Connect with us

Cinema News

“ದಿ ರೂಲರ್” ಟೀಸರ್ ಮೂಲಕ ರಾಜ್ ಬಿ ಶೆಟ್ಟಿ ಅವರ ಪಾತ್ರ ಪರಿಚಯ*

Published

on

ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ – ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ, ಜಡೇಶ್ ಕೆ.ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್, ರಚಿತರಾಮ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರದ ಸರ್ವೈವರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಜನಮನಸೂರೆಗೊಂಡಿದೆ. ಈಗ ಈ ಚಿತ್ರದ “ದಿ ರೂಲರ್” ಟೀಸರ್ ಬಿಡುಗಡೆಯಾಗಿದೆ‌. “ದಿ ರೂಲರ್” ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದಾರೆ. ಇದು ರಾಜ್ ಬಿ ಶೆಟ್ಟಿ ಅವರ ಪಾತ್ರ ಪರಿಚಯದ ಟೀಸರ್ ಆಗಿದೆ. “ದಿ ರೂಲರ್” ಟೀಸರ್ ನೋಡಿದ ರಾಜ್ ಬಿ ಶೆಟ್ಟಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಬಹು ನಿರೀಕ್ಷಿತ ಈ ಚಿತ್ರ 2026ರ ಜನವರಿ 23 ರಂದು ಬಿಡುಗಡೆಯಾಗುತ್ತಿದೆ. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಈ ಚಿತ್ರ ಒಪ್ಪಿಕೊಳ್ಳಲು ಮೊದಲ ಕಾರಣ ನಿರ್ದೇಶಕ ಜಡೇಶ್ ಅವರು‌ ಎಂದು ಮಾತನಾಡಿದ ನಟ ರಾಜ್ ಬಿ ಶೆಟ್ಟಿ, ಏಕೆಂದರೆ ಒಬ್ಬ ನಿರ್ದೇಶಕ ಗೆಲ್ಲಲ್ಲೇಬೇಕು ಎಂದು ಬಯಸುವವನು ನಾನು. ಈ ಚಿತ್ರದಲ್ಲಿ ನನ್ನದು ಶೋಷಕ ವರ್ಗದಲ್ಲಿರುವಂತಹ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವಂತಹ ವ್ಯಕ್ತಿಯ ಪಾತ್ರ. ಈ ಪಾತ್ರಕ್ಕೆ ಕೂದಲಿರಬೇಕು ಎಂದು ನಿರ್ದೇಶಕರು ಹೇಳಿದರು. ನಾನು ಬೇಕಾ? ಎಂದು ಕೇಳಿದೆ. ಏಕೆಂದರೆ ಕೆಲವು ವಿಗ್ ಗಳು ನನಗೆ ಸೆಟ್ ಆಗುವುದಿಲ್ಲ. ನಾನೊಂದು ಕಡೆ‌.‌ ಅದೊಂದು ಕಡೆ ಆಗುತ್ತದೆ. ನಾನು ಹಾಗೂ ವಿಗ್ ಇಬ್ಬರೂ ಒಟ್ಟಿಗೆ ನಟಿಸಬೇಕು ಅಂತ ವಿಗ್ ಬೇಕು ಅಂತ ಹೇಳಿದೆ. ಹಾಗಾಗಿ ನನಗೆ ತಿಳಿದಿರುವವರ ಬಳಿ ವಿಗ್ ತರಿಸಿಕೊಳ್ಳುತ್ತೇನೆ. ಅವರು ನನಗೆ ಸರಿ ಹೊಂದುವ ವಿಗ್ ಕೊಡುತ್ತಾರೆ ಎಂದೆ. ಟೀಸರ್ ನೋಡಿದಾಗ ನನ್ನ ತಲೆಗೆ ವಿಗ್ ಸರಿ ಹೊಂದಿದೆ ಎನಿಸಿತು. ಕೋಲಾರ ಭಾಷೆಯಲ್ಲಿ ನನ್ನ ಸಂಭಾಷಣೆ ಇರುತ್ತದೆ. ದುನಿಯಾ ವಿಜಯ್ ಅವರ ಜೊತೆಗೆ ಮೊದಲ ಬಾರಿಗೆ ನಟಿಸಿದ್ದೇನೆ. ಬಹಳ ಖುಷಿಯಾಗಿದೆ. ನಿರ್ಮಾಪಕರಿಗೆ ಒಳ್ಳೆಯದಾಗಲಿ‌. ಈ ಚಿತ್ರ ಯಶಸ್ವಿಯಾಗಲಿ ಎಂದರು.

ನಾನು ಇಪ್ಪತ್ತು ವರ್ಷಗಳ ಹಿಂದೆ “ನನ್ತಾವ ಇರೋದು ಎರಡೇ ಎರಡು ಟೊಮೆಟೊ, ಹದಿನೈದೇ ರೂಪಾಯಿ ಕಾಣ್ಣಣ್ಣ” ಅಂತ ಬಂದೆ. ರಾಜ್ ಬಿ ಶೆಟ್ಟಿ ಅವರು ಒಂದು ಮೊಟ್ಟೆ ಇಟ್ಟುಕೊಂಡು ಬಂದವರು. ಆಗ ನಮ್ಮನ್ನು ಎಷ್ಟು ಜನ ಆಡಿಕೊಂಡಿದ್ದಾರೆ. ಕೊನೆಗೆ ನಾನೇ “ಸರ್ವೈವರ್”, ಅವರೆ “ರೂಲರ್” ಆಗಿದ್ದೀವಿ. ಆಡಿಕೊಂಡವರಿಗೆಲ್ಲಾ ತುಂಬು ಹೃದಯದ ಧನ್ಯವಾದ. ಈ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ. ಜಡೇಶ್ ಅವರ ಕಥೆ ಕೇಳಿ ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಜನವರಿ 23 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಮೂರು ಹಾಡುಗಳು ಹಾಗೂ ಟ್ರೇಲರ್ ಅನಾವರಣವಾಗಲಿದೆ ಎಂದು ನಾಯಕ ದುನಿಯಾ ವಿಜಯ್ ತಿಳಿಸಿದರು.

ಮೊದಲು ಈ ಚಿತ್ರದ ಕಥೆ ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದ ನಿರ್ಮಾಪಕರಿಗೆ ಧನ್ಯವಾದ. ಇನ್ನೂ ಈ ಚಿತ್ರದಲ್ಲಿ ನಟಿಸಿರುವ ದುನಿಯಾ ವಿಜಯ್ ಅವರು 50 ವರ್ಷ ವಯಸ್ಸಾದವರ ಪಾತ್ರದಲ್ಲಿ, ರಚಿತರಾಮ್ ಅವರು ಒಂದು ಮಗುವಿನ ತಾಯಿಯ ಪಾತ್ರದಲ್ಲಿ, ರಾಜ್ ಬಿ ಶೆಟ್ಟಿ ಅವರು “ದಿ ರೂಲರ್” ಪಾತ್ರದಲ್ಲಿ ಹೀಗೆ ಅವರೆಲ್ಲರೂ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪರಾಗಲಿ ಹಾಗೂ ಕಲಾವಿದರಾಗಲಿ ನನಗೆ ಪೂರ್ಣ ಸ್ವತಂತ್ರ ಕೊಟ್ಟಿದ್ದಾರೆ. ಯಾರು ಕೂಡ ಯಾವುದನ್ನು ಪ್ರಶ್ನೆ ಮಾಡಲಿಲ್ಲ‌. ಅದರಿಂದ ನಾನು ಅಂದಕೊಂಡ ಹಾಗೆ ಈ ಚಿತ್ರ ಬರಲು ಸಾಧ್ಯವಾಯಿತು ಎಂದರು ಚಿತ್ರದ ನಿರ್ದೇಶಕ ಜಡೇಶ್ ಕೆ ಹಂಪಿ.

ಕಳೆದ ತಿಂಗಳು ನಮ್ಮ ಚಿತ್ರದ “ದಿ ಸರ್ವೈವರ್” ಟೀಸರ್ ಬಿಡುಗಡೆಯಾಗಿತ್ತು. ಈಗ “ದಿ ರೂಲರ್” ಟೀಸರ್ ಅನಾವರಣವಾಗಿದೆ. ನಮ್ಮ ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ರಾಜ್ ಬಿ ಶೆಟ್ಟಿ ಅವರಿಬ್ಬರು ನಟಿಸಿರುವುದು ಬಹಳ ಸಂತೋಷವಾಗಿದೆ. ಆರಂಭದಿಂದಲೂ ತಾವು ನೀಡುತ್ತಿರುವ ಪ್ರೋತ್ಸಾಹ ಹೀಗೆ ಮುಂದುವರೆಯಲಿ ಎಂದು ನಿರ್ಮಾಪಕ ಹೇಮಂತ್ ಗೌಡ ಹೇಳಿದರು.

ನಾನು ಈ ಚಿತ್ರದಲ್ಲಿ ಪದ್ಮ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕೋಲಾರ ಭಾಷೆಯಲ್ಲೇ ನನ್ನ ಸಂಭಾಷಣೆ ಕೂಡ ಇರುತ್ತದೆ ಎಂದು ನಟಿ ಭಾವನಾರಾವ್ ತಿಳಿಸಿದರು.

ಸಂಭಾಷಣೆ ಬರೆದಿರುವ ಮಾಸ್ತಿ, ಶ್ರೀಕಾಂತ್, ಮಂಜುನಾಥ್ (ಕೋಲಾರ ಭಾಗ), ಚಿತ್ರದಲ್ಲಿ ನಟಿಸಿರುವ ರಾಕೇಶ್ ಅಡಿಗ, ಶಿಶಿರ್, ಮಿತ್ರ, ಅಭಿಷೇಕ್ ದಾಸ್, ಮಹಾಂತೇಶ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಸ್ವಾಮಿ ಜೆ ಗೌಡ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *