Cinema News
ಆಗಸ್ಟ್ ನಲ್ಲಿ ‘ಮದಕರಿನಾಯಕ’ನಿಗೆ ಮುಹೂರ್ತ

ದರ್ಶನ್ ನಟಿಸುತ್ತಿರುವ ಗಂಡುಗಲಿ ಮದಕರಿನಾಯಕ ಸಿನಿಮಾ ಚಿತ್ರೀಕರಣ ಆಗಸ್ಟ್‌ನಿಂದ ಆರಂಭವಾಗಲಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ.
ಹಂಸಲೇಖ ಸಂಗೀತ ನೀಡುತ್ತಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಮತ್ತು ಬರಹಗಾರರ ತಂಡ ಈಗಾಗಲೇ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿದೆ.
ಚಿತ್ರದುರ್ಗದ ಖ್ಯಾತ ಕಾದಂಬರಿಕಾರ ಬಿ ಎಲ್ ವೇಣು ಇದಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆಯುತ್ತಿದ್ದಾರೆ. ಕಲಾ ನಿರ್ದೇಶಕ ಅರುಣ್ ಸಾಗರ್ ಈಗಾಗಲೇ ಸೆಟ್ ಹಾಕಲು ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ಧಾರೆ.
ಆಗಸ್ಟ್‌ನಲ್ಲಿ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಲಿದ್ದು, ಇದೇ ಸಮಯದಲ್ಲಿ ಗಂಡುಗಲಿ ಮದಕರಿನಾಯಕ ಕೂಡಾ ಸೆಟ್ಟೇರಲಿದೆ. ಒಟ್ಟಿನಲ್ಲಿ ಆಗಸ್ಟ್ ಡಿ ಬಾಸ್ ಅಭಿಮಾನಿಗಳಿಗೆ ಹಬ್ಬದ ತಿಂಗಳಾಗಲಿದೆ.

Continue Reading