-ಮಗನ ನಡುವಿನ ಬಾಂಧವ್ಯದ ಎಮೋಷನಲ್ ಕಥಾಹಂದರ ಹೊಂದಿರುವ ಈ ಸಿನಿಮಾ, ಭವ್ಯತೆ ಮತ್ತು ಸಾಹಸ ದೃಶ್ಯಗಳ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಈ ಚಿತ್ರದ ಸಮಾರಂಭಕ್ಕೆ ಸನ್ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಈ ಸಮಯದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಲಂಕೇಶ್ ಅವರ ಮೊಮ್ಮಗ, ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್, ಖ್ಯಾತ ನಟ ಮೋಹನ್ ಲಾಲ್ ಅವರೊಂದಿಗೆ ನಟಿಸಿರುವ “ವೃಷಭ” ಚಿತ್ರ ಇದೇ ಡಿಸೆಂಬರ್ 25ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇಡೀ ದೇಶದಾದ್ಯಂತ “ವೃಷಭ” ಚಿತ್ರ ಗೂಳಿಯಂತೆ ಮುನ್ನುಗ್ಗಲಿ. ಸಮರ್ಜಿತ್ ಲಂಕೇಶ್ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಇತ್ತೀಚೆಗೆ ಮುಂಬೈಗೆ ಹೋಗಿದ್ದಾಗ ಬಾಲಿವುಡ್ ನವರು ಕನ್ನಡ ಚಿತ್ರಗಳ ಬಗ್ಗೆ ಆಡಿದ ಉತ್ತಮ ಮಾತುಗಳನ್ನು ಕೇಳಿ ಸಂತೋಷವಾಯಿತು ಎಂದು ಉಪ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ತಾರಾಗಣ

ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಯುವ ಪ್ರತಿಭೆ ಸಮರ್ಜಿತ್ ಲಂಕೇಶ್, ರಾಗಿಣಿ ದ್ವಿವೇದಿ, ನಯನ್ ಸಾರಿಕಾ, ಅಜಯ್, ನೇಹಾ ಸಕ್ಸೇನಾ, ಗರುಡ ರಾಮ್, ವಿನಯ್ ವರ್ಮಾ, ಆಲಿ, ಅಯ್ಯಪ್ಪ ಪಿ. ಶರ್ಮಾ ಮತ್ತು ಕಿಶೋರ್ ಅವರಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ.

ತಾಂತ್ರಿಕ ತಂಡ ಹೀಗಿದೆ
ಸಂಗೀತ: ಸ್ಯಾಮ್ ಸಿ.ಎಸ್.
ಧ್ವನಿ ವಿನ್ಯಾಸ: ಆಸ್ಕರ್ ಪ್ರಶಸ್ತಿ ವಿಜೇತ ರೇಸುಲ್ ಪೂಕುಟ್ಟಿ.
ಸಂಭಾಷಣೆ: ಎಸ್.ಆರ್.ಕೆ, ಜನಾರ್ದನ್ ಮಹರ್ಷಿ ಮತ್ತು ಕಾರ್ತಿಕ್.
ಸಾಹಸ ನಿರ್ದೇಶನ: ಪೀಟರ್ ಹೆನ್, ಸ್ಟಂಟ್ ಸಿಲ್ವಾ, ಗಣೇಶ್ ಮತ್ತು ನಿಖಿಲ್.

ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ಕನೆಕ್ಟ್ ಮೀಡಿಯಾ ಪ್ರೆಸೆಂಟ್ಸ್ ಅಡಿಯಲ್ಲಿ, ಅಭಿಷೇಕ್ ಎಸ್. ವ್ಯಾಸ್ ಸ್ಟುಡಿಯೋಸ್ ಸಹಯೋಗದೊಂದಿಗೆ ಈ ಸಿನಿಮಾ ಮೂಡಿಬರುತ್ತಿದೆ. ಶೋಭಾ ಕಪೂರ್, ಏಕ್ತಾ ಆರ್. ಕಪೂರ್, ಸಿ.ಕೆ. ಪದ್ಮಕುಮಾರ್, ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್. ವ್ಯಾಸ್, ಪ್ರವೀರ್ ಸಿಂಗ್, ವಿಶಾಲ್ ಗುರ್ನಾನಿ ಮತ್ತು ಜೂಹಿ ಪರೇಖ್ ಮೆಹ್ತಾ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಮಲ್ ಲಹೋಟಿ ಅವರು ಸಹ-ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಂದಕಿಶೋರ್‌ ಈ ಚಿತ್ರದ ನಿರ್ದೇಶಕರು.

‘ವೃಷಭ’ ಚಿತ್ರವನ್ನು ಏಕಕಾಲದಲ್ಲಿ ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಕನ್ನಡ ಮತ್ತು ಹಿಂದಿ ಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. 2025ರ ಅತಿದೊಡ್ಡ ಸಿನಿಮೀಯ ಅನುಭವವನ್ನು ನೀಡಲು ಚಿತ್ರತಂಡ ಸಜ್ಜಾಗಿದೆ. ಅಂದಹಾಗೆ ಡಿಸೆಂಬರ್ 25 ರಂದು ವಿಶ್ವದಾದ್ಯಂತ ಈ ಸಿನಿಮಾ ಬಿಡುಗಡೆ ಆಗಲಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *