Cinema News
ಗರುಡಾಕ್ಷ ಈವಾರ ಬಿಡುಗಡೆ

ತಂದೆ ಮಗನ ಬಾಂಧವ್ಯದ ಕಥಾಹಂದರ ಇರುವ ಚಿತ್ರ ಗರುಡಾಕ್ಷ ಈ ವಾರ ತೆರೆಕಾಣುತ್ತಿದೆ. ಮಧ್ಯಮವರ್ಗದ ಕುಟುಂಬದ ಯಜಮಾನ ತನ್ನ ಮಗನ ಕನಸನ್ನು ನೆರವೇರಿಸಲು ಹೋಗಿ ಕೆಟ್ಟ ಜನರಿಂದ ಮೋಸಕ್ಕೊಳಗಾಗಿ ಕೊಲೆಯಾಗುತ್ತಾನೆ, ಅದನ್ನು ಆತ್ಮಹತ್ಯೆ ಎಂದು ನಿರೂಪಿಸುತ್ತಾರೆ.

ನನ್ನ ತಂದೆ ಆತ್ಮಹತ್ಯೆ ಮಾಡಿಕೊಳ್ಳುವಂಥವರಲ್ಲ ಎಂಬುದನ್ನು ಅರಿತಿರೋ ಮಗ ತಂದೆಯನ್ನು ಕೊಲೆಗೈದವರ ಮೇಲೆ ಸೇಡು ತೀರಿಸಿಕೊಳ್ಳುವ ಕಥೆ ಈ ಚಿತ್ರದಲ್ಲಿದೆ. ತಂದೆಯ ಹಂತಕರನ್ನು ಗರುಡನ ಕಣ್ಣಿನಂತೆ ಸೂಕ್ಷ್ಮವಾಗಿ ಹುಡುಕೋ ಥ್ರಿಲ್ಲಿಂಗ್ ಕಥೆಯೇ ಗರುಡಾಕ್ಷ.
ಕಟ್ಟುಕಥೆ ಖ್ಯಾತಿಯ ಚೇತನ್ ಯದು ಚಿತ್ರದ ನಾಯಕನಾಗಿದ್ದು, ರಕ್ಷಾ ನಾಯಕಿ. ಕಲಾವಿದನಾಗಿದ್ದ ಶ್ರೀಧರ್ ವೈಷ್ಣವ್ ಮೊದಲ ಬಾರಿಗೆ ಈಚಿತ್ರ ನಿರ್ದೇಶಿಸಿದ್ದಾರೆ.

ಸತ್ಯರಾಜ್, ರಫಿಕ್, ವಸಂತ್ ಕುಮಾರ್, ಕೈಲಾಶ್ , ಕುಮುದಾ, ಪಲ್ಲವಿ, ಉಗ್ರಂ ರೆಡ್ಡಿ, ಕಲ್ಕಿ, ಆಲಿಷಾ
ಉಳಿದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀವತ್ಸ ಅವರ ಸಂಗೀತ, ವೈಲೆಂಟ್ ವೇಲು ಅವರ ಸಾಹಸ, ವೀರೇಶ್.NTA ಅವರ ಛಾಯಾಗ್ರಹಣ, N.M. ವಿಶ್ವ ಅವರ ಸಂಕಲನ ಈ ಚಿತ್ರಕ್ಕಿದೆ.
