Movie Reviews
ಕಮರೊಟ್ಟು ಚೆಕ್‌ಪೋಸ್ಟ್‌ನಲ್ಲಿ ವಿಶಿಷ್ಟಕಥೆ – ವಿಮರ್ಶೆ – ರೇಟಿಂಗ್ -3.5/5

ಚಿತ್ರ: ಕಮರೊಟ್ಟು ಚೆಕ್ ಪೋಸ್ಟ್
ನಿರ್ದೇಶನ: ಪರಮೇಶ್
ನಿರ್ಮಾಣ: ಚೇತನ್ ರಾಜ್
ಸಂಗೀತ: ಎ ಟಿ ರವೀಶ್
ಕಲಾವಿದರು: ಸನತ್, ಉತ್ಪಲ್, ಸ್ವಾತಿ, ನಿಶಾ ವರ್ಮಾ, ಗಡ್ಡಪ್ಪ ಮತ್ತಿತರರು
ರೇಟಿಂಗ್: 3.5/5.
ರಂಗಿತರಂಗ ಸಿನಿಮಾದಲ್ಲಿ ಕಮರೊಟ್ಟು ಚೆಕ್ ಪೋಸ್ಟ್ ಎನ್ನುವುದು ಪ್ರಮುಖವಾಗಿ ಕೇಳಿ ಬಂದಿತ್ತು. ಈಗ ಅದೇ ಟೈಟಲ್ ಇಟ್ಟುಕೊಂಡು ಪರಮೇಶ್ ಸಿನಿಮಾ ಮಾಡಿದ್ದಾರೆ, ಅದರಲ್ಲಿ ಒಂದು ವಿಶಿಷ್ಟ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.
ಕಮರೊಟ್ಟು ಚೆಕ್‌ಪೋಸ್ಟ್‌ನ್ನು ದಾಟಿ ಒಂದು ಮನೆಗೆ ಹೋದಾಗ ನಾಯಕ ಮತ್ತವನ ಸ್ನೇಹಿತರಿಗೆ ಎದುರಾಗುವ ಸಮಸ್ಯೆಗಳೇ ಚಿತ್ರದ ಕಥೆಯಾಗಿದೆ. ಸಾಮಾನ್ಯವಾಗಿ ದೆವ್ವದ ಸಿನಿಮಾಗಳಲ್ಲಿ ದೆವ್ವಗಳು ಜನರನ್ನು ಎದುರಿಸುತ್ತವೆ, ಆದರೆ ನಿರ್ದೇಶಕರು ಇಲ್ಲಿ ಬರೀ ಶಬ್ಧದಿಂದಲೇ ಪ್ರೇಕ್ಷಕರನ್ನುಭಯ ಪಡಿಸುವ ಪ್ರಯತ್ನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪ್ಯಾರಾ ನಾರ್ಮಲ್ ಕಥೆಯನ್ನು ಹೆಣೆದಿದ್ದು, ಅದು ಸಹ ಪ್ರೇಕ್ಷಕನನ್ನು ಕುತೂಹಲಗೊಳಿಸುತ್ತದೆ.
ಒಂದಷ್ಟು ಕುತೂಹಲಕಾರಿ ಅಂಶಗಳಿದ್ದರೂ, ಚಿತ್ರ ಗೆಲ್ಲುವುದೇ ದ್ವಿತೀಯಾರ್ಧದಲ್ಲಿ. ಇನ್ನು ತಿಥಿ ಖ್ಯಾತಿಯ ಗಡ್ಡಪ್ಪ ಮುಖ್ಯ ಪಾತ್ರಧಾರಿಯಾಗಿದ್ದಾರೆ. ಅವರ ಎಷ್ಟೋ ಡೈಲಾಗ್‌ಗಳನ್ನು ತಿಥಿ ಚಿತ್ರದಿಂದ ಯಥವತ್ತಾಗೆ ಎತ್ತಿದ್ದಾರೆ. ಇಂತಹ ಹಾರರ್ ಸಿನಿಮಾಗಳ ಜೀವಾಳವೇ ಹಿನ್ನೆಲೆ ಸಂಗೀತ ಇದು ಸಹ ಕಮರೊಟ್ಟುವಿನಲ್ಲಿ ಕಥೆಗೆ ಮತ್ತು ಚಿತ್ರಕಥೆಗೆ ಪೂರಕವಾಗಿದೆ.
ನಾಯಕ ಸನತ್, ಉತ್ಪಲ್, ಅಹಲ್ಯ ಸುರೇಶ್ ಸೇರಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನಿಶಾ ವರ್ಮಾ ಅವರ ಪಾತ್ರ ಪೋಷಣೆ ಚೆನ್ನಾಗಿದೆ. ನಿರೂಪಣೆಯಲ್ಲಿ ಇನ್ನೊಂದಿಷ್ಟು ಬಿಗಿ ಮಾಡಿದ್ದರೆ ಸಿನಿಮಾ ಇನ್ನಷ್ಟು ಚೆನ್ನಾಗಿ ಮೂಡಿಬರುತ್ತಿತ್ತು. ಕಮರೊಟ್ಟು ಚೆಕ್‌ಪೋಸ್ಟ್‌ಗೆ ಒಮ್ಮೆ ಹೋಗಿ ಬರಲು ಅಡ್ಡಿಯಿಲ್ಲ.
