Movie Reviews
ದೆವ್ವದ ಜತೆ ‘ಗಿಮಿಕ್’ ಮಾಡ್ತಾರೆ ಗಣೇಶ್ – ಸಿನಿಮಾ ವಿಮರ್ಶೆ – ರೇಟಿಂಗ್ – 2.5/5 !

ಚಿತ್ರ: ಗಿಮಿಕ್
ನಿರ್ಮಾಣ: ದೀಪಕ್
ನಿರ್ದೇಶನ: ನಾಗಣ್ಣ
ಸಂಗೀತ: ಅರ್ಜುನ್ ಜನ್ಯ
ತಾರಾಗಣ : ಗಣೇಶ್, ರೋನಿಕಾ ಸಿಂಗ್, ಸುಂದರರಾಜ್, ಶೋಭರಾಜ್, ಮಂಡ್ಯರಮೇಶ್, ಚಿ. ಗುರುದತ್, ರವಿಶಂಕರ್‌ಗೌಡ, ಸಂಗೀತಾ
ರೇಟಿಂಗ್: 2.5/5.

ಕೆಲ ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾರರ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಬರೀ ಹೊಸಬರೇ ಹಾರರ್ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರನ್ನು ಹೆದರಿಸುತ್ತಿದ್ದರು ಆ ಸಾಲಿಗೆ ಹೊಸ ಸೇರ್ಪಡೆ ಗೋಲ್ಡನ್ ಸ್ಟಾರ್ ಗಣೇಶ್. ಆದರೆ ಗಣೇಶ್ ಬರಿ ಹೆದರಿಸುವುದಿಲ್ಲ, ಕೊಂಚ ನಗಿಸಲು ಪ್ರಯತ್ನ ಪಟ್ಟಿದ್ದಾರೆ. ಹೊಸಬರ ಸಿನಿಮಾಗಳಿಗಿಂತಲೂ ಈ ಚಿತ್ರದ ಕಥೆ ಕೊಂಚ ಜಾಸ್ತಿ ಭಯ ಹುಟ್ಟಿಸುತ್ತದೆ.
ಗಣೇಶ್ ಇಲ್ಲಿ ಗಣೇಶ್ ಎಂಬ ಪಾತ್ರದ ಮೂಲಕ ತನ್ನ ಪ್ರೇಯಸಿಗಾಗಿ ಮನುಷ್ಯರು ಮತ್ತು ದೆವ್ವಗಳ ಜತೆ ಹೋರಾಟ ಮಾಡುತ್ತಾರೆ. ಹೋರಾಟ ಮಾಡುತ್ತಲೇ ಕೊಂಚ ಗಿಮಿಕ್ ಮಾಡಿ ತನ್ನ ಪ್ರೇಯಸಿಯನ್ನು ಪಡೆಯುವ ಪ್ರಯತ್ನ ಮಾಡುತ್ತಾರೆ. ಈ ಪ್ರಯತ್ನವನ್ನು ನೋಡಲು ಪ್ರತಿಯೊಬ್ಬರು ಚಿತ್ರಮಂದಿರಕ್ಕೆ ಹೋಗಬೇಕು.
ಯಾವುದೋ ಘಟನೆಯಲ್ಲಿ ಭೇಟಿ ಮಾಡುವ ಹುಡುಗಿಗಾಗಿ ಗಣೇಶ್ ಮಾಡುವ ಗಿಮಿಕ್‌ಗಳಲ್ಲಿ ಯಾವುದೇ ಲಾಜಿಕ್ ಇಲ್ಲ ಆದರೆ,ಎಂಟರ್‌ಟೇನ್‌ಮೆಂಟ್ ಇದೆ. ಸಿನಿಮಾದ ಫಸ್ಟ್ ಹಾಫ್ ಫುಲ್ ಕಾಮಿಡಿ, ಸೆಕೆಂಡ್ ಹಾಫ್ ಫುಲ್ ಹಾರರ್ ಎರಡು ಮಿಕ್ಸ್ ಆಗಿ ಗಿಮಿಕ್ ನೋಡುಗರಿಗೆ ಒಂದು ಕಂಪ್ಲೀಟ್ ಎಂಟರ್‌ಟೇನರ್ ಆಗಿದೆ.

ಈ ಸಿನಿಮಾವನ್ನು ಯಾರು ಬೇಕಾದರೂ ಮಾಡಬಹುದಿತ್ತು, ಆದರೆ ಗಣೇಶ್ ಮಾಡಿರುವುದರಿಂದ ಚಿತ್ರಕ್ಕೊಂದು ಸ್ಟಾರ್ ವ್ಯಾಲ್ಯೂ ಬಂದಿದೆ. ಗಣೇಶ್ ಸಹ ಎಂದಿಗಿಂತಲೂ ಕೊಂಚ ಲವಲವಿಕೆಯಿಂದ ಮತ್ತು ವಿಶೇಷವಾಗಿ ನಟಿಸಿ ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ನಾಯಕಿ ಪಾತ್ರ ಎಂದಿನಂತೆ ಕಲರ್‌ಫುಲ್ ಆಗಿದೆ.
ಗಣೇಶ್ ಮತ್ತು ದೆವ್ವಗಳ ಜತೆ ಸುಂದರ್‌ರಾಜ್, ರವಿಶಂಕರ್‌ಗೌಡ, ಮಂಡ್ಯ ರಮೇಶ್ ನಗಿಸುತ್ತಾರೆ. ಸಂಭಾಷಣೆ ಗಮನ ಸೆಳೆಯುತ್ತದೆ. ಇನ್ನು ಸಂಗೀತ ಹಾರರ್ ಸಬ್ಜೆಕ್ಟ್‌ಗೆ ಸಪೋರ್ಟ್ ಮಾಡಿಲ್ಲ ಎನ್ನಿಸುತ್ತದೆ. ಒಟ್ಟಿನಲ್ಲಿ ಇದು ಸಹ ಒಂದು ಮಾಮೂಲಿ ಹಾರರ್ ಸಿನಿಮಾನೇ ಆದರೆ ಇದರಲ್ಲಿ ಗಣೇಶ್ ನಟಿಸಿದ್ದಾರೆ ಅಷ್ಟೇ. ಈ ಚಿತ್ರವು ತಮಿಳಿನ “ದಿಲ್ಲಿಕು ದುಡ್ಧು” ಚಿತ್ರದ ಅಧಿಕೃತ ರೀಮೇಕ್.
