Cinema News
ವಿಕ್ರಾಂತ್ ರೋಣ ಸಿನಿಮಾವನ್ನ ಮಗಳಿಗೆ ಹೋಲಿಸಿದ ನಟ ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ಸಿನಿಮಾ ರಂಗದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರೋಕೆ ಇನ್ನೂ ಕೆಲವೇ ದಿನಗಳು ಮಾತ್ರವೇ ಭಾಕಿ ಇದೆ. ಈಗಾಗ್ಲೆ ಟ್ರೈಲರ್ ನೋಡಿರೋ ಅಭಿಮಾನಿಗಳು ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ. ಇದೀಗ ನಟ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ನನ್ನ ಮಗಳಿದ್ದಂತೆ ಎಂದಿದ್ದಾರೆ.
3ಡಿ ರೂಪದಲ್ಲಿ ಬಹುಭಾಷೆಗಳಲ್ಲಿ ತೆರೆಗೆ ಅಪ್ಪಳಿಸಲಿರೋ ವಿಕ್ರಾಂತ್ ರೋಣ ಚಿತ್ರಕ್ಕೆ ಭರದಿಂದ ಪ್ರಚಾರ ಕಾರ್ಯ ನಡೆಯುತ್ತಿದೆ. ಸಿನಿಮಾ ತಂಡ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಈಗ ವಿಕ್ರಾಂತ್ ರೋಣ ಚಿತ್ರವನ್ನು ತಮ್ಮ ಮಗಳಿಗೆ ಹೋಲಿಸಿ ಸಂದರ್ಶನವೊಂದರಲ್ಲಿ ಸುದೀಪ್ ಮಾತನಾಡಿದ್ದಾರೆ.
ಬೇರೆ ರಾಜ್ಯಗಳಿಗೂ ಭೇಟಿ ನೀಡಿ ಸಿನಿಮಾದ ಪ್ರಚಾರ ಮಾಡಬೇಕು ಎಂದು ಏಕೆ ಅನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕಿಚ್ಚ, ನನಗೂ ಒಬ್ಬಳು ಮಗಳಿದ್ದಾಳೆ. ಅವಳನ್ನು ಕಾಲೇಜ್ಗೆ ಅಡ್ಮಿಷನ್ ಮಾಡಿಸಲು ಹೋಗಬೇಕಾಗುತ್ತೆ. ಆಗ ನಾನು ಯಾರು ಗೊತ್ತಾ ಅಂತಾ ಹೇಳೋಕೆ ಆಗಲ್ಲ. ಒಬ್ಬ ಪೋಷಕನಾಗಿ ಅದು ನನ್ನ ಜವಾಬ್ದಾರಿ. ನನ್ನ ಮಗಳಿಗೂ ಈ ಸಿನಿಮಾಗೂ ಏನು ವ್ಯತ್ಯಾಸ? ನನ್ನ ಈ ಸಿನಿಮಾ ಹೊಸತು, ವಿಕ್ರಾಂತ್ ರೋಣ ನನ್ನ ಮಗು ಇದ್ದಂತೆ. ಈ ಚಿತ್ರದ ಯೋಗ್ಯತೆ ಹೀಗಿದೆ ನೋಡಿ ಬೆಂಬಲಿಸಿ ಅಂತಾ ಹೇಳೋದು ಕೂಡ ನನ್ನ ಕರ್ತವ್ಯ ಎಂದು ಮಗಳಷ್ಟೇ ವಿಕ್ರಾಂತ್ ರೋಣ ಸಿನಿಮಾವು ಮುಖ್ಯ ಎಂದು ಸುದೀಪ್ ಹೇಳಿದ್ದಾರೆ.
