Box Office
ಬಾಕ್ಸ್ ಆಫೀಸ್‌ನಲ್ಲಿ ಸಿಕ್ಕಾಪಟ್ಟ ಸದ್ದು ಮಾಡ್ತಾ ಇದೆ ‘ಕುರುಕ್ಷೇತ್ರ’

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 50ನೇ ಸಿನಿಮಾ ‘ಕುರುಕ್ಷೇತ್ರ’ ಬಿಡುಗಡೆಯಾದ ದಿನದಿಂದಲೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ರಾಜ್ಯದೆಲ್ಲೆಡೆ ಅದ್ಬುತ ಗಳಿಕೆ ಮಾಡುತ್ತಿದೆ. ಇದೇ ಸಮಯದಲ್ಲಿ ಕೆನಡಾ, ಅಮೆರಿಕಾದಲ್ಲೂ ಸಿನಿಮಾವನ್ನು ಅಭಿಮಾನಿಗಳು ನೋಡಿ ಖುಷಿಯಾಗಿದ್ದಾರೆ.
ದರ್ಶನ್, ಅರ್ಜುನ್ ಸರ್ಜಾ, ನಿಖಿಲ್‌ಕುಮಾರ್, ಸ್ನೇಹಾ, ಶಶಿಕುಮಾರ್, ರವಿಚಂದ್ರನ್, ಅಂಬರೀಷ್ ಸೇರಿದಂತೆ ಸಾಕಷ್ಟು ಮಂದಿ ನಟಿಸಿರುವ ಈ ಸಿನಿಮಾ ಈಗಾಗಲೇ ಕೆನಡಾ, ಆಸ್ಟ್ರೇಲಿಯಾ, ಅಮೇರಿಕಾಗಳಲ್ಲಿ ಬಿಡುಗಡೆಯಾಗಿದೆ. ಅಲ್ಲಿಯೂ ಅಭಿಮಾನಿಗಳು ತುಂಬಿದ ಗೃಹದಲ್ಲಿ ಸಿನಿಮಾವನ್ನು ನೋಡುತ್ತಿದ್ದಾರೆ. ಅಮೇರಿಕ ಒಂದರಲ್ಲೇ 4 ದಿನಕ್ಕೆ 22 ಲಕ್ಷ ಗಳಿಕೆ ಕಂಡಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಕಾರಣ ಕೊಂಚ ಕಮ್ಮಿ ಕಲೆಕ್ಷನ್ಸ್ ಇದೆ ಅದು ಬಿಟ್ಟರೆ ಚಿತ್ರ ಬಿಕೆಟಿ ಮತ್ತು ಮೈಸೂರು ಭಾಗದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿ 6ನೇ ದಿನವೂ ಚಿತ್ರಕ್ಕೆ 380ಕ್ಕೂ ಹೆಚ್ಚು ಶೋಗಳು ಸಿಕ್ಕಿದೆ.
ಸದ್ಯದ ಮಾಹಿತಿ ಪ್ರಕಾರ ಸಿನಿಮಾ ಮೊದಲ ವಾರವೇ 30 ಕೋಟಿ ಗಳಿಸುವತ್ತ ಸಾಗಿದೆ. ಹಾಗಾಗಿ 2019ರ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಎಂದು ಕುರುಕ್ಷೇತ್ರವನ್ನು ಜನ ಪರಿಗಣಿಸುತ್ತಿದ್ದಾರೆ. ಯಜಮಾನ ಚಿತ್ರವು ಸಾಧಾರಣ ಯಶಸ್ಸು ಕಂಡಿದ್ದರಿಂದ ಬೇಸರಗೊಂಡಿದ್ದ ದರ್ಶನ್ ಅಭಿಮಾನಿಗಳು ಕುರುಕ್ಷೇತ್ರ ಚಿತ್ರದ ಯಶಸ್ಸು ಕಂಡು ಫುಲ್ ಖುಷ್ ಆಗಿದ್ದಾರೆ.
ಆಗಸ್ಟ್ 15 ರಿಂದ ಕುರುಕ್ಷೇತ್ರ ತಮಿಳು ಅವತರಿಣಿಕೆ ಬಿಡುಗಡೆಯಾಗುತ್ತಿದೆ. ಒಟ್ಟಿನಲ್ಲಿ ಕುರುಕ್ಷೇತ್ರ ಭಾರತ, ಅಮೇರಿಕಾ ಎಲ್ಲ ಕಡೆಯೂ ಉತ್ತಮ ಪ್ರದರ್ಶನ ಕಾಣುತ್ತಿದೆ.

