Connect with us

News

ಕಾವ್ಯಾಂಜಲಿ “ಲವ್‌ ಇನ್‌ ಗೋವಾ”

Published

on

ಉದಯ ಟಿವಿ ಅಂದ್ರೆ ಜನಮಾನಸದಲ್ಲಿ ಮನರಂಜನೆಗೆ ಇನ್ನೊಂದು ಹೆಸರು. ಸುಮಾರು ಎರಡೂವರೆ ದಶಕಗಳಿಂದ ತನ್ನ ವಿಭಿನ್ನ ಕಥೆಗಳೊಂದಿಗೆ ಕರುನಾಡ ಕಲಾರಸಿಕರ ಮನಸ್ಸು ಗೆದ್ದಿದೆ. ಕೌಟುಂಬಿಕ ಕಥಾವಸ್ತುವಿನ ಜೊತೆಜೊತೆ ವೀಕ್ಷಕರ ಹೃದಯ ಮಿಡಿವ ಭಾವಗಳ ಸರಿಮಿಶ್ರಣದ ರಸದೌತಣ ನೀಡುತ್ತಿರೊ ಉದಯ ಟಿವಿಯ ಯಶಸ್ವಿ ಧಾರಾವಾಹಿಗಳಲ್ಲಿ ಕಾವ್ಯಾಂಜಲಿ ಕೂಡ ಒಂದು. ಇದೀಗ ಕಾವ್ಯಾಂಜಲಿ ಧಾರಾವಾಹಿಯು ೧೫೦ ಸಂಚಿಕೆಗಳನ್ನು ಪೂರೈಸಿದೆ.

ಫೆಬ್ರವರಿ ಅಂದ್ರೆ ಪ್ರಪಂಚದಾದ್ಯಂತ ಪ್ರೇಮಿಗಳ ಸಂಬ್ರಮ ಶುರುವಾಗುತ್ತೆ. ಕಾವ್ಯಾಂಜಲಿ ಧಾರಾವಾಹಿ ಅಂದ್ರೆ ಕಾವ್ಯ-ಸಿದ್ಧಾರ್ಥ್‌, ಅಂಜಲಿ-ಸುಶಾಂತ್ ಮುದ್ದಾದ ಜೋಡಿ ಕಣ್ಮುಂದೆ ಬರುತ್ತೆ. ಏನಿದು ಫೆಬ್ರವರಿ ಕಾವ್ಯಾಂಜಲಿ ಕನೆಕ್ಷನ್‌ ಅಂತೀರಾ? ವಿಷಯ ಇದೆ. ಪ್ರೇಮಿಗಳ ದಿನದ ವಿಶೇಷ ಸಂದರ್ಭದಲ್ಲಿ ಕಾವ್ಯಾಂಜಲಿ ತಂಡವು ತಮ್ಮ ಪ್ರೀತಿಯ ವೀಕ್ಷಕರಿಗೆ ಸ್ಪೆಷಲ್‌ ಗಿಫ್ಟ್‌ ಕೊಡೋಕೆ ಸಜ್ಜಾಗಿದೆ. ಪ್ರೇಮಿಗಳ ನೆಚ್ಚಿನ ತಾಣವಾದ ಗೋವಾದಲ್ಲಿ ಕಾವ್ಯಾಂಜಲಿ “ಲವ್‌ ಇನ್‌ ಗೋವಾ” ಅನ್ನೋ ೨ ವಾರಗಳ ವಿಶೇಷ ಸಂಚಿಕೆಗಳನ್ನ ಹೊತ್ತು ತರ್ತಿದೆ.

ಇನ್ನು ಈ ವಿಶೇಷ ಸಂಚಿಕೆಯಲ್ಲಿ ಪ್ರೇಮಿಗಳ ದಿನದ ಸಂಭ್ರಮಾಚರಣೆಯನ್ನು ಕೈಗೊಳ್ಳಲಾಗಿದೆ. ಬೀಚ್‌ ಹತ್ತಿರ ನೂರಾರು ಆಕಾಶ ದೀಪಗಳನ್ನು ಬಳಸಿಕೊಂಡು ರೋಮ್ಯಾಂಟಿಕ್‌ ನೃತ್ಯಗಳನ್ನು ಈ ದಂಪತಿಗಳಿಂದ ಹಮ್ಮಿಕೊಳ್ಳಲಾಗಿದೆ. ಇನ್ನು ಇಬ್ಬರು ಜೋಡಿಗಳ ಪ್ರೀತಿಯ ತಪೊಪ್ಪಿಗೆ ಈ ವಿಶೇಷ ಕಂತುಗಳಲ್ಲಿ ಪ್ರಮುಖವಾಗಿದೆ. ಅಲ್ಲದೇ ಚರ್ಚ್‌,ದೇವಾಲಯಗಳ ಭೇಟಿ ಹಾಗೆ ಪಣಜಿ ಸೇತುವೆ ಬಳಿ ವಿಶೇಷ ವಿಹಾರ ನೌಕೆಯಲ್ಲಿ ಹೊಸ ನಾಯಕಿಯ ಪರಿಚಯ ನಡೆಯಲಿದೆ.

ಅಂಜಲಿ-ಸುಶಂತ್‌ನ ಒಂದು ಮಾಡೋಕೆ ಕಾವ್ಯ-ಸಿದ್ಧಾರ್ಥ್ ಪರದಾಟ, ಕಾವ್ಯ-ಸಿದ್ಧಾರ್ಥ್ನ ಒಂದು ಮಾಡೋಕೆ ಅಂಜಲಿ-ಸುಶಾಂತ್‌ ಒದ್ದಾಟದ ಮಜಲುಗಳ ಜೊತೆ ಬೆಳ್ಳಿತೆರೆಯ ಹಿರಿಯ ಹಾಸ್ಯ ಕಲಾವಿದರಾದ ಟೆನ್ನೀಸ್‌ ಕೃಷ್ಣ ಹಾಗೂ ರೇಖಾದಾಸ್‌ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಪ್ರಸಿದ್ಧ ತಾಣಗಳಲ್ಲದೆ ಗೋವಾದ ಸಂಸ್ಕೃತಿಯನ್ನು ಕೂಡ ೨ ವಾರದ ಕಥೆಯಲ್ಲಿ ಕಾಣಬಹುದು.. ಝಳಪಿಸುವ ಬಿಸಿಲ ಬೇಗೆಯಲ್ಲೂ ಸಹ ಕಲಾವಿದರು ಹಾಗೂ ತಂತ್ರಜ್ಞರು ಗೋವಾ ಬೀಚ್‌ಗಳಲ್ಲಿ ಉತ್ಸಾಹದಿಂದ ಶೂಟಿಂಗ್‌ ನಡೆಸಿದ್ದು ಈ ವಿಶೇಷ ಸಂಚಿಕೆಗಳು ಇದೇ ಫೆಬ್ರವರಿ ೧೫ರಿಂದ ಸೋಮವಾರದಿಂದ ಶನಿವಾರ ರಾತ್ರಿ ೮.೩೦ ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಇದರ ಜೊತೆಯಲ್ಲೆ ಉದಯ ಟಿವಿಯ “ಬ್ರಹ್ಮಾಸ್ತ್ರ” ಖ್ಯಾತಿಯ ದೀಪಾ ಹಿರೇಮಠ್‌ ಅಂಜಲಿಯಾಗಿ ಇದೇ ವಿಶೇಷ ಸಂಚಿಕೆಗಳಿಂದ ಪ್ರೇಕ್ಷಕರನ್ನ ರಂಜಿಸಲಿದ್ದಾರೆ. ವೀಕ್ಷಕರು ಆ ಪಾತ್ರವನ್ನ ಆತ್ಮೀಯವಾಗಿ ಮೆಚ್ಚಿದ್ದಾರೆ. ಈ ಬದಲಾವಣೆಯಲ್ಲಿ ವೀಕ್ಷಕರು ನಮ್ಮ ಜೊತೆ ಇದ್ದೇ ಇರುತ್ತಾರೆ ಅನ್ನೋ ಭರವಸೆ ಉದಯ ಟಿವಿ ಹಾಗೂ ಕಾವ್ಯಾಂಜಲಿ ಧಾರಾವಾಹಿ ತಂಡದ್ದಾಗಿದೆ.

ಕಾವ್ಯಾಂಜಲಿ ಲವ್‌ ಇನ್‌ ಗೋವಾ ಇದೇ ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೮.೩೦ ಕ್ಕೆ ಪ್ರಸಾರವಾಗಲಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *