Cinema News
ಉಪ್ಪಿ ಕಬ್ಜಗೆ ಎಂಟಿಬಿ ನಾಗರಾಜ್ ನಿರ್ಮಾಪಕ

ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್‌ನ ಕಬ್ಜ ಸಿನಿಮಾಗೆ ಹೊಸಕೋಟೆಯ ಮಾಜಿ ಶಾಸಕ ಎಂ ಟಿ ಬಿ ನಾಗರಾಜ್ ನಿರ್ಮಾಪಕರಾಗಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೇಸ್ ಸರ್ಕಾರದಲ್ಲಿ ರೆಬಲ್ ಶಾಸಕರೇಂದೆ ಗುರುತಿಸಿಕೊಂಡು ಕುಮಾರಸ್ವಾಮಿ ಸರ್ಕಾರ ಬೀಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಎಂಟಿಬಿ ನಾಗರಾಜ್ ಉಪಚುನಾವಣೆಯಲ್ಲಿ ಸೋತಿದ್ದರು. ಆದರೆ ಈಗ ಚಂದ್ರ ಮೂಲಕ ಚಿತ್ರ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ. ಆದರೆ ಇವರು ಈ ಸಿನಿಮಾಗೆ ಪೂರ್ಣ ಪ್ರಮಾಣದ ಬಂಡವಾಳವನ್ನು ಹೂಡುತ್ತಿಲ್ಲ ಚಂದ್ರು ಜತೆ ಸಹ ನಿರ್ಮಾಪಕರಾಗಿ ಇರಲಿದ್ದಾರೆ.
ಉಪೇಂದ್ರ ನಟನೆಯ ಈ ಸಿನಿಮಾ ಒಂಭತ್ತು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಇದಕ್ಕಾಗಿ ಭರ್ಜರಿ ಸೆಟ್ ಹಾಕಲಾಗುತ್ತಿದೆ. ತೆರೆಯ ಮೇಲೆ ಒಂದಷ್ಟು ಪ್ರಯೋಗಗಳನ್ನು ಮಾಡುವ ಚಂದ್ರು ಈಗ ಎಂಟಿಬಿಯಂತಹ ಕಲರ್‌ಫುಲ್ ರಾಜಕಾರಣಿಯನ್ನು ಸಿನಿಮಾ ರಂಗಕ್ಕೆ ತರುತ್ತಿರುವುದು ಗಾಂಧಿನಗರದಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ.


Continue Reading