Connect with us

Cinema News

ಎನ್​.ಟಿ.ಆರ್​ 30′ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಜಾಹ್ನವಿ ಕಪೂರ್

Published

on

ಜನತಾ ಗ್ಯಾರೇಜ್​’ ನಂತರ ತೆಲುಗಿನ ಸ್ಟಾರ್​ ನಟ ಜ್ಯೂನಿಯರ್​ ಎನ್​.ಟಿ.ಆರ್​ ಮತ್ತು ನಿರ್ದೇಶಕ ಕೊರಟಾಲ ಶಿವ ಹೊಸ ಚಿತ್ರವೊಂದಕ್ಕೆ ಕೈ ಜೋಡಿಸಿದ್ದು, ಆ ಚಿತ್ರದ ಮುಹೂರ್ತ ಮಾರ್ಚ್​ ಅಂತ್ಯದ ಹೊತ್ತಿಗೆ ನೆರವೇರಲಿದೆ. ಈ ಚಿತ್ರ ಘೋಷಣೆಯಾದಾಗಿನಿಂದಲೂ, ಹೊಸ ಹೊಸ ಅಪ್​ಡೇಟ್​ ಕೊಡುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಲೇ ಇದ್ದಾರೆ. ಸೋಮವಾರ ಚಿತ್ರತಂಡದವರು ಒಂದು ಸಂತೋಷದ ವಿಷಯವನ್ನು ಹಂಚಿಕೊಂಡಿದ್ದು, ಈ ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್​ ನಟಿ ಜಾಹ್ನವಿ ಕಪೂರ್​ ಆಯ್ಕೆಯಾಗಿದ್ದಾರೆ.

ಸೋಮವಾರ, ಜಾಹ್ನವಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಆಕೆಗೆ ಶುಭಾಶಯ ಕೋರುವ ಪೋಸ್ಟರ್​ವೊಂದನ್ನು ಚಿತ್ರತಂಡದವರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಆಕೆಯನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿದ್ದಾರೆ.
ಜ್ಯೂನಿಯರ್​ ಎನ್​.ಟಿ.ಆರ್​ ಜತೆಗೆ ನಟಿಸಬೇಕು ಎಂಬ ಆಸೆಯನ್ನು ಜಾಹ್ನವಿ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಆ ಆಸೆ ಈಗ ‘ಎನ್.ಟಿ.ಆರ್​ 30’ ಮೂಲಕ ಈಡೇರಲಿದೆ. ಈ ಚಿತ್ರವು ಬರೀ ಆಕ್ಷನ್​ ಚಿತ್ರವಷ್ಟೇ ಅಲ್ಲ, ಒಂದು ಅದ್ಭುತ ಸೆಂಟಿಮೆಂಟ್​ ಚಿತ್ರವಾಗಿರಲಿದೆ ಎಂದು ಚಿತ್ರತಂಡದವರು ಅಭಿಪ್ರಾಯ ಪಟ್ಟಿದ್ದಾರೆ.

ಯುವಸುಧಾ ಆರ್ಟ್ಸ್​ ಮತ್ತು ಎನ್​.ಟಿ.ಆರ್​ ಆರ್ಟ್ಸ್​ ಸಂಸ್ಥೆಗಳಡಿ ಮಿಕ್ಕಿಲಿನೇನಿ ಸುಧಾಕರ್​ ಮತ್ತು ಹರಿಕೃಷ್ಣ ಕೆ ನಿರ್ಮಿಸುತ್ತಿರುವ ಈ ಚಿತ್ರವನ್ನು ನಂದಮೂರಿ ಕಲ್ಯಾಣ್ ರಾಮ್​ ಅರ್ಪಿಸುತ್ತಿದ್ದಾರೆ. ರತ್ನವೇಲು ಛಾಯಾಗ್ರಹಣ, ‘ರಾಕ್​ಸ್ಟಾರ್​’ ಅನಿರುದ್ಧ್​ ಸಂಗೀತ ಮತ್ತು ಶ್ರೀಕರ್​ ಪ್ರಸಾದ್​ ಅವರ ಸಂಕಲನವಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳು ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದು, ಈ ಚಿತ್ರ 2024ರ ಏಪ್ರಿಲ್​ 05ರಂದು ಬಿಡುಗಡೆಯಾಗುತ್ತಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *