Cinema News
ರವಿಚಂದ್ರನ್‌ಗಾಗಿ ಲಾಯರ್ ಆದ ಕಿಚ್ಚ ಸುದೀಪ್
ರವಿಚಂದ್ರನ್ ನಿರ್ದೇಶನ ಮಾಡಿ ನಾಯಕರಾಗಿ ನಟಿಸುತ್ತಿರುವ ರವಿ ಬೋಪಣ್ಣ ಸಿನಿಮಾದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎಂದು ಸ್ವತಃ ರವಿಚಂದ್ರನ್ ಹೇಳಿದ್ದರು. ಭಾನುವಾರ ಸುದೀಪ್ ಚಿತ್ರತಂಡವನ್ನು ಸೇರಿಕೊಂಡಿದ್ದು, ಅವರ ಭಾಗದ ಚಿತ್ರೀಕರಣ ಸಹ ಮಾಡಲಾಗಿದೆ.
ಹೌದು, ರವಿಬೋಪಣ್ಣ ಸಿನಿಮಾದಲ್ಲಿ ಸುದೀಪ್ ಲಾಯರ್‌ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, ವಕೀಲ ಸುದೀಪ್‌ಗೆ ರವಿಚಂದ್ರನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಭಾನುವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿ ಚಿತ್ರೀಕರಣ ನಡೆದಿದ್ದು, ಈಗಾಗಲೇ ಸುದೀಪ್ ಭಾಗದ ಶೂಟಿಂಗ್ ಕಂಪ್ಲೀಟ್ ಸಹ ಆಗಿದೆ.
ಇದೇ ಸಂದರ್ಭದದಲ್ಲಿ ಮಾತನಾಡಿ ರವಿಚಂದ್ರನ್ ‘ಸುದೀಪ್‌ರನ್ನು ನಿರ್ದೇಶನ ಮಾಡುವ ಖುಷಿ ಬೇರೊಬ್ಬರಿಂದ ಸಿಗುವುದಿಲ್ಲ ನೀವು ಏನೇ ಹೇಳಿದರು ಅವರು ಒಳಗೆ ತೆಗೆದುಕೊಂಡು ಅದ್ಭುತವಾಗಿ ಪರ್ಫಾಮೆನ್ಸ್ ನೀಡುತ್ತಾರೆ. ಇಡೀ ಸಿನಿಮಾದಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದ್ದು, ಅವರ ಎಂಟ್ರಿಯಿಂದ ಸಿನಿಮಾದ ಸ್ಟ್ಯಾಂಡರ್ಡ್ ಜಾಸ್ತಿಯಾಗುತ್ತದೆ. ಎಂದು ಹೇಳಿದರು.
ಸುದೀಪ್ ಮಾತನಾಡಿ ಅವರ ಜತೆ ಕೆಲಸ ಮಾಡುವುದೇ ಒಂದು ದೊಡ್ಡ ಪುಣ್ಯ, ಮುಂದೆಯೂ ಅವರ ಜತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.