Cinema News
‘ಕಬ್ಜ’ದಲ್ಲಿ ನಟಿಸುತ್ತಿಲ್ಲ ಎಂದ ಕಾಜಲ್ ಅಗರವಾಲ್
ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್‌ವಾಲ್ ಕಬ್ಜ ಸಿನಿಮಾದ ಮೂಲಕ ಕನ್ನಡಕ್ಕೆ ಬರುತ್ತಾರೆ ಎಂದು ಸುದ್ದಿಯಾಗಿತ್ತು ಆದರೆ ನಾನು ಕಬ್ಜದಲ್ಲಿ ನಟಿಸುತ್ತಿಲ್ಲ ಎಂದು ಸ್ವತಃ ಕಾಜಲ್ ಅಗರ್‌ವಾಲ್ ಅವರೇ ಸ್ಪಷ್ಟಪಡಿಸಿದ್ದಾರೆ ಎನ್ನಲಾಗುತ್ತಿದೆ.
ಆರ್ ಚಂದ್ರು ನಿರ್ದೇಶನದ ಬಿಗ್ ಬಜೆಟ್‌ನ ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಹಾಗಾಗಿ ಈ ಚಿತ್ರಕ್ಕೆ ಕಾಜಲ್ ಅವರೇ ಸೂಕ್ತ ಎನ್ನಲಾಗಿತ್ತು. ಚಂದ್ರು ಕೂಡಾ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಿದ್ದರು. ಆದರೆ ಅದ್ಯಾಕೋ ಸಫಲವಾದಂತೆ ಕಂಡಿಲ್ಲ.
ಈ ಮೊದಲು ನಟಿ ಕಾಜಲ್ ಅಗರವಾಲ್ ಅವರು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್-ರಚಿತಾ ರಾಮ್ ಜೋಡಿಯ ‘ಚಕ್ರವ್ಯೂಹ’ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದರು. ಆದರೆ ನಟನೆ ಮಾತ್ರ ಇದುವರೆಗೂ ಮಾಡಿಲ್ಲ.