Cinema News
ತೆಲುಗಿಗೆ ಹೊರಟ ಡಿಂಪಲ್ ಕ್ವೀನ್
ಡಿಂಪಲ್ ಕ್ವೀನ್ ರಚಿತಾ ರಾಮ್ ತೆಲುಗಿನ ಸಿನಿಮಾದಲ್ಲಿ ನಟಿಸುತ್ತಿರುವುದು ಪಕ್ಕಾ ಆಗಿದೆ. ಶುಕ್ರವಾರವಷ್ಟೇ ಸಹೋದರಿ ಮದುವೆ ಮುಗಿಸಿದ ರಚಿತಾ ಶನಿವಾರ ತೆಲುಗು ಚಿತ್ರದ ಚಿತ್ರೀಕರಣಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರುವ ಖ್ಯಾತಿ ಹೊಂದಿರುವ ಅವರು ಈಗ ತೆಲುಗಿನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ನಾಯಕನಾಗಿರುವ ಸೂಪರ್ ಮಚ್ಚಿ ಎಂಬ ಚಿತ್ರದಲ್ಲಿ ರಚಿತಾ ನಾಯಕಿಯಾಗಿದ್ದಾರೆ. ಶನಿವಾರದಿಂದ ಶೂಟಿಂಗ್ ಆರಂಭವಾಗಿದ್ದು, ಪುಲಿ ವಾಸು ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಬೇರೆ ಭಾಷೆಯಲ್ಲಿ ನಟಿಸುತ್ತಿರುವುದಕ್ಕೆ ರಚಿತಾ ರಾಮ್ ಖುಷಿಯಾಗಿದ್ದಾರೆ.
ಬಾಲಕೃಷ್ಣ ಜತೆ ನಟಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು ಆದರೆ ಅದೆಲ್ಲವೂ ಸುಳ್ಳು, ಅದು ಕಲ್ಯಾಣ್ ದೇವ್ ಜತೆ ನಟಿಸುತ್ತಿರುವ ಚಿತ್ರ. ಅಕ್ಕನ ಮದುವೆ ಮುಗಿದ ಮಾರನೇ ದಿನವೇ ರಚಿತಾ ಹೈದ್ರಾಬಾದ್‌ಗೆ ಹೋಗಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ರಿವೀಲ್ ಆಗಿದೆ. ಎಸ್ ಎಸ್ ತಮನ್ ಸಂಗೀತ ನೀಡುತ್ತಿದ್ದಾರೆ.