Cinema News
ಇಂಥ ಸ್ಟಾರ್ ನಟನ ಜತೆ ನಟಿಸಿದ್ದು ನನ್ನ ಕರಿಯರ್‌ನ ಅದೃಷ್ಟ

ಬಾಲಿವುಡ್ ನಟಿ ದಿಶಾ ಪಠಾಣಿ ‘ಭಾರತ್’ ಚಿತ್ರದಲ್ಲಿ ಸಲ್ಮಾನ್ ಖಾನ್ ಜತೆ ನಟಿಸಿದ್ದು ನನ್ನ ಅದೃಷ್ಟ ಎಂದು ಹೇಳಿದ್ದಾರೆ.

ಭಾರತ್ ಸಿನಿಮಾದಲ್ಲಿ ದಿಶಾ ಪಠಾಣಿ ಟ್ರಾಪಜಿ ಕಲಾವಿದೆಯಾಗಿ ನಟಿಸಿದ್ದಾರೆ. ಇವರು ನಟಿಸಿರುವ ದೃಶ್ಯಗಳಲ್ಲಿ ಸಲ್ಲು 20-30ರ ಹರೆದಯವರಂತೆ ತೋರಿಸಲಾಗಿದೆ. ನಾನು ಅವರ ಜತೆ ಸ್ಕ್ರೀನ್ ಶೇರ್ ಮಾಡಿದ್ದು ನನ್ನ ಬದುಕಿನ ಅದೃಷ್ಟ. ಆದರೆ ನಮ್ಮಿಬ್ಬರ ನಡುವೆ ಜಾಸ್ತಿ ವಯಸ್ಸಿನ ಅಂತರವಿರುವುದರಿಂದ ಇನ್ನು ಮುಂದೆ ಅವರ ಜತೆ ನಟಿಸಲು ಸಾಧ್ಯವಿಲ್ಲ ಎಂದು ತಿಳಿದು ನನಗೆ ಬೇಸರವಾಗಿದೆ ಎಂದು ಸಹ ಅವರು ಹೇಳಿದ್ದಾರೆ.
ಭಾರತ್ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿವೆ. ಸದ್ಯದಲ್ಲೆ ಸಿನಿಮಾ ಬಿಡುಗಡೆಯಾಗುತ್ತಿದೆ.

Continue Reading