Cinema News
ದಿಗಂತ್ ಗೆ ಏನು ಆಗಿಲ್ಲ, ಆತಂಕ ಬೇಡ: ದಿಗಂತ್ ಕುಟುಂಬಸ್ಥರು

ಫ್ಯಾಮಿಲಿ ಜೊತೆ ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದ ನಟ ದಿಗಂತ್, ಸಮುದ್ರ ತಟದಲ್ಲಿ ಸೋಮರ್ ಸಾಲ್ಟ್ ಮಾಡುತ್ತಿದ್ದಂತ ಸಂದರ್ಭದಲ್ಲಿ ಆಯತಪ್ಪಿ ಬಿದ್ದ ಪರಿಣಾಮ ಅಪಘಾತಗೊಂಡು ಬೆನ್ನು ಮೂಳೆ, ಕಾಲಿಗೆ ಬಲವಾದ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿಗಂತ್ಗೆ ಏನೂ ಆಗಿಲ್ಲ, ಆತಂಕ ಪಡಬೇಡಿ ಎಂದು ಅಭಿಮಾನಿಗಳಿಗೆ ದಿಗಂತ್ ಕುಟುಂಬಸ್ಥರು ಮನವಿ ಮಾಡಿದೆ.
ಸಮುದ್ರ ತಟದಲ್ಲಿ ಸೊಮರ್ ಸಾಲ್ಟ್ ಹೊಡೆಯುವ ವೇಳೆ ಮಿಸ್ಸಾಗಿ ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಕೂಡಲೇ ಗೋವಾದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಮಣೀಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸದ್ಯ ವೈದ್ಯರು ದಿಗಂತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದು ಅಪರೇಷನ್ ಮಾಡುತ್ತಿದ್ದಾರೆ. ಆಸ್ಪತ್ರೆಗೆ ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ದಿಗಂತ್ ಹಾಗೂ ಐದ್ರಿಂತಾ ರೇ ಕುಟುಂಬಸ್ಥರು ಭೇಟಿ ನೀಡಿದ್ದಾರೆ.

Continue Reading