Cinema News
ವರಮಹಾಲಕ್ಷ್ಮಿ ಹಬ್ಬಕ್ಕೆ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ತೆರೆಗೆ
ರಾಜ್ ಬಿ ಶೆಟ್ಟಿ ನಟನೆಯ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ಈ ಬಾರಿಯ ವರಮಹಾಲಕ್ಷ್ಮೀ ಹಬ್ಬಕ್ಕೆ(ಆಗಸ್ಟ್ 9) ಬಿಡುಗಡೆಯಾಗುತ್ತಿದೆ.
ಒಂದು ಮೊಟ್ಟೆಯ ಖ್ಯಾತಿಯ ರಾಜ್ ಬಿ ಶೆಟ್ಟಿ ಮತ್ತು ಕವಿತಾ ಗೌಡ ನಟನೆಯ ಈ ಸಿನಿಮಾವನ್ನು ಸುಜಯ್ ಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ. ಬೆಲ್‌ಬಾಟಮ್ ಸಿನಿಮಾದಲ್ಲಿ ಸೆಗಣಿ ಪಿಂಟೋ ಪಾತ್ರ ಮಾಡಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದ ಸುಜಯ್ ಶಾಸ್ತ್ರಿ ಈ ಸಿನಿಮಾ ಮೂಲಕ ಮೊದಲಬಾರಿಗೆ ನಿರ್ದೇಶಕರಾಗುತ್ತಿದ್ದಾರೆ.
ಅಯೋಗ್ಯ, ಚಮಕ್, ಬೀರಬಲ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿ ನಿರ್ಮಾಪಕ ಎಂದೇ ಹೆಸರು ಮಾಡಿರುವ ಟಿ ಆರ್ ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಂಪ್ಲೀಟ್ ಕಾಮಿಡಿ ಎಂಟರ್‌ಟೇನರ್ ಆಗಿರುವ ಈ ಸಿನಿಮಾ ಶನಿವಾರವಷ್ಟೇ ಸೆನ್ಸಾರ್ ಆಗಿದ್ದು, ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.
ಒಟ್ಟಿನಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರದ ಮೂಲಕ ನಗಿಸಲು ರಾಜ್ ಬಿ ಶೆಟ್ಟಿ ಬರುತ್ತಿದ್ದಾರೆ.