Connect with us

Cinema News

“ಮಾಂಜ್ರಾ” ಚಿತ್ರದ ಆಡಿಯೋ ಬಿಡುಗಡೆ

Published

on

ಬೀದರ್ ಜಿಲ್ಲೆಯ ಬಳಿ ಇರುವ ಒಂದು ನದಿಯ ಹೆಸರು ಮಾಂಜ್ರಾ, ಬೆಳಗಾಂ ಜಿಲ್ಲೆಯ ಗ್ರಾಮದಲ್ಲಿ ನಡೆದಂತಹ ಒಂದು ನೈಜ ಪ್ರೇಮಕಥಾನಕವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರದ ಹೆಸರು ಕೂಡ ಮಾಂಜ್ರಾ. ತೆಲುಗಿನ ಮುತ್ತುರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದು ಆಕ್ಷ್ಯನ್ ಕಟ್ ಹೇಳಿದ್ದಾರೆ. ಬೆಳಗಾಂ ಮೂಲದವರೇ ಆದ ರಂಜಿತ್‍ಸಿಂಗ್ ಹಾಗೂ ಅಪೂರ್ವ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಖಳನಾಯಕನಾಗಿ ರಂಜನ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಬಿಡುಗಡೆಗೆ ಸಿದ್ದವಾಗಿದೆ. ಕಳೆದ ವಾರ ಈ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ನಡೆಯಿತು. ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ನರ್ಸ್ ಜಯಲಕ್ಷ್ಮಿ ಹಾಗೂ ಲಹರಿ ವೇಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾಂಜ್ರಾ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ವಿಶೇಷವಾಗಿ ಈ ಸಮಾರಂಭಕ್ಕೆ ಘಟನೆಯ ಮೂಲ ವ್ಯಕ್ತಿ ಶಂಕರ್‍ರನ್ನು ಕರೆತರಲಾಗಿತ್ತು. ಆದರೆ ಆತ ಈಗ ಮಾನಸಿಕ ಅಸ್ವಸ್ಥನಾಗಿದ್ದು ಏನೊಂದೂ ಮಾತನಾಡದ ಸ್ಥಿತಿಯಲ್ಲಿದ್ದ.

ಈ ಸಂದರ್ಭದಲ್ಲಿ ನಿರ್ದೇಶಕ ಮುತ್ತುರಾಜ್ ಮಾತನಾಡುತ್ತ ಕೆಲ ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಬಂದಿದ್ದ ಪ್ರೇಮ ಪ್ರಕರಣವನ್ನು ಇಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇನೆ. ಇದು ಬೆಳಗಾವಿಯ ಗ್ರಾಮೀಣ ಭಾಗದಲ್ಲಿ ನಡೆದ ನೈಜ ಪ್ರೇಮಕಥೆ, ಖಳನಟ ರಂಜನ್ ನನ್ನ ಸ್ನೇಹಿತರು ಅವರ ಮೂಲಕ ನಿರ್ಮಾಪಕ ರವಿ ಪೂಜಾರ್ ಅವರು ಸಿಕ್ಕಿದರು. ಈ ಕಥೆ ನಡೆದ ಊರಿನಲ್ಲಿ, ಆ ಹುಡುಗಿ ವಾಸವಿದ್ದ ಮನೆಯಲ್ಲಿಯೇ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ಚಿತ್ರದ ನಾಯಕ ಒಬ್ಬ ಹಿಂದೂ. ನಾಯಕಿ ಮರಾಠಿಯವಳು. ಇವರಿಬ್ಬರ ನಡುವಿನ ದುರಂತ ಪ್ರೇಮಕಥೆ ಈ ಚಿತ್ರದಲ್ಲಿದೆ. ಬೆಳಗಾಂ, ಕಾರವಾರ, ಕೇರಳ ಹಾಗೂ ಗೋವಾ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು.

ನಾಯಕ ನಟ ರಂಜಿತ್ ಮಾತನಾಡಿ ಈ ಹಿಂದೆ ಕೆಲ ಸೀರಿಯಲ್‍ಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದೆ, ಇದೇ ಮೊದಲಬಾರಿಗೆ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನೀನಾಸಂ ರಂಗಶಾಲೆಯಲ್ಲಿ ಆಕ್ಟ್ಯಿಂಗ್ ಕಲಿತ ರಂಜಿತ್ ಈ ಚಿತ್ರದಲ್ಲಿ ದುರಂತ ನಾಯಕನಾಗಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಮೂಲತ: ಮರಾಠಿ ಹುಡುಗಿಯಾದ ನಾಯಕಿ ಅಪೂರ್ವ ಅವರಿಗೆ ಇದು ಮೊದಲ ಚಿತ್ರ. ಚಿತ್ರದಲ್ಲೂ ಸಹ ನಾನು ಮರಾಠಿ ಹುಡುಗಿಯ ಪಾತ್ರ ನಿರ್ವಹಿಸಿದ್ದೇನೆ, ದುರಂತ ನಾಯಕಿಯ ಪಾತ್ರ ಎಂದು ಹೇಳಿಕೊಂಡರು.

ಈ ಚಿತ್ರವನ್ನು ರವಿ ಅರ್ಜುನ್ ಪೂಜಾರ್ ಅವರು ನಿರ್ಮಾಣ ಮಾಡಿದ್ದಾರೆ. ಸವದತ್ತಿ ಮೂಲದ ರವಿ ಅರ್ಜುನ್ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ರಂಜನ್ ಮೂಲಕ ಈ ನಿರ್ದೇಶಕರು ಪರಿಚಯವಾಗಿ ಕಥೆ ಹೇಳಿದರು. ಕಥೆ ಕೇಳಿ ಇಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಮುಗ್ಧ ಪ್ರೇಮಿಗಳು ಹಿರಿಯರ ಸ್ವಾರ್ಥಕ್ಕೆ ಹೇಗೆ ಬಲಿಯಾದರು ಎಂದು ಈ ಚಿತ್ರ ಹೇಳುತ್ತದೆ. ಚಿನ್ಮಯ್ ಎಂ. ರಾವ್ ಈ ಚಿತ್ರದ ಹಾಡುಗಳಿಗೆ 4 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *