Connect with us

Cinema News

ಎಡಗೈ ಬಳಸುವವರ ಕೈ ಹಿಡಿಯಲಿದ್ದಾರೆ ದಿಗಂತ್..ಎಡಗೈ ಅಪಘಾತ ಕಾರಣ ಸಿನಿಮಾಗೆ ವೇಗ ಹೆಲ್ಮೆಟ್ ಕಂಪನಿ ಸಾಥ್

Published

on

ಬಲಗೈಯವರ ಪ್ರಾಬಲ್ಯವಿರುವ ಜಗತ್ತಿನಲ್ಲಿ ಪ್ರತಿ ಆಗಸ್ಟ್ 13ರಂದು ಅಂತಾರಾಷ್ಟ್ರೀಯ ಎಡಗೈಯವರ ದಿನವನ್ನು ಆಚರಿಸಲಾಗುತ್ತದೆ. ಇದೇ ಎಡಗೈ ಬಳಸುವವರ ಸುತ್ತ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗುತ್ತಿರುವುದು ಗೊತ್ತೇ ಇದೆ. ಅದೇ ಎಡಗೈ ಅಪಘಾತಕ್ಕೆ ಕಾರಣ. ದೂದ್ ಪೇಡಾ ದಿಗಂತ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಕಾನ್ಸೆಪ್ಸ್ ವೇಗ ಹೆಲ್ಮೆಟ್ ಕಂಪನಿಯವರಿಗೆ ಬಹಳ ಇಷ್ಟವಾಗಿದೆ. ಹೀಗಾಗಿ ಸಿನಿಮಾಗೆ ‘ವೇಗ’ ಹೆಲ್ಮೆಟ್ ಕಂಪನಿ ಸಾಥ್ ಕೊಟ್ಟಿದೆ. ಅದೇಗೇ ಅಂತೀರಾ? ಇದೇ ಆಗಸ್ಟ್ 13ರಂದು ಅಂತಾರಾಷ್ಟ್ರೀಯ ಎಡಗೈ ದಿನದಂದು ವೇಗ ಹೆಲ್ಮೆಟ್ ಕಂಪನಿ ಎಗಡೈ ಬಳಸುವವರರಿಗಾಗಿ ಹೊಸ ಹೆಲ್ಮೆಟ್ ಲಾಂಚ್ ಮಾಡುತ್ತಿದೆ. ಇದೆ ಅಲ್ವಾ ಒಂದು ಸಿನಿಮಾದ ಸೋಷಿಯಲ್ ಇಂಪ್ಯಾಕ್ಟ್ ಅಂದರೆ..

ಕನ್ನಡ ಸಿನಿಮಾಗಳ ಮಾರುಕಟ್ಟೆ ಈಗ ವಿಸ್ತರಿಸಿದೆ. ವಿಭಿನ್ನ ಬಗೆಯ ಕಥಾಹಂದರದ ಕನ್ನಡ ಚಿತ್ರಗಳು ಈಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಂತೆ ಎಡಗೈ ಅಪಘಾತ ಕಾರಣಕ್ಕೆ ಸಿನಿಮಾದ ಐಡಿಯಾ, ಕಾನ್ಸೆಪ್ಟ್ ವೇಗ ಹೆಲ್ಮೆಟ್ ಕಂಪನಿಯರನ್ನು ತಲುಪಿದೆ ಅಂದ್ರೆ ಇಡೀ ಚಿತ್ರತಂಡ ಮಾತ್ರವಲ್ಲ ಇಡೀ ಇಂಡಸ್ಟ್ರೀಯೇ ಖುಷಿಪಡಬೇಕಾದ ವಿಚಾರ..ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ತಂಡದ ಜೊತೆ ವೇಗ ಹೆಲ್ಮೆಟ್ ಕಂಪನಿ ಕೈ ಜೋಡಿಸಿದ್ದಾರೆ. ಎಡಗೈ ಬಳಸುವವರಿಗೆ ಹೊಸ ಹೆಲ್ಮೆಟ್ ಪರಿಚಯಿಸುತ್ತಿದೆ.

ಅಂದಹಾಗೇ ಸಮರ್ಥ್ ಬಿ ಕಡಕೊಳ್ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಚಿತ್ರದಲ್ಲಿದೆ. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಿದು. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹೈಫನ್ ಪಿಕ್ಚರ್ಸ್ ಬ್ಯಾನರ್ ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಸಿನಿಮಾಗಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *