Cinema News
‘ಸಲಗ’ಕ್ಕೆ ದುನಿಯಾ ವಿಜಯ್ ನಿರ್ದೇಶಕ – Exclusive
ಕೆ ಪಿ ಶ್ರೀಕಾಂತ್ ನಿರ್ಮಾಣದ ‘ಸಲಗ’ ಸಿನಿಮಾಗೆ ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದುವರೆಗೂ ಕಥೆಗಳನ್ನಷ್ಟೇ ಬರೆಯುತ್ತಿದ್ದ ವಿಜಯ್ ಮೊದಲ ಬಾರಿಗೆ ತಂಡದ ಕ್ಯಾಪ್ಟನ್ ಆಗಲಿದ್ದಾರೆ.
ಈ ಸಿನಿಮಾದಲ್ಲಿ ವಿಜಯ್, ಧನಂಜಯ ಸೇರಿದಂತೆ ಸಾಕಷ್ಟು ಮಂದಿ ನಟಿಸುತ್ತಿದ್ದಾರೆ. ನೈಜ ಘಟನೆಗಳನ್ನು ಇಟ್ಟುಕೊಂಡು ಮಾಡುತ್ತಿರುವ ಸಿನಿಮಾ ಇದಾಗಿದ್ದು, ಟಗರು ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಫಸ್ಟ್ ಲುಕ್ ಟೀಸರ್‌ನಿಂದಲೇ ಗಮನ ಸೆಳೆದಿದ್ದ ಸಲಗವನ್ನು ಮೊದಲು ದುನಿಯಾ ಟಾಕೀಸ್ ನಡಿ ವಿಜಯ್ ಅವರೇ ನಿರ್ಮಾಣ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಸಿನಿಮಾದ ಕಥೆ ಕೇಳಿದ ಶ್ರೀಕಾಂತ್ ನಾನೇ ನಿರ್ಮಾಣ ಮಾಡುತ್ತೀನಿ ಎಂದಿದ್ದಾರೆ.
ಈ ಸಿನಿಮಾದಲ್ಲಿ ಟಗರು ಚಿತ್ರಕ್ಕೆ ಕೆಲಸ ಮಾಡಿದ ಸಾಕಷ್ಟು ಜನ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಡೈಲಾಗ್ ರೈಟರ್ ಮಾಸ್ತಿ, ಕೋ ಡೈರೆಕ್ಟರ್ ಅಭಿ, ಆರ್ಟ್ ಡಿಪಾರ್ಟ್‌ಮೆಂಟ್ ಅಭಿ , ಸಂಗೀತ ನಿರ್ದೇಶಕ ಚರಣ್ ರಾಜ್ ಸಲಗಕ್ಕೂ ಕೆಲಸ ಮಾಡುತ್ತಾರೆ.
ಟಗರಿನ ಪೊಗರಿಗೆ ಜೀವ ತುಂಬಿದ್ದ ಡಾಲಿ ಧನಂಜಯ, ಕಾಕ್ರೋಚ್ ಸುಧಿ ಸಹ ನಟಿಸುತ್ತಿದ್ದಾರೆ. ಇವರೆಲ್ಲರ ಜತೆಯಲ್ಲಿ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಯಶ್ ಶೆಟ್ಟಿ ಸಹ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಒಟ್ಟಿನಲ್ಲಿ ಇಡೀ ಟಗರು ಟೀಮ್ ಸೇರಿಕೊಂಡು ಸಲಗವನ್ನು ಈ ಬಾರಿ ಜೋರಾಗಿ ಘೀಳಿಡುವಂತೆ ಮಾಡಲಿದ್ದಾರೆ.