Cinema News
ಪ್ಯಾನ್ ಇಂಡಿಯಾ ಸಿನಿಮಾಗೆ ಬೋಯಾಪಟಿ ಶ್ರೀನು ಮುನ್ನುಡಿ..ರಾಮ್ ಪೋತಿನೇನಿ ಜೊತೆ ಕೈಜೋಡಿಸಿದ ಅಖಂಡ ಡೈರೆಕ್ಟರ್

ಟಾಲಿವುಡ್ ನ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಹಾಗೂ ಬೋಯಾಪಟಿ ಶ್ರೀನು ಕಾಂಬೋದ ಅಖಂಡ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರಿದ್ದು, ಇದೀಗ ನಿರ್ದೇಶಕ ಬೋಯಾಪಟಿ ಶ್ರೀನು ಪ್ಯಾನ್ ಇಂಡಿಯಾ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಇಸ್ಮಾರ್ಟ್ ಶಂಕರ್ ಸಿನಿಮಾ ಖ್ಯಾತಿಯ ಹೀರೋ ರಾಮ್ ಪೋತಿನೇನಿ, ಬೋಯಾಪಾಟಿ ಮತ್ತು ನಿರ್ಮಾಪಕ ಶ್ರೀನಿವಾಸ ಚಿತ್ತೂರಿ ಈ ತ್ರಿವಳಿಗಳು ಜೊತೆಗೂಡಿ ಪ್ಯಾನ್ ಇಂಡಿಯಾ ಸಿನಿಮಾಗೆ ಮುನ್ನುಡಿ ಬರೆದಿದ್ದಾರೆ.

ನಿರ್ಮಾಪಕ ಶ್ರೀನಿವಾಸ ಚಿತ್ತೂರಿ ಶ್ರೀನಿವಾಸ ತಮ್ಮದೇ ಸಿಲ್ವರ್ ಸ್ಕ್ರೀನ್ ಬ್ಯಾನರ್‌ನ ಅಡಿಯಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಬ್ಲಾಕ್‌ಬಸ್ಟರ್‌ಗಳ ನೀಡಿದ್ದು, ಸದ್ಯ ರಾಮ್ ಪೋತಿನೇನಿ ಅಭಿನಯದ ಮತ್ತು ಎನ್ ಲಿಂಗುಸಾಮಿ ನಿರ್ದೇಶನದ ದಿ ವಾರಿಯರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾ ರಿಲೀಸ್ ಮುನ್ನ ಮತ್ತೊಂದು ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.

ರಾಮ್ ಪೋತಿನೇನಿ ತೆಲುಗು ಚಿತ್ರರಂಗದ ಕ್ರೇಜಿ ಹೀರೋಗಳಲ್ಲಿ ಒಬ್ಬರು. ಈಗಾಗಲೇ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ರಾಮ್ ಈಗ ಬೋಯಾಪಟಿ ಶ್ರೀನು ಜೊತೆ ಕೈ ಜೋಡಿಸಿದ್ದು, ಒಂದು ದೊಡ್ಡ ಮೆಗಾ ಪ್ರಾಜೆಕ್ಟ್ ಸಿನಿಮಾ ತಯಾರಾಗಲಿದೆ. ಹೊಸ ಸಿನಿಮಾ ಬಗ್ಗೆ ಅನೌನ್ಸ್ ಮಾಡಿರುವ ಚಿತ್ರತಂಡ, ಸದ್ಯದಲ್ಲಿಯೇ ಸಿನಿಮಾದ ಟೈಟಲ್, ನಾಯಕಿ ಮತ್ತು ಇತರ ಪಾತ್ರವರ್ಗಗಳ ಬಗ್ಗೆ ಮಾಹಿತಿ ನೀಡಲಿದೆ.

