Cinema News
ಕೆಂಪೇಗೌಡ-2 ನಲ್ಲಿ ಹೊಸ ಕೋಮಲ್

ಕೋಮಲ್‌ಕುಮಾರ್ ನಟನೆಯ ಕೆಂಪೇಗೌಡ-2 ಸಿನಿಮಾದ ಹಾಡುಗಳು ಬಿಡುಗಡೆಯಾಗಿದ್ದು, ಕೋಮಲ್ ಅವರ ಹೊಸ ಲುಕ್ ಎಲ್ಲರನ್ನು ಗಮನ ಸೆಳೆಯುತ್ತಿದೆ.
ಬರೀ ಕಾಮಿಡಿ ಸಿನಿಮಾಗಳ ಮೂಲಕ ಫೇಮಸ್ ಆಗಿದ್ದ ಕೋಮಲ್ ಕೆಂಪೇಗೌಡ-2ನಲ್ಲಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್ ಸೂಪರ್ ಹಿಟ್ ಆಗಿದ್ದು, ಒಂದು ಮಿಲಿಯನ್‌ಗೂ ಹೆಚ್ಚಿನ ಜನ ನೋಡಿದ್ದಾರೆ. ಈಗ ಹಾಡುಗಳಲ್ಲಿಯೂ ಕೋಮಲ್ ಮಿಂಚಿದ್ದಾರೆ.
ಎಲ್ಲ ಹಾಡಿನಲ್ಲಿ ಅವರ ಕಾಸ್ಟ್ಯೂಮ್ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಮತ್ತು ಸ್ಟೈಲಿಷ್ ಆಗಿದೆ. ಹಾಡುಗಳು ಸಹ ಉತ್ತಮವಾಗಿ ಮೂಡಿ ಬಂದಿದ್ದು, ಈಗಾಗಲೇ ಸೂಪರ್ ಹಿಟ್ ಆಗಿವೆ. ಇನ್ನು ಈ ಸಿನಿಮಾದಲ್ಲಿ ಭಾರತೀಯ ಚಿತ್ರಗಳಲ್ಲಿ ಇರದ ವಿಷಯವನ್ನು ತೋರಿಸಲಾಗಿದೆ. ಇದು ನನ್ನ ನಾಲ್ಕು ವರ್ಷದ ಶ್ರಮ ಇದಕ್ಕಾಗಿ ನಾನು ಬೆವರು ಹರಿಸಿದ್ದೇನೆ ಎಂದರು. ಇನ್ನು ಈ ಸಿನಿಮಾದಲ್ಲಿ ಸುಚೇಂದ್ರ ಪ್ರಸಾದ್, ಲೋಹಿತಾಶ್ವ, ದತ್ತಣ್ಣ, ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ.

ಈಗಾಗಲೇ ಎಲ್ಲ ಕೆಲಸಗಳು ಮುಗಿದಿದ್ದು, ಸದ್ಯದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ. ಶಂಕರೇಗೌಡ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳು ಮೆಚ್ಚಿಕೊಳ್ಳುತ್ತಾರೆ. ಹಗಲು ರಾತ್ರಿ ನಮ್ಮದೇ ರಕ್ಷಣೆಗಾಗಿ ದುಡಿಯುವ ದಕ್ಷ ಪೊಲೀಸ್ ಅಧಿಕಾರಿಗಳಿಗೆ ಈ ಚಿತ್ರವನ್ನು ಚಿತ್ರತಂಡ ಅರ್ಪಿಸಿದೆ.
