Cinema News
ಭಾರತದ ಮೊದಲ ಪ್ಯಾರ ನಾರ್ಮಲ್ ಕಥೆ ಆಧಾರಿತ ಚಿತ್ರ – ‘ಕಮರೊಟ್ಟು ಚೆಕ್ ಪೋಸ್ಟ್’

ಮಾಮು ಟೀ ಅಂಗಡಿ ಚಿತ್ರದ ಮೂಲಕ ಹೆಸರು ಮಾಡಿದ್ದ ನಿರ್ದೇಶಕ ಪರಮೇಶ್ ಈಗ ‘ಕಮರೋಟ್ಟು ಚೆಕ್ ಪೋಸ್ಟ್’ ಎಂಬ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಸತ್ಯ ಘಟನೆಗಳನ್ನು ಆದರಿಸಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.
ಇದು ದೆವ್ವದ ಸಿನಿಮಾವಾದರೂ, ಎಲ್ಲಿಯೂ ಭೂತವನ್ನು ತೋರಿಸಿಲ್ಲ. ಬದಲಿಗೆ ಬರೀ ಭಾವನೆಗಳ ಮೂಲಕವೇ ಪ್ರೇಕ್ಷಕರನ್ನು ಹೆದರಿಸುತ್ತಾರಂತೆ ನಿರ್ದೇಶಕರು. ಈ ಸಿನಿಮಾಗೆ ಎ ಟಿ ರವೀಶ್ ಸಂಗೀತ ನೀಡಿದ್ದು, ಇದು ರವೀಶ್‌ಗೆ 25 ನೇ ಚಿತ್ರವಾಗಿದೆ. ನಟ ನಿರ್ದೇಶಕ ನವೀನ್ ಕೃಷ್ಣ ತುಳು ಹಾಡೊಂದನ್ನು ಹಾಡಿರುವುದು ಇದರ ವಿಶೇಷವಾಗಿದೆ. ಒಂದು ಭೂತದ ಕೋಲ ಸಾಂಗನ್ನು ರಿಯಲ್ ಆಗಿಯೇ ಶೂಟ್ ಮಾಡಿದ್ದಾರೆ.

ಉತ್ಪಲ್, ಸನತ್, ಸ್ವಾತಿ ಕೊಂಡೆ, ನಿಶಾ ವರ್ಮಾ, ಅಹಲ್ಯಾ ಸುರೇಶ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ ಇಂಡಸ್ಟ್ರಿಯಲ್ಲಿ ಮೊದಲ ಬಾರಿಗೆ ಪ್ಯಾರಾ ನಾರ್ಮಲ್ ಕಥೆಯನ್ನು ತೆರೆ ಮೇಲೆ ತಂದಿರುವುದಾಗಿ ನಿರ್ದೇಶಕರು ಹೇಳುತ್ತಾರೆ. ಆತ್ಮಗಳನ್ನು ಪತ್ತೆ ಮಾಡುವ ವಿದ್ಯೆ ಕಲಿತವರನ್ನು ಸಂಪರ್ಕಿಸಿ, ರಿಸರ್ಚ್ ಮಾಡಿ ಕಥೆ ಬರೆದಿದ್ದಾರಂತೆ. ಜತೆಗೆ ಕೆಲ ಸತ್ಯಘಟನೆಗಳನ್ನು ಈ ಚಿತ್ರಕ್ಕೆ ಆಧಾರವಾಗಿಟ್ಟುಕೊಳ್ಳಲಾಗಿದೆ.
ಎಪಿ ಪ್ರೊಡಕ್ಷನ್ , ಸಪ್ನಾ ಸಿನಿ ಕ್ರಿಯೇಶನ್ಸ್ ಬ್ಯಾನರ್‌ನಡಿ ಈ ಚಿತ್ರಕ್ಕೆ ಚೇತನ್‍ರಾಜ್ ಬಂಡವಾಳ ಹೂಡಿದ್ದು, ಈ ಚಿತ್ರ ಇದೇ 31ಕ್ಕೆ ಬಿಡುಗಡೆಯಾಗಲಿದೆ.

