Cinema News
“ಬಾನದಾರಿಯಲ್ಲಿ” ಪಯಣಿಸಲು ಸಿದ್ದರಾದ ಗೋಲ್ಡನ್ ಸ್ಟಾರ್ ಗಣೇಶ್.

ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರಕ್ಕೆ ಮೇ ನಲ್ಲಿ ಚಾಲನೆ
“ಮಳೆಯಲಿ ಜೊತೆಯಲಿ” ಜೊತೆಯಾದ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಜೋಡಿ ಈಗ “ಬಾನದಾರಿಯಲ್ಲಿ” ಸಾಗಲಿದೆ.
ಇವರಿಬ್ಬರ ಕಾಂಬಿನೇಶನಲ್ಲಿ ಬರುತ್ತಿರುವ ಈ ಚಿತ್ರಕ್ಕೆ “ಬಾನದಾರಿಯಲ್ಲಿ” ಎಂದು ಹೆಸರಿಡಲಾಗಿದೆ. ಮೇನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಯುಗಾದಿ ಹಬ್ಬದ ಶುಭದಿನದಂದು ಪೋಸ್ಟರ್ ಬಿಡುಗಡೆಯಾಗಿದೆ.
ಪ್ರೀತಂಗುಬ್ಬಿ ನಿರ್ದೇಶನದಲ್ಲಿ ಗಣೇಶ್ ಈ ಹಿಂದೆ “ಮಳೆಯಲಿ ಜೊತೆಯಲಿ” , “ದಿಲ್ ರಂಗೀಲಾ” ಹಾಗೂ “99” ಚಿತ್ರಗಳಲ್ಲಿ ನಟಿಸಿದ್ದರು. ಇದು ನಾಲ್ಕನೇ ಚಿತ್ರ.

“ಬಾನದಾರಿಯಲ್ಲಿ” ಗೆ ನೋಡು ಎಂಥಾ ಚೆಂದ ಎಂಬ ಅಡಿಬರಹವಿದೆ.
ವಿ.ಹರಿಕೃಷ್ಣ ಸಂಗೀತ ನಿರ್ದೇಶನ, ಪ್ರೀತ ಜಯರಾಂ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.
ಪುನೀತ್ ರಾಜಕುಮಾರ್ ಅವರು ಹಾಡಿದ್ದ “ಬಾನದಾರಿಯಲ್ಲಿ” ಹಾಡು ಇಂದಿಗೂ, ಎಂದೆಂದಿಗೂ ಜನಪ್ರಿಯ.. ಆ ಹಾಡಿನ ಮೊದಲ ಪದವೇ ಈ ಚಿತ್ರದ ಶೀರ್ಷಿಕೆಯಾಗಿದ್ದು, ಆ ಹಾಡಿನಷ್ಟೇ ಈ ಚಿತ್ರ ಕೂಡ ಯಶಸ್ಸು ಕಾಣಲಿ..
