Connect with us

Cinema News

“ಎಲ್ರ ಕಾಲೆಳಿಯುತ್ತೆ ಕಾಲ” ಎನ್ನುತ್ತಿದ್ದಾರೆ ಚಂದನ್ ಶೆಟ್ಟಿ

Published

on

ತಮ್ಮ ಹಾಸ್ಯ ಪಾತ್ರಗಳ ಮೂಲಕ ಹೆಸರಾಗಿರುವ ಸುಜಯ್ ಶಾಸ್ತ್ರಿ ನಿರ್ದೇಶನದ “ಎಲ್ರ ಕಾಲೆಳಿಯುತ್ತೆ ಕಾಲ” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು ಚಿತ್ರದ ಪ್ರಥಮ‌ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

ಕರ್ನಾಟಕದಲ್ಲಿ ಕನ್ನಡತನ ಮರೆಯಾಗುತ್ತಿದೆ. ನಾವು ಹೇಗೆ ಬೇರೆಭಾಷೆಗಳ ಚಿತ್ರಗಳನ್ನು ಸಬ್ ಟೈಟಲ್ ಮೂಲಕ ನೋಡುತ್ತೀವಲ್ಲಾ, ಹಾಗೆ ಬೇರೆ ಭಾಷೆಗಳಲ್ಲೂ ನಮ್ಮ ಕನ್ನಡ ಚಿತ್ರಗಳು ಬಿಡುಗಡೆಯಾಗಲಿ. ಅವರು ನಮ್ಮ ಹಾಗೆ ನೋಡಲಿ. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಅರ್ಜುನ್ ಅವಧೂತರು ಆಶೀರ್ವದಿಸಿದರು.

ನಾನು ಹಾಗೂ ರಾಜ್ ಗುರು ಸೇರಿ ಕಥೆ ಮಾಡಿಕೊಂಡೆವು. ನಿರ್ಮಾಪಕ ಗೋವಿಂದರಾಜು ಅವರ ಮುಂದೆ ಕಥೆ ಹೇಳಿದ್ದೆವು. ನಮ್ಮ ಕಥೆಯನ್ನು ಮೆಚ್ಚಿದ ಅವರು ಕೊರೋನ ಕಡಿಮೆಯಾದ ಮೇಲೆ ಚಿತ್ರ ಆರಂಭಿಸೋಣ ಅಂದರು. ಈಗ ಚಿತ್ರ ಆರಂಭಾಗಿದೆ. 1980 ರಿಂದ 90ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಕಥೆಯ ಬಗ್ಗೆ ಜಾಸ್ತಿ ಹೇಳುವುದಿಲ್ಲ. ಈ ಚಿತ್ರದ ನಯಕನಾಗಿ ಚಂದನ್ ಶೆಟ್ಟಿ, ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ಅಭಿನಯಿಸುತ್ತಿದ್ದಾರೆ. ತಾರಾ, ಮಂಡ್ಯ ರಮೇಶ್, ಮಂಜು ಪಾವಗಡ, ನಾಗರಾಜ್ ಮೂರ್ತಿ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. ನಾನು ಕೂಡ ಅಭಿನಯಿಸುತ್ತಿದ್ದೀನಿ ಎಂದರು ಸುಜಯ್ ಶಾಸ್ತ್ರಿ.

ಇಷ್ಟು ದಿನ ನನ್ನ ಹಾಡು, ಸಂಗೀತಕ್ಕೆ ನಿಮ್ಮ ಬೆಂಬಲ ದೊರಕಿದೆ. ಈಗ ನಾಯಕನಟನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದೇನೆ. ವಿಜಯ್ ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ಕಾಲೇಜು ಹುಡುಗನಾಗಿ ಕಾಣಿಸಿಕೊಳ್ಳುತ್ತದ್ದೇನೆ. ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು ಚಂದನ್ ಶೆಟ್ಟಿ.

ರಿಯಾಲಿಟಿ ಶೋ ಮೂಲಕ ನನಗೆ ಸುಜಯ್ ಪರಿಚಯ. ಉತ್ತಮ ನಟ. ನನ್ನ ಚಿತ್ರವೊಂದರಲ್ಲಿ ನೀವು ಅಭಿನಯಿಸಬೇಕೆಂದರು. ಕಥೆ ಕೇಳದೆ ಒಪ್ಪಿಕೊಂಡಿದ್ದೇನೆ. ನನ್ನ ಹಾಗೂ ಸುಜಯ್ ಶಾಸ್ತ್ರಿ ಕಾಂಬಿನೇಶನ್ ನಲ್ಲಿ ಮತ್ತೊಂದು ಚಿತ್ರ ಕೂಡ ಸದ್ಯದಲ್ಲೇ ಸೆಟೇರಲಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು ನಟಿ ತಾರಾ.

ನಮ್ಮ‌ ಸಂಸ್ಥೆಯಿಂದ ನಿರ್ಮಾಣವಾಗಿದ್ದ “ಕಾರ್ನಿ” ಹಾಗೂ “ಕೃಷ್ಣ ಟಾಕೀಸ್” ಚಿತ್ರಗಳು ಪ್ರೇಕ್ಷಕರನ್ನು ಕುರ್ಚಿ ತುದಿಯಲ್ಲಿ ಕುಳಿತು ನೋಡುವ ಹಾಗೆ ಮಾಡಿತ್ತು.. ಆದರೆ ಈ ಚಿತ್ರ ಆರಾಮವಾಗಿ ಕುರ್ಚಿಗೆ ಒರಗಿಕೊಂಡು ಕುಟುಂಬ ಸಮೇತ ನೋಡಬಹುದು. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಗೋವಿಂದರಾಜು.

ಚಿತ್ರಕ್ಕೆ ಕಥೆ , ಸಂಭಾಷಣೆ ಬರೆದಿರುವ ರಾಜಗುರು, ಸಂಗೀತ ನಿರ್ದೇಶಕರಾದ ಪ್ರದೀಪ – ಪ್ರವೀಣ ಮುಂತಾದ ಚಿತ್ರತಂಡದ ಸದಸ್ಯರು ತಮ್ಮ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಉಷಾ ಗೋವಿಂದರಾಜು ನಿರ್ಮಾಣದ ಈ ಚಿತ್ರಕ್ಕೆ ವಿಶ್ವಜಿತ್ ರಾವ್ ಅವರ ಛಾಯಾಗ್ರಹಣವಿದೆ
ಬಾಲು ಕುಮಟಾ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

Spread the love

Continue Reading
Click to comment

Leave a Reply

Your email address will not be published. Required fields are marked *