Reviews

ದೆವ್ವಕ್ಕೂ ‘ಗಿಮಿಕ್’ ಮಾಡಿದ ಗಣೇಶ್‌ – ‘ಗಿಮಿಕ್’ ಟ್ರೇಲರ್ ವಿಮರ್ಶೆ

Published

on

ಕಾಮಿಡಿ, ಆ್ಯಕ್ಷನ್‌, ರೊಮ್ಯಾನ್ಸ್‌ ಎಲ್ಲ ಪಾತ್ರಗಳಲ್ಲಿಯೂ ಮಿಂದಿದ್ದೆರುವ ಗಣೇಶ್‌ ಈಗ ದೆವ್ವಕ್ಕೆ ಗಿಮಿಕ್‌ ಮಾಡುತ್ತಿದ್ದಾರೆ. ಹೌದು ನಾಗಣ್ಣ ನಿರ್ದೇಶನದ ಗಿಮಿಕ್‌ ಚಿತ್ರದಲ್ಲಿ ಗಣೇಶ್‌ ನಟಿಸಿದ್ದು, ಅದರ ಟ್ರೇಲರ್‌ ಬಿಡುಗಡೆಯಾಗಿದೆ.

 

ಈ ಟ್ರೇಲರ್‌ನಲ್ಲಿ ಗಣೇಶ್‌ ಅವರ ನಟನೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ದೆವ್ವದ ಜತೆಗೆ ಮಾಡುವ ಕಾಮಿಡಿ ಅವರ ಅಭಿಮಾನಿಗಳನ್ನು ರಂಜಿಸಿದೆ. ಈ ಸಿನಿಮಾ ಒಂದು ಮನೆಯ ಸುತ್ತ ನಡೆಯುತ್ತದೆ ಎಂಬುದು ಟ್ರೇಲರ್‌ನಲ್ಲಿ ಗೊತ್ತಾಗುತ್ತದೆ.

ಟ್ರೈಲರ್ ನೋಡೋವರೆಗೂ ನಮಗೆ ಇದು ತಮಿಳಿನ “ಧಿಲ್ಲುಕು ದುಡ್ಡು” ಚಿತ್ರದ ರೀಮೇಕ್ ಎಂದು ತಿಳಿದಿರಲಿಲ್ಲ. ಟ್ರೇಲರ್ ನಲ್ಲಿ ಇದೊಂದು ಕಾಮಿಡಿ ಹಾರರ್ ಮಿಶ್ರಿತ ಚಿತ್ರ ಎಂದು ಹೇಳುವುದರ ಹೊರೆತು ಬೇರೇನೂ ಅಷ್ಟು ವಿಶೇಷವಾಗಿಲ್ಲ. ದೆವ್ವದ ಮನೇಲಿ ನಡೆಯುವ ಆಚಾತುರ್ಯಗಳನ್ನು ಚಿತ್ರದಲ್ಲಿ ನೋಡಬಹುದು. ಗ್ರ್ಯಾಫಿಕ್ಸ್ ವರ್ಕ್ಸ್ ತುಂಬಾ ಕೆಳಮಟ್ಟದಲ್ಲಿದೆ ಎಂದರೆ ತಪ್ಪೇನಿಲ್ಲ.

 

ಭಾನುವಾರವಷ್ಟೇ ಟ್ರೈಲರ್ ಬಿಡುಗಡೆಯಾಗಿದ್ದು, ಈಗಾಗಲೇ 6 ಲಕ್ಷಕ್ಕೂ ಅಧಿಕ ಮಂದಿ ಅದನ್ನು ನೋಡಿದ್ದಾರೆ. ಹಾಗಾಗಿ ಈ ಸಿನಿಮಾದ ಟ್ರೇಲರ್‌ ನಂ.1  ಸ್ಥಾನದಲ್ಲಿದೆ.

ರೋನಿಕಾ ಸಿಂಗ್,ಸಾಧುಕೋಕಿಲ, ಮಂಡ್ಯ ರಮೇಶ್, ಶೋಭರಾಜ್,ಗುರುದತ್ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರ ತೆರೆಗೆ ಬರಲಿದ್ದು, ಗಣೇಶ್‌ ಮತ್ತು ದೆವ್ವ ತೆರೆ ಮೇಲೆ ಮೋಡಿ ಮಾಡಲಿದೆ.

 

Spread the love
Click to comment

Copyright © 2019 PopcornKannada.com