Cinema News
ಜೀವನ ನಿರ್ವಹಣೆಗಾಗಿ ಮನೆ ಮನೆಗೆ ತೆರಳು ಸಾಬೂನು ಮಾರುತ್ತಿರುವ ಖ್ಯಾತ ನಟಿ

ಕಲಾವಿದರ ಜೀವನ ಹೂವಿನ ಹಾಸಿಗೆಯಲ್ಲಿ. ಅಲ್ಲಿ ಸಾವಿರಾರು ಕಲ್ಲು ಮುಳ್ಳುಗಳ್ಳಿರುತ್ತವೆ. ಪರದೆ ಮೇಲೆ ಬಣ್ಣ ಹಚ್ಚಿ ಪ್ರೇಕ್ಷಕರನ್ನ ನಗಿಸುವ ಅದೆಷ್ಟೋ ಜೀವಗಳ ಬದುಕು ಬಣ್ಣ ಕಳಚಿದ ಮೇಲೆ ನಿಜಕ್ಕೂ ಶೋಷನೀಯ. ರೀಲ್ ಲೈಫ್ ನಲ್ಲಿ ಕೋಟ್ಯಾಧಿಪತಿಯಾಗಿರುವವರು ರಿಯಲ್ ಲೈಫ್ ನಲ್ಲಿ ಜೀವನ ನಿರ್ವಹಣೆಗೂ ಕಷ್ಟ ಪಡ್ತಿರ್ತಾರೆ. ಸದ್ಯ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ನಟಿ ಐಶ್ವರ್ಯ ಭಾಸ್ಕರನ್ ಜೀವನ ನಿರ್ವಹಣೆಗಾಗಿ ಮನೆ ಮನೆಗೆ ತೆರಳು ಸಾಬೂನುಗಳನ್ನು ಮಾರಾಟ ಮಾಡ್ತಿದ್ದಾರೆ.
ನರಸಿಂಹಂ, ಸತ್ಯಮೇವ ಜಯತೇ, ಪ್ರಜಾ, ದಿ ಫೈರ್, ನೋಟ್ ಬುಕ್ನಂತಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಐಶ್ವರ್ಯ ಅವರಿಗೆ ಸದ್ಯ ಅವಕಾಶಗಳ ಕೊರತೆ ಶುರುವಾಗಿದೆ. ಹೀಗಾಗಿ ಹೊಟ್ಟೆಪಾಡಿಗಾಗಿ ಸಾಬೂನು ಮಾರಾಟ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಐಶ್ವರ್ಯ,ನನಗೆ ಈಗ ಕೆಲಸವಿಲ್ಲ ಜೊತೆಗೆ ಜೀವನ ನಿರ್ವಹಣೆಗೆ ಹಣವಿಲ್ಲ. ಹಾಗಾಗಿ ಸಾಬೂನು ಮಾರುತ್ತಾ ಬೀದಿಗಳಲ್ಲಿ ವಾಸಿಸುತ್ತಿದ್ದೇನೆ. ನನಗೆ ಸಿನಿಮಾ ಮಾಡಲು ಆಸಕ್ತಿಯಿದೆ ಯಾರಾದರೂ ಸಿನಿಮಾಗಾಗಿ ಕರೆ ಮಾಡುತ್ತಾರೆ ಎಂಬ ಭರವಸೆಯಿಂದ ಕಾಯುತ್ತಿದ್ದೇನೆ ಎಂದು ಐಶ್ವರ್ಯ ಹೇಳಿದ್ದಾರೆ.
