Connect with us

Cinema News

ಖಡಕ್ ಚಿತ್ರ ಈವಾರ ತೆರೆಗೆ

Published

on

ಧರ್ಮ ಕೀರ್ತಿರಾಜ್ ಇದೇ ಮೊದಲಬಾರಿಗೆ ಪೋಲೀಸ್‌ಕಾಪ್ ಆಗಿ ಕಾಣಿಸಿಕೊಂಡಿರುವ ಚಿತ್ರ ಖಡಕ್ ಈವಾರ ತೆರೆಕಾಣುತ್ತಿದೆ. ಟಿ.ಎನ್.ನಾಗೇಶ್ ಖಡಕ್ ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ರಚಿಸಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮಾಸ್ ಆಕ್ಷನ್ ಕಥಾನಕ ಇರುವ ಚಿತ್ರ ಇದಾಗಿದ್ದು, ಅನುಷಾ ರೈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಿಂದೆ ನಾರದ ವಿಜಯ, ಮಿಸ್ಟರ್ ಚೀಟರ್, ಅಮಾನುಷ
ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದ ವಲ್ಲಿ ಮತ್ತು ಕಮಲ್ ಈ ಚಿತ್ರವನ್ನು
ನಿರ್ಮಿಸಿದ್ದಾರೆ. ಡ್ರಗ್ಸ್ ಮತ್ತು ಸ್ಮಗ್ಲಿಂಗ್ ಮಾಫಿಯಾ
ನಮ್ಮ ಸಮಾಜದ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ, ಇದರ ವಿರುದ್ದ
ಹೋರಾಡುವ ನಾಯಕನ ಕಥೆ ಈ ಚಿತ್ರದಲ್ಲಿದ್ದು, ಬೆಂಗಳೂರು, ಹೊನ್ನಾವರ,
ಗೋಕರ್ಣ, ಮಂಗಳೂರು ಸುತ್ತಮುತ್ತ ಸುಮಾರು ೪೫ ದಿನಗಳ ಕಾಲ ಚಿತ್ರೀಕರಣ
ನಡೆಸಲಾಗಿದೆ. ಧರ್ಮ. ಮೊದಲಬಾರಿಗೆ
ಅಂಡರ್‌ಕವರ್‌ ಕಾಪ್ ಪಾತ್ರ ಮಾಡಿದ್ದು, ಚಂದ್ರಪ್ರಭಾ ಕಾಮಿಡಿ ಪಾತ್ರ ನಿರ್ವಹಿಸಿದ್ದಾರೆ. ನಾಯಕಿ ಅನುಷಾರೈ ಅವರ ಪಾತ್ರಕ್ಕೆ ೨ ಶೇಡ್
ಇರುತ್ತದೆ. ಸಂಗೀತ ನಿರ್ದೇಶಕ ಕೃಪಾಕರ್ ೪ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ಸದ್ದಿಲ್ಲದೆ ಎನ್ನುವ ಹಾಡು ಈಗಾಗಲೇ ತುಂಬಾ
ಜನಪ್ರಿಯವಾಗಿದೆ. ಚಿತ್ರದ ಉಳಿದ ಪಾತ್ರವರ್ಗಗಳಲ್ಲಿ ಕಬೀರ್ ದುಹಾನ್‌ಸಿಂಗ್, ಸುಮನ್, ಕಮಲ್, ಅಶೋಕ್ ಚಕ್ರವರ್ತಿ
ಮೊದಲಾದವರು ನಟಿಸಿದ್ದಾರೆ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಶಂಕರ್
ಅವರ ಛಾಯಾಗ್ರಹಣ ಹಾಗೂ ಅರ್ಜುನ್‌ರಾವ್ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *