Cinema News

ಕಿಚ್ಚನ ‘ಪೈಲ್ವಾನ್’ ಗೆ ಕಿಂಗ್ ಖಾನ್ ಸಾಥ್

Published

on

ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ “ಪೈಲ್ವಾನ್” ಚಿತ್ರದ ಗ್ರಾಫಿಕ್ಸ್ ಕೆಲಸವನ್ನು ನಿರ್ದೇಶಕ ಕೃಷ್ಣ ಅವರು ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಕಂಪನಿಗೆ ನೀಡಿದ್ದಾರೆ.

 

 

ಹೌದು,’ಪೈಲ್ವಾನ್’ ಚಿತ್ರದಲ್ಲಿ ಬರುವ ಇಪ್ಪತ್ತು ನಿಮಿಷದ ಬಾಕ್ಸಿಂಗ್ ಸನ್ನಿವೇಶದ ಗ್ರಾಫಿಕ್ಸ್ ವರ್ಕ್ ಅನ್ನು ರೆಡ್ ಚಿಲ್ಲೀಸ್ ಕಂಪನಿ ನಿರ್ವಹಿಸಲಿದೆ. ಬಾಕ್ಸಿಂಗ್ ಸನ್ನಿವೇಶದಲ್ಲಿ ಬರುವ ಸ್ಟೇಡಿಯಂ ಮತ್ತು ಪ್ರೇಕ್ಷಕರ ಗ್ರಾಫಿಕ್ಸ್ ವರ್ಕ್ ಮಾಡಲಿದ್ದಾರೆ. ಒಂದು ನಿಮಿಷದ ಗ್ರಾಫಿಕ್ಸ್ ಕೆಲಸಕ್ಕೆ ಸುಮಾರು ಇಪ್ಪತ್ತು ಲಕ್ಷ ಖರ್ಚಾಗಲಿದೆ.

 

 

ದುಬಾರಿಯಾದರೂ ಪರವಾಗಿಲ್ಲ ತೆರೆಮೇಲೆ ಬರುವ ಬಾಕ್ಸಿಂಗ್ ದೃಶ್ಯಗಳು ಚಿತ್ರದಲ್ಲಿ ಬಹುಮುಖ್ಯ ಆದ್ದರಿಂದ ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗದೆ ಅತ್ಯುತ್ತಮ ಗುಣಮಟ್ಟದ ಚಿತ್ರ ನೀಡಬೇಕೆಂದು ನಿರ್ದೇಶಕ ಕಮ್ ನಿರ್ಮಾಪಕ ಕೃಷ್ಣ ಅವರು ನಿರ್ಧರಿಸಿದ್ದಾರೆ.

 

 

ಇನ್ನು , ಪೈಲ್ವಾನ್ ಚಿತ್ರವನ್ನು ವರಮಹಾಲಕ್ಷ್ಮೀ ಹಬ್ಬದ ಕೊಡುಗೆಯಾಗಿ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿರುವ ಚಿತ್ರತಂಡ ಹಗಲು ರಾತ್ರಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ನಿರತವಾಗಿದೆ.

Spread the love
Click to comment

Copyright © 2019 PopcornKannada.com