Cinema News

“ಕಮರೊಟ್ಟು ಚೆಕ್‌ ಪೋಸ್ಟ್‌” ಹೆಸರಲ್ಲಿದೆ ಗೇಮ್‌

Published

on

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಹೆಸರಿನಲ್ಲಿ ಗೇಮ್‌ಗಳು ಲಾಂಚ್‌ ಆಗುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಪಂಚತಂತ್ರ ಸಿನಿಮಾದ ಗೇಮ್‌ ಲಾಂಚ್‌ ಆಗಿ ಒಂದಷ್ಟು ಸದ್ದು ಮಾಡಿತ್ತು. ಈಗ ಹೊಸಬರ ಕಮರೊಟ್ಟು ಚೆಕ್‌ ಪೋಸ್ಟ್‌ ಎಂಬ ಸಿನಿಮಾದ ಗೇಮ್‌ ಕೂಡಾ ಲಾಂಚ್‌ ಆಗಿದೆ.

 

ಕೆಲ ದಿನಗಳ ಹಿಂದೆ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಈ ಗೇಮ್‌ನ್ನು ಲಾಂಚ್‌ ಮಾಡಿದ್ದಾರೆ.ವಿಶೇಷ ಎಂದರೆ ಈ ಗೇಮ್‌ನಲ್ಲಿ ತಿಥಿ ಖ್ಯಾತಿಯ ಗಡ್ಡಪ್ಪನೇ ಮುಖ್ಯ ಆಕರ್ಷಣೆಯಾಗಿದ್ದಾರೆ.

 

 

ಭಾರತದ ಮೊದಲ ಪ್ಯಾರಾ ನಾರ್ಮಲ್‌ ಚಿತ್ರ ಎಂದು ಹೆಸರು ಮಾಡುತ್ತಿರುವ ಕಮರೊಟ್ಟು ಚೆಕ್ ಪೋಸ್ಟ್‌ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಈ ಸಿನಿಮಾದಲ್ಲಿ ಉತ್ಪಲ್‌, ಸನತ್‌ ನಾಯಕರಾಗಿ ನಟಿಸಿದ್ದಾರೆ.

 

ಈ ಸಿನಿಮಾ ಕಥೆ ಬಹಳ ವಿಶೇಷವಾಗಿದ್ದು, ಖಂಡಿತಾ ಜನ ಇಷ್ಟಪಡುತ್ತಾರೆ ಎನ್ನುವುದು ನಿರ್ದೇಶಕ ಪರಮೇಶ್‌ ಮಾತಾಗಿದೆ. ಪರಮೇಶ್‌ ಈ ಹಿಂದೆ ಮಾಮೂ ಟೀ ಅಂಗಡಿ ಎಂಬ ಸಿನಿಮಾ ಮೂಲಕ ಗಮನ ಸೆಳೆದಿದ್ದರು.

 

ಒಟ್ಟಿನಲ್ಲಿ ಹೊಸಬರ ಚಿತ್ರವೊಂದು ಗೇಮ್‌ ಮತ್ತು ಹೊ ರೀತಿಯ ಕಥೆಯೊಂದಿಗೆ ಸದ್ದು ಮಾಡುತ್ತಿದೆ. 

 

Spread the love
Click to comment

Copyright © 2019 PopcornKannada.com