Cinema News

ಜಂಟಲ್‌ಮನ್‌ ಕನ್ನಡದ ವಿಶೇಷ ಸಿನಿಮಾ

Published

on

ಪ್ರಜ್ವಲ್‌ ದೇವರಾಜ್‌ ಮತ್ತು ನಿಶ್ವಿಕಾ ನಾಯ್ಡು ನಟನೆಯ ಜಂಟಲ್‌ಮನ್‌ ಸಿನಿಮಾ ಕನ್ನಡದ ವಿಶೇಷ ಚಿತ್ರ ಎಂದಿದ್ದಾರೆ ನಿರ್ಮಾಪಕ ಗುರುದೇಶಪಾಂಡೆ.

 

ಈ ಚಿತ್ರದಲ್ಲಿ ಮಾನವ ಕಳ್ಳ ಸಾಗಣೆ ಜತೆಗೆ ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌ ಬಗ್ಗೆಯೂ ಹೇಳುತ್ತಿದೆ. ಈ ರೀತಿಯ ವಿಶೇಷ ಸಬ್ಜೆಕ್ಟ್‌ನ್ನು ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಬಳಸಿಕೊಳ್ಳುತ್ತಿದ್ದು ಹಾಗಾಗಿ ಈ ಚಿತ್ರ ಬಹಳ ವಿಶೇಷ ಎನ್ನುತ್ತೇನೆ . ಇನ್ನು ಈ ಚಿತ್ರದ ಮೂಲಕ ನಿರ್ದೇಶಕನಾಗಿದ್ದ ನಾನು ಮೊದಲ ಬಾರಿಗೆ ನಿರ್ಮಾಪಕನಾಗುತ್ತಿದ್ದೇನೆ.

 

ಇದೇ ಶುಕ್ರವಾರ ರಿಲೀಸ್‌ ಆಗುತ್ತಿರುವ ಈ ಸಿನಿಮಾದ ಟ್ರೇಲರ್‌, ಹಾಡುಗಳು ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿವೆ.  ಜಡೇಶ್‌ಕುಮಾರ್‌ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. 

Spread the love
Click to comment

Copyright © 2019 PopcornKannada.com