Connect with us

Cinema News

ಹಾಡಿನಲ್ಲಿ ಫೈಟ್ ಮಾಡಿರೋ ‘ಅನ್‌ಲಾಕ್ ರಾಘವ’

Published

on

ಚಿತ್ರೀಕರಣ ಶುರುವಾದಾಗಿನಿಂದಲೂ, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿರುವ ಚಂದನವನದ ಚಿತ್ರಗಳಲ್ಲಿ ಒಂದು ‘ಅನ್‌ಲಾಕ್ ರಾಘವ’. ಈಗಾಗಲೇ ಡಬ್ಬಿಂಗ್ ಮುಗಿಸಿರುವ “ಅನ್‌ಲಾಕ್ ರಾಘವ” ಚಿತ್ರದ ಪೋಸ್ಟ್ ಪ್ರೊಡಕ್ಷನ್‌ ಕಾರ್ಯ ಭರದಿಂದ ಸಾಗಿದೆ. ವಿಶೇಷವೆಂದರೆ ಈ ಸಿನಿಮಾದ ಫೈಟ್‌ಗಳು ಈಗಾಗಲೇ ಎಲ್ಲರ ಗಮನ ಸೆಳೆದಿದೆ.

“ಈ ಚಿತ್ರದಲ್ಲಿ ನಾಲ್ಕೂವರೆ ಫೈಟ್ ಗಳಿವೆ. ಈ ಅರ್ಧ ಫೈಟ್ ಒಂದು ಹಾಡಿನ ನಡುವೆ ಬರುತ್ತದೆ.. ಚಿತ್ರಕತೆಯ ಹಂತದಲ್ಲಿ ಈ ಹಾಡನ್ನು ನಾವು ಸೇರಿಸಿರಲಿಲ್ಲ. ಬಳಿಕ, ಆ ಸೀಕ್ವೆನ್ಸ್ ನಲ್ಲಿ ಒಂದು ಹಾಡಿದ್ದರೆ ಹೇಗೆ ಎಂಬ ಆಲೋಚನೆ ಬಂತು. ಅದನ್ನು ಇನ್ ಕಾರ್ಪೋರೇಟ್ ಮಾಡಿದಾಗ ಈ ಸೀಕ್ವೆನ್ಸ್ ತುಂಬಾ ಬ್ಯೂಟಿಫುಲ್ ಆಗಿ ಮೂಡಿಬಂದಿದೆ. ನಮ್ಮ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಡಬ್ಬಿಂಗ್ ಸಮಯದಲ್ಲಿ ಆ ಹಾಡನ್ನು ನೋಡಿ, ಬಹಳ ಮೆಚ್ಚಿದ್ದಾರೆ. ಜೊತೆಗೆ ಆ ಹಾಡು, ಸಿನಿಮಾದ ಟ್ರಂಪ್ ಕಾರ್ಡ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಈ ಆಲೋಚನೆಗೆ ಸಾಥ್ ಕೊಟ್ಟ ನಿರ್ಮಾಪಕರಾದ ಮಂಜುನಾಥ ಡಿ ಅವರು, ಸಂಗೀತ ನಿರ್ದೇಶಕರಾದ ಅನೂಪ್ ಸೀಳಿನ್, ಡಿಒಪಿ ಲವಿತ್, ಸಾಹಸ ನಿರ್ದೇಶಕರಾದ ಅರ್ಜುನ್ ಮಾಸ್ಟರ್, ನೃತ್ಯ ನಿರ್ದೇಶಕರಾದ ಮುರುಳಿ ಮಾಸ್ಟರ್, ಎಡಿಟರ್ ಅಜಯ್ ಎಲ್ಲರಿಗೂ ತುಂಬಾ ಥ್ಯಾಂಕ್ಸ್.. ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ಹಾಡಿರುವ ಸಾಯಿ ವಿಘ್ನೇಶ್ ಈ ಹಾಡನ್ನು ಹಾಡಿರುವುದು ಮತ್ತೊಂದು ವಿಶೇಷ” ಎಂದಿದ್ದಾರೆ ಚಿತ್ರದ ನಿರ್ದೇಶಕರಾದ ದೀಪಕ್ ಮಧುವನಹಳ್ಳಿ.

ಎಡಿಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್‌ಗೆ ಹೋಗುವ ಮುನ್ನ ಅನ್‌ಲಾಕ್ ರಾಘವ ಸಿನಿಮಾವನ್ನು ನೋಡಿರುವ ಚಲನಚಿತ್ರ ನಿರ್ಮಾಪಕರು ಹಾಗೂ ಚಿತ್ರ ತಂಡ ಸಂತೋಷ ಪಟ್ಟಿದ್ದಾರೆ. “ಈ ವರ್ಷದ ನಿರೀಕ್ಷಿತ ಚಲನಚಿತ್ರಗಳಲ್ಲಿ, ನಮ್ಮ “ಅನ್‌ಲಾಕ್ ರಾಘವ” ಸಿನಿಮಾ ಸೇರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ” ಎಂದು ನಿರ್ಮಾಪಕರು ಹರ್ಷ ವ್ಯಕ್ತಪಡಿಸಿದ್ದಾರೆ. 

“ಇಡೀ ಸಿನಿಮಾದಲ್ಲಿ ನಾಯಕರಾದ ಮಿಲಿಂದ್ ಗೌತಮ್ ಅವರು ತುಂಬಾ ಹ್ಯಾಂಡ್ಸಮ್ ಆಗಿ ಮಿಂಚಿದ್ದಾರೆ. ಬಹಳ ಮುಖ್ಯವಾಗಿ ಸಾಹಸ ಸೀಕ್ವೆನ್ಸ್ ಗಳನ್ನು ನೋಡಿದಾಗ ನಮ್ಮ ಕನ್ನಡಕ್ಕೆ ಪ್ರಾಮಿಸಿಂಗ್ ಕಮರ್ಷಿಯಲ್ ಹೀರೋ ಆಗುವುದರಲ್ಲಿ ಅನುಮಾನವೇ ಇಲ್ಲ. ಜೊತೆಗೆ ಬ್ಯೂಟಿಫುಲ್ ಆಗಿರೋ ನಾಯಕಿ ರೇಚಲ್ ಡೇವಿಡ್ ಅವರೊಂದಿಗಿನ ಎಲ್ಲಾ ಸೀನ್‌ಗಳು ಮ್ಯಾಜಿಕಲ್ ಆಗಿ ಮೂಡಿಬಂದಿವೆ” ಎನ್ನುತ್ತಿದೆ ಚಿತ್ರ ತಂಡ. ಇಲ್ಲಿಯವರೆಗೂ ನಮಗೆ ಸಿಕ್ಕಿರುವ ಮಾಹಿತಿಯಂತೆ ‘ಅನ್‌ಲಾಕ್ ರಾಘವ’ ಚಿತ್ರ ಕಲರ್‌ಫುಲ್ ಆಗಿದ್ದು, ಹ್ಯೂಮರಸ್ ಮಜವನ್ನು ಉಣ ಬಡಿಸೋ ಕಮರ್ಷಿಯಲ್ ಸಿನಿಮಾ ಆಗಿದೆ. ಈಗಾಗಲೇ ಎಡಿಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್‌ ನ ಉಳಿದ ಹಂತಗಳಲ್ಲಿ ತೊಡಗಿಸಿಕೊಂಡಿರುವ ‘ಅನ್‌ಲಾಕ್ ರಾಘವ’ ಬೇಗನೇ ತೆರೆಗಪ್ಪಳಿಸಿ, ಚಿತ್ರಪ್ರೇಮಿಗಳಿಗೆ ಮನರಂಜನೆ ಉಣಬಡಿಸಲಿದ್ದಾನೆ ಎಂಬ ಕಾತುರದಲ್ಲಿ ಸಿನಿಪ್ರೇಮಿಗಳಿದ್ದಾರೆ.

‘ಅನ್‌ಲಾಕ್ ರಾಘವ’ ಚಿತ್ರವನ್ನು ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್‌ ನಡಿ ಮಂಜುನಾಥ ಡಿ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದು, ದೀಪಕ್ ಮಧುವನಹಳ್ಳಿ ಅವರು ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು, ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಮುರಳಿ ಮಾಸ್ಟರ್ ಹಾಗೂ ಧನಂಜಯ್ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದ್ದು, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

ಮಿಲಿಂದ್ ಗೌತಮ್ ನಾಯಕನಾಗಿ ಹಾಗೂ ರೇಚಲ್ ಡೇವಿಡ್ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗು ಸುರೇಶ್, ಅಥರ್ವ ಪ್ರಕಾಶ್, ಶ್ರೀದತ್ತ, ಬೃಂದಾ ವಿಕ್ರಮ್ ಮೊದಲಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *