Connect with us

News

‘ಕನ್ನಡದ ಕೋಟ್ಯಧಿಪತಿ’ ಈ ಬಾರಿ ಕಲರ್ಸ್ ಕನ್ನಡದಲ್ಲಿ ಜೂನ್ 22 ರಿಂದ

Published

on

ನಾವೆಲ್ಲರೂ ಒಂದಲ್ಲಾ ಒಂದು ದಿನ ಈ ಕನಸು ಕಂಡಿರುತ್ತೇವೆ- ಹಾಟ್ ಸೀಟಿನಲ್ಲಿ ಕೂರುವುದು, ಉತ್ತರ ಹೇಳುವ ಮೊದಲಿನ ಟೆನ್ಷನ್, ಯಾವುದೋ ಒಂದು ಉತ್ತರ ಲಾಕ್ ಮಾಡುವುದು, ಲೈಫ್‍ಲೈನ್‍ಗಳನ್ನು ಉಳಿಸಿಕೊಂಡು ಮುನ್ನಡೆಯುವುದು, ಸೇಫ್ ಝೋನ್‍ಗೆ ತಲುಪಿದಾಗ ನಿಟ್ಟುಸಿರು ಬಿಡುವುದು, ದುಡ್ಡು ಗೆಲ್ಲುವುದು..

ಟಿವಿ ಪರದೆಯ ಮೇಲೆ ಒಂದೊಂದೇ ಪ್ರಶ್ನೆಗಳು ಮೂಡಿದ ಹಾಗೆಯೇ “ಏ.. ನನಗೆ ಉತ್ತರ ಗೊತ್ತಿದೆ,” “ಅಯ್ಯೋ ಅವನಿಗೆ ಅಷ್ಟೂ ಗೊತ್ತಿಲ್ವಾ? ಆಪ್ಷನ್ ಬಿ,” ಮುಂತಾಗಿ ಪ್ರತಿ ಮನೆಯಲ್ಲೂ ರಾತ್ರಿ ಊಟದ ವೇಳೆಗೆ ಪ್ರಶ್ನೆ, ಉತ್ತರಗಳ ರಸದೌತಣ ನಡೆಯುತ್ತದೆ. ನಮ್ಮ, ನಿಮ್ಮ ಥರದ ಮಂದಿ ಒಂದು ಕೋಟಿ ರೂಪಾಯಿ ಗೆಲ್ಲಲು ಪ್ರಯತ್ನ ಪಡೋದು, ಇನ್ನೇನು ಗೆಲ್ಲುತ್ತಾರೆ ಅನ್ನುವಾಗ ಎಡವೋದು, ಕೆಲವೇ ಕೆಲವು ಮಂದಿ ಗೆಲ್ಲೋದು- ಇವೆಲ್ಲವೂ ನಮಗೆ ನೀಡುವ ಮಜಾವೇ ಬೇರೆ. “ಜ್ಞಾನವೇ ಸಂಪತ್ತು” ಎಂಬ ಕಾನ್ಸೆಪ್ಟ್‍ನ ಮೇಲೆ ನಿಂತಿರೋ ಗೇಮ್ ಶೋ “ಕನ್ನಡದ ಕೋಟ್ಯಧಿಪತಿ” ಯನ್ನು ಮತ್ತೆ ತೆರೆಯ ಮೇಲೆ ತರುತ್ತಿದೆ ಕಲರ್ಸ್ ಕನ್ನಡ.

ಜಗತ್ತಿನಾದ್ಯಂತ ಜನರ ಮನಸೂರೆಗೊಂಡಿರುವ “ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್” ಶೋ ಮಾದರಿಯಲ್ಲಿದೆ ಕನ್ನಡದ ಕೋಟ್ಯಧಿಪತಿ. ಬುದ್ದಿವಂತಿಕೆಯನ್ನೇ ಬಂಡವಾಳವನ್ನಾಗಿಸಿ ಜನಸಾಮಾನ್ಯರು ಕೋಟಿ ರೂಪಾಯಿ ಗೆಲ್ಲುವ ಈ ಶೋವನ್ನು ಸಂತೂರ್ ಸೋಪ್ ಪ್ರಸ್ತುತಪಡಿಸುತ್ತಿದೆ. ಪವರ್ಡ್ ಬೈ ಈಸ್ಟರ್ನ್ ಮಸಾಲಾ ಮತ್ತು ರಿನ್ ಜೊತೆಗೆ ಚಂದ್ರಿಕಾ ಸೋಪ್ ಸ್ಪೆಷಲ್ ಪಾರ್ಟನರ್ ಆಗಿ ಇರಲಿವೆ.

ಕ್ವಿಜ್ ಮಾಸ್ಟರ್ ಆಗಿ ಐದು ವರ್ಷಗಳ ನಂತರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತೆ ಈ ಶೋವನ್ನು ಮುನ್ನಡೆಸಲಿದ್ದಾರೆ. ಜೂನ್ 22ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಕನ್ನಡದ ಕೋಟ್ಯಧಿಪತಿ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಆ ಬಳಿಕ ವೂಟ್‍ನಲ್ಲಿ ಯಾವಾಗ ಬೇಕಾದರೂ ಎಪಿಸೋಡ್‍ಗಳನ್ನು ನೋಡಬಹುದು.

ವಯಾಕಾಮ್ 18 ಸಂಸ್ಥೆಯ ರೀಜನಲ್ ಎಂಟರ್‍ಟೇನ್‍ಮೆಂಟ್‍ನ ಮುಖ್ಯಸ್ಥರಾದ ರವೀಶ್ ಕುಮಾರ್ ಹೀಗೆ ಹೇಳುತ್ತಾರೆ: “ದೇಶದ ಒಂದೊಂದು ಪ್ರದೇಶದ ಜನರ ಅಭಿರುಚಿ ಒಂದೊಂದು ಥರ ಇರುತ್ತದೆ. ಆದರೆ “ಕನ್ನಡದ ಕೋಟ್ಯಧಿಪತಿ” ಥರದ ಶೋಗಳನ್ನು ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು ನೋಡುತ್ತಾರೆ. ಇದು ಯಾವ ಪ್ರದೇಶಕ್ಕೆ ಹೋದರೂ ಹೀಗೆಯೇ ಇರುತ್ತದೆ. ನಮ್ಮ ನಿಮ್ಮ ಮಧ್ಯೆ ಇರುವ ಜನರ ನೋವು ನಲಿವಿನ ಕತೆಗಳನ್ನು ನೋಡುವುದು ಮತ್ತು ಅವರು ಹಣ ಗೆಲ್ಲುವುದನ್ನು ನೋಡಿ ಆನಂದಿಸುವುದು ಟೆಲಿವಿಷನ್ ವೀಕ್ಷಕರಿಗೆ ಅಪೂರ್ವ ಅನುಭವ. ಬೇರೆ ಭಾಷೆಗಳಲ್ಲಿ ನಾವು ಇದೇ ಶೋ ಮಾಡಿದಾಗ ಸಿಕ್ಕಿದ ಯಶಸ್ಸು “ಕನ್ನಡದ ಕೋಟ್ಯಧಿಪತಿ”ಯಲ್ಲೂ ಸಿಗಲಿದೆ ಎಂಬ ವಿಶ್ವಾಸ ನಮ್ಮದು.”

ಪರಮೇಶ್ವರ ಗುಂಡ್ಕಲ್, ಬುಸಿನೆಸ್ ಹೆಡ್, ಕನ್ನಡ ಎಂಟರ್‍ಟೇನ್‍ಮೆಂಟ್ ಕ್ಲಸ್ಟರ್, ವಯಾಕಾಮ್ 18, ಹೀಗೆ ಹೇಳುತ್ತಾರೆ: “ಕನ್ನಡದ ಕೋಟ್ಯಧಿಪತಿ ಶೋದ ರೂಪುರೇಷೆಗಳು ಹಾಗೆಯೇ ಇರುತ್ತವೆ. ಆದರೆ ಸ್ಪರ್ಧಿಗಳ ಕತೆಗಳು, ಅವರ ಅಗತ್ಯಗಳು, ಕೋಟಿ ರೂಪಾಯಿ ಗೆಲ್ಲಲು ಅವರು ಪಡುವ ಪ್ರಯತ್ನ, ಅವರ ಬುದ್ದಿವಂತಿಕೆ- ಮುಂತಾದವುಗಳನ್ನು ತೋರಿಸುವ ವಿಧಾನ ಹೊಸದಾಗಿರುತ್ತದೆ. ಇವೆಲ್ಲಕ್ಕಿಂತ ಮಿಗಿಲಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತೆ ಈ ಶೋ ಮಾಡುತ್ತಿರುವುದು ನಮ್ಮೆಲ್ಲರಿಗೆ ತುಂಬಾ ಖುಷಿ ಕೊಟ್ಟಿರುವ ವಿಚಾರ. ಅವರು ಸ್ಪರ್ಧಿಗಳಿಗೆ ಗೆಳೆಯನಾಗಿ, ಗೈಡ್ ಆಗಿ, ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡುವ ರೀತಿಯೇ ಅತ್ಯಾಕರ್ಷಕ. ಮೊದಲನೇ ಎಪಿಸೋಡ್‍ನಲ್ಲೇ ಕುಮಟಾದ ಮೀನು ಹಿಡಿಯುವ ಮಹಿಳೆಯೊಬ್ಬರು ತೀರಾ ಬುದ್ದಿವಂತಿಕೆಯಿಂದ ಆಟವಾಡಿರುವ ರೀತಿ ನನಗಂತೂ ಬಹಳ ಖುಷಿ ಕೊಟ್ಟಿದೆ.”

ವೀಕ್ಷಕರಿಗೂ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವಿದೆ. ಇದಕ್ಕಾಗಿಯೇ ವೂಟ್ ಮತ್ತು ಮೈ ಜಿಯೋ ಆಪ್‍ಗಳಲ್ಲಿ “ಪ್ಲೇ ಅಲಾಂಗ್” ಅನ್ನು ಆರಂಭಿಸಲಾಗಿದೆ. ಇದರ ಮೂಲಕ ಕಾರ್ಯಕ್ರಮ ವೀಕ್ಷಿಸುವ ಜನರು ಕಾರ್ಯಕ್ರಮದ ಜೊತೆಜೊತೆಗೇ, ಕೇಳಲಾಗುವ ಪ್ರಶ್ನೆಗಳಿಗೆ “ಪ್ಲೇ ಅಲಾಂಗ್”ನಲ್ಲಿ ಉತ್ತರಿಸಬಹುದು. ಈ ಮೂಲಕ ಬಹುಮಾನ ಗೆಲ್ಲುವ ಅವಕಾಶವೂ ಇದೆ.

ಹುಬ್ಬಳ್ಳಿ, ಮೈಸೂರು, ದಾವಣಗೆರೆ, ಮಂಗಳೂರು ಮತ್ತು ಬೆಂಗಳೂರುಗಳಲ್ಲಿ ನಡೆದ ಆಡಿಷನ್‍ನಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಂತೂ ಕಾರ್ಯಕ್ರಮದ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದಾರೆ. “ಜನಸಾಮಾನ್ಯರನ್ನು ಕೋಟ್ಯಧಿಪತಿಗಳನ್ನಾಗಿ ಮಾಡುವ ಯೋಚನೆಯೇ ತುಂಬಾ ಆಕರ್ಷಕವಾದುದು. ಈ ಶೋ ನಿಂತಿರೋದೇ ಜ್ಞಾನದ ಮೇಲೆ. ತಮ್ಮ ಬುದ್ದಿವಂತಿಕೆಯನ್ನು ಬಳಸಿ ಜನರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವುದು ಎಂದರೆ ಸಣ್ಣ ವಿಚಾರವಲ್ಲ. ಹಾಟ್ ಸೀಟ್‍ನಲ್ಲಿ ಯಾವ್ಯಾವ ರೀತಿಯ ಜನರು ಬರುತ್ತಾರೆ ಎಂಬ ಬಗ್ಗೆ ನಾನಂತೂ ಬಹಳ ಉತ್ಸುಕನಾಗಿದ್ದೇನೆ.”

“ಕನ್ನಡದ ಕೋಟ್ಯಧಿಪತಿ”ಯನ್ನು ನಿರ್ಮಾಣ ಮಾಡುತ್ತಿರುವುದು ಸೋನಿ ಪಿಕ್ಚರ್ಸ್‍ನ ಪ್ರೊಡಕ್ಷನ್ ಹೌಸ್ ಸ್ಟುಡಿಯೋ ನೆಕ್ಸ್ಟ್. ಎಲ್ಲ ಭಾರತೀಯ ಭಾಷೆಗಳಲ್ಲಿ ಈ ಕಾರ್ಯಕ್ರಮ ನಡೆಸುವ ಪರವಾನಗಿ ಸ್ಟುಡಿಯೋ ನೆಕ್ಸ್ಟ್ ಬಳಿ ಇದೆ. ಸ್ಟುಡಿಯೋ ನೆಕ್ಸ್ಟ್ ಒಂಬತ್ತು ಭಾಷೆಗಳಲ್ಲಿ ಈ ಕಾರ್ಯಕ್ರಮದ 1800ಕ್ಕೂ ಹೆಚ್ಚು ಎಪಿಸೋಡ್‍ಗಳನ್ನು ನಿರ್ಮಿಸಿದೆ. “ಕನ್ನಡದ ಕೋಟ್ಯಧಿಪತಿ”ಯ ಈ ಸೀಸನ್‍ನಲ್ಲಿ ಅತ್ಯಾಧುನಿಕ ಸೆಟ್ ಮತ್ತು ಹೊಸ ಲುಕ್ ಇರಲಿದೆ. ಸ್ಟುಡಿಯೋ ನೆಕ್ಸ್ಟ್‍ನ ಮುಖ್ಯಸ್ಥ ಇಂದ್ರನೀಲ್ ಚಕ್ರವರ್ತಿ ಅವರು ಹೀಗೆ ಹೇಳುತ್ತಾರೆ: “ಕನ್ನಡ ಪ್ರೇಕ್ಷಕರಿಗಾಗಿ ಪುನೀತ್ ರಾಜ್‍ಕುಮಾರ್ ಅವರು ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ಮತ್ತೆ ನಿರ್ಮಿಸಲು ನಮಗೆ ತುಂಬಾ ಹೆಮ್ಮೆ ಇದೆ. ಬೇರೆ ಭಾಷೆಗಳಲ್ಲೂ ಕಾರ್ಯಕ್ರಮ ನಡೆಸುವಲ್ಲಿ ಹಾಗೂ ಸ್ಪರ್ಧಿಗಳ ಆಯ್ಕೆಯಲ್ಲಿ ನಾವು ಒಂದು ಮಟ್ಟಿನ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿದ್ದೇವೆ. ಈ ಸೀಸನ್‍ನಲ್ಲೂ ಇದು ಹಾಗೆಯೇ ಇರಲಿದೆ. ಈ ಕಾರ್ಯಕ್ರಮದಲ್ಲಿ ಲೆಕ್ಕಕ್ಕೆ ಬರುವುದು ಜ್ಞಾನ ಮಾತ್ರ.”

“ಕನ್ನಡದ ಕೋಟ್ಯಧಿಪತಿ” ಜೂನ್ 22ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಆ ಬಳಿಕ ವೂಟ್‍ನಲ್ಲಿ ಯಾವಾಗ ಬೇಕಾದರೂ ಎಪಿಸೋಡ್‍ಗಳನ್ನು ನೋಡಬಹುದು.

Spread the love

Continue Reading
Click to comment

Leave a Reply

Your email address will not be published. Required fields are marked *