Connect with us

Cinema News

“ಯುಗಾದಿ ಹಬ್ಬಕ್ಕೆ ಉಪ್ಪಿ ಗಿಫ್ಟ್” ಹೊಸ ಪೋಸ್ಟರ್ ಬಿಡುಗಡೆಗೊಳಿಸಿ “ಕಂಡ್ಹಿಡಿ ನೋಡನ” ಎಂದ ರಿಯಲ್ ಸ್ಟಾರ್ , ಸೂಪರ್‌ಸ್ಟಾರ್ ಉಪೇಂದ್ರ

Published

on

ಶಶಿಕುಮಾರ್, ದಿವ್ಯಚಂದ್ರಧರ, ಯೋಗೇಶ್ ಕೆ ಗೌಡ ನಿರ್ಮಾಣದ, ಎಸ್ ಕೆ ನಾಗೇಂದ್ರ ಅರಸ್ ನಿರ್ದೇಶನದ ಮತ್ತು ಪ್ರಣವ ಸೂರ್ಯ ಅಭಿನಯದ
“ಕಂಡ್ಡಿಡಿ ನೋಡನ” ಚಿತ್ರದ ಪೋಸ್ಟರ್ ಮತ್ತು ಸಿನಿಮಾ ಥೀಮ್ ಮ್ಯೂಸಿಕ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಅನಾವರಣ ಗೊಳಿಸಿದರು.

ಈ ಸಮಯದಲ್ಲಿ ಚಿತ್ರದ ಒಂದು ಗೀತೆಯ ಕ್ರಿಯೇಟಿವ್ ನೋಡಿ ಖುಷಿಯಾದ ಉಪೇಂದ್ರ ನಮಗೂ ಈ ತರ ಮಾಡಿ ಕೊಡ್ತೀರಾ, ನಮ್ಮ ಜೊತೆ ಕೆಲಸ ಮಾಡ್ತೀರಾ ಎಂದು ಚಿತ್ರ ತಂಡವನ್ನು ಕೇಳಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಉಪೇಂದ್ರ ರವರ ಮಾತಿಂದ ಚಿತ್ರ ತಂಡ ಫುಲ್ ದಿಲ್ ಕುಷ್ ಆಗಿದೆ.

ಮೆಜೆಸ್ಟಿಕ್ ಚಿತ್ರದ ಮೂಲಕ ಸಂಕಲನ ಕಾರನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಂತರ ಹಾರ್ಟ್ ಬೀಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ನಾಗೇಂದ್ರ ಅರಸ್ ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಹಾಗೇ ರಾಕಿಂಗ್ ಸ್ಟಾರ್ ಯಶ್ ಅನ್ನು ಪರಿಪೂರ್ಣ ನಾಯಕನಾಗಿ
ರಾಕಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆ ನಾಗೇಂದ್ರ ಅರಸ್ ರವರದ್ದು. ನಿರ್ದೇಶನ , ಸಂಕಲನ ಮತ್ತು ನಟನೆಯಲ್ಲಿ ಬ್ಯುಸಿಯಾಗಿರುವ ನಾಗೇಂದ್ರ ಅರಸ್ ಈಗ “ಕಂಡ್ಹಿಡಿ ನೋಡನ” ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಈಗಾಗಲೇ ಸೈಕೋ ಶಂಕರ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಪ್ರಣವ ಸೂರ್ಯ
ಈಗ “ಕಂಡ್ಹಿಡಿ ನೋಡನ” ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.
ಚಿತ್ರದ ಚಿತ್ರೀಕರಣ ಮುಗಿದಿದ್ದು ಮೇ ತಿಂಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದೆ.

ಚಿತ್ರದಲ್ಲಿ ಒಳ್ಳೆಯ ಹಾಡುಗಳು ಮೂಡಿಬಂದಿದ್ದು ಶ್ರೀಧರ್ ಕಷ್ಯಪ್ ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಒಂದು ಹಾಡನ್ನು ಹಾಡಿದ್ದಾರೆ.
ಹಾಗೂ ನಿರ್ದೇಶಕ ಜೋಗಿ ಪ್ರೇಮ್, ರಾಜೇಶ್ ಕೃಷ್ಣನ್, ದಿವ್ಯ ಆಲೂರ್, ಐಶ್ವರ್ಯ ರಂಗರಾಜನ್, ಸಂಗೀತ ಕಟ್ಟಿ, ಮ್ಯಾಥ್ಯೂಸ್ ಮನು ಹಾಡಿದ್ದಾರೆ.

ಚಿತ್ರಕ್ಕೆ ವಿನೋದ್ ಜೆ ರಾಜ್ ಛಾಯಾಗ್ರಹಣ,
ಎನ್.ಎಮ್. ವಿಶ್ವ ಸಂಕಲನ, ಶ್ರೀಧರ್ ಕಶ್ಯಪ್ ಸಂಗೀತವಿದೆ.

ಪ್ರಣವ ಸೂರ್ಯ,
ಎಸ್ ಕೆ ನಾಗೇಂದ್ರ ಅರಸ್, ವಿಜಯ್ ಚೆಂಡೂರ್, ಗಿರಿಜಾ ಲೋಕೇಶ್, ಪ್ರಿಯಾಂಕ ಮಲಲಿ , ಶಿಲ್ಪ ಬರಿಕೆ, ಗಗನಮಧು, VCN ಮಂಜುರಾಜ್ ಸೂರ್ಯ ಹಾಗೂ ಆದರ್ಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಬಂಡೆ ಚಂದ್ರು ಸಾಹಸ ನಿರ್ದೇಶನ ಹಾಗೂ ಮಹೇಶ್ ಮಲ್ಲಿ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ
ಪ್ರಣವ ಸೂರ್ಯ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *