Cinema News
“ಅವನೇ ಶ್ರೀಮನ್ನಾರಾಯಣ” ಟಿಕೆಟ್ಸ್ ಗೆ ಬಂತು ಹೆವಿ ಡಿಮ್ಯಾಂಡ್.

ಪುಷ್ಕರ್ ಫಿಲಂಸ್ ಹಾಗೂ ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಕೆ.ಹೆಚ್.ಪ್ರಕಾಶ್ ಅವರು ನಿರ್ಮಿಸಿರುವ `ಅವನೇ ಶ್ರೀಮನ್ನಾರಾಯಣ` ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.
ಚಿತ್ರದ ಅಡ್ವಾನ್ಸ್ ಬುಕಿಂಗ್ಸ್ ತೆರೆದಿದ್ದು, ಟಿಕೆಟ್‌ಗಳು ಭರ್ಜರಿಯಾಗಿ ಬಿಕರಿಯಾಗುತ್ತಿವೆ. ಈಗಾಗಲೇ 150ಕ್ಕೂ ಹೆಚ್ಚು ಶೋಗಳು ಬಹುತೇಕ ಸೋಲ್ಡ್ ಔಟ್ ಆಗಿವೆ. ಚಿತ್ರಕ್ಕೆ ಬೆಂಗಳೂರು,ಮೈಸೂರು, ಮಂಗಳೂರು ಚಿತ್ರಮಂದಿರಗಳಲ್ಲಿ ಥಿಯೇಟರ್ ಕಡೆಯಿಂದ ಭಾರೀ ಬೇಡಿಕೆಯಿದೆ.
ಬೆಂಗಳೂರಿನ ಅತಿ ದೊಡ್ಡ ಥಿಯೇಟರ್ ಉರ್ವಶಿಯಲ್ಲೂ ಕೂಡ 4 ಆಟಗಳು ಬಹುತೇಕ ಭರ್ತಿಯಾಗಿವೆ. 3 ವರ್ಷದ ನಂತರ ತೆರೆಮೇಲೆ ಬರುತ್ತಿರುವ ರಕ್ಷಿತ್ ಶೆಟ್ಟಿ ಚಿತ್ರದ ಮೇಲೆ ಸಹಜವಾಗಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.

ರಕ್ಷಿತ್ ಶೆಟ್ಟಿ ಹಾಗೂ the seven odds ಚಿತ್ರಕ್ಕೆ ಕಥೆ ಬರೆದಿದ್ದು, ಸಚಿನ್ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಹಾಗೂ ಚರಣ ರಾಜ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಹಿನ್ನೆಲ್ಲೆ ಸಂಗೀತ ನೀಡಿದ್ದಾರೆ. ಕರಮ್ ಚಾವ್ಲಾ ಛಾಯಾಗ್ರಹಣ, ಸಚಿನ್ ಸಂಕಲನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಇಮ್ರಾನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಶಾನ್ವಿ ಶ್ರೀವಾತ್ಸವ್. ಅಚ್ಯುತಕುಮಾರ್, ಬಾಲಾಜಿ ಮನೋಹರ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ರಘು ರಮಣಕೊಪ್ಪ, ವಿಜಯ್ ಚೆಂಡೂರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
