Cinema News
ಬಿಲ್ ಗೇಟ್ಸ್ ಭೇಟಿ ಮಾಡಿದ ಮಹೇಶ್ ಬಾಬು ದಂಪತಿ: ಏನಿದರ ಹಿಂದಿನ ಉದ್ದೇಶ?

ನಟ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ಸಕ್ಸಸ್ ಆಗಿದ್ದು ಇದೀಗ ಮಹೇಶ್ ಬಾಬು ತಮ್ಮ ಕುಟುಂಬದ ಜೊತೆ ವಿದೇಶಕ್ಕೆ ತೆರಳಿದ್ದಾರೆ. ಈ ವೇಳೆ ಮಹೇಶ್ ಬಾಬು ತಮ್ಮ ಪತ್ನಿ ನಮೃತ ಅವರೊಂದಿಗೆ ಉದ್ಯಮಿ ಬಿಲ್ ಗೇಟ್ಸ್ ಅವರನ್ನ ಭೇಟಿ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಬಿಲ್ ಗೇಟ್ಸ್ ಭೇಟಿಯ ಫೋಟೋವನ್ನ ಹಂಚಿಕೊಂಡಿರುವ ಮಹೇಶ್ ಬಾಬು, `ಮಾನ್ಯ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಪ್ರಪಂಚ ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಇವರು ಒಬ್ಬರು. ನಿಜಕ್ಕೂ ಇವರೂ ಸ್ಪೂರ್ತಿ’ ಎಂದು ಬರೆದುಕೊಂಡಿದ್ದಾರೆ.
ಮಹೇಶ್ ಬಾಬು ಹಾಗೂ ಬಿಲ್ ಗೇಟ್ಸ್ ಭೇಟಿಯ ಬೆನ್ನಲ್ಲೇ ಬಿಲ್ ಗೇಟ್ಸ್ ಬಯೋಪಿಕ್ ಕುರಿತು ಸಖತ್ ಸದ್ದು ಮಾಡುತ್ತಿದೆ. ಅದಕ್ಕಾಗಿ ಮಹೇಶ್ ಬಾಬು ಮತ್ತು ಬಿಲ್ ಗೇಟ್ಸ್ ಭೇಟಿಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Continue Reading