Connect with us

Cinema News

ಮಾರ್ಚ್ 27 ಕ್ಕೆ “ಆಯಧ” ಹಿಡಿದು ಬರಲಿದ್ದಾರೆ ದೇವರಾಜ್ ಕುಮಾರ್ .

Published

on

‌ ದೇವರಾಜ್ ಕುಮಾರ್ ನಿರ್ಮಾಣ, ನಿರ್ದೇಶನ ಹಾಗೂ ನಟನೆಯ “ಆಯುಧ ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸಿರಿ ಮ್ಯೂಸಿಕ್ ಚಾನಲ್ ನಲ್ಲಿ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ‌. ಈಗಾಗಲೇ ಟ್ರೇಲರ್, ಟೀಸರ್ ಹಾಗೂ ಹಾಡುಗಳ ಮೂಲಕ ಜನಪ್ರಿಯವಾಗಿರುವ ಈ ಚಿತ್ರ ಮಾರ್ಚ್ 27 ರಂದು ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ನಂತರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಕಳೆದ ಎರಡು ದಶಕಗಳಿಂದ ಮೇಕಪ್ ಕಲಾವಿದನಾಗಿ ಕನ್ನಡ ಚಿತ್ರರಂಗದೊಂದಿಗೆ ನಂಟು ಹೊಂದಿರುವ ನಾನು “ಡೆಂಜರ್ ಜೋನ್” ಚಿತ್ರದ ಮೂಲಕ ನಾಯಕನಾದೆ. ಮೂರುವರ್ಷಗಳ ಹಿಂದೆ “ತಾಜ್ ಮಹಲ್ ೨” ಎಂಬ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದೆ. ಆದರೆ ಆ ಚಿತ್ರ ನಿರೀಕ್ಷಿಸಿದಷ್ಟು ಯಶಸ್ಸು ತಂದುಕೊಡಲಿಲ್ಲ. ಬಹಳ ನಷ್ಟವಾಯಿತು. ಡಿಪ್ರೆಶನ್ ಗೆ ಹೋದೆ. ಸಿನಿಮಾ ಮಾಡುವುದೇ ಬೇಡ ಅಂದುಕೊಂಡೆ. ಆದರೆ ಈ ನಿರ್ಧಾರ ತುಂಬಾ ದಿನ ಉಳಿಯಲಿಲ್ಲ. ಎರಡು ವರ್ಷಗಳ ಹಿಂದೆ “ಆಯುಧ” ಎಂಬ ಚಿತ್ರದ ನಿರ್ಮಾಣ ಆರಂಭ ಮಾಡಿದೆ. ಮೇಕಪ್ ಮಾಡಿ ಬಂದ ಹಣದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ನಾನೇ ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ಅಭಿನಯಿಸಿದ್ದೇನೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಮನ್ವರ್ಷಿ ನವಲಗುಂದ ಹಾಡುಗಳನ್ನು ಬರೆದಿದ್ದಾರೆ.

ಸ್ಟೀವನ್ ಸತೀಶ್, ಮನದೀಪ್ ಹಾಗೂ ಮಂಜು ಮೂವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವೀನಸ್ ಮೂರ್ತಿ ಈ ಚಿತ್ರದ ಛಾಯಾಗ್ರಾಹಕರು. ಅಮೃತ ಹಾಗೂ ಸಂಹಿತ ವಿನ್ಯ ನಾಯಕಿಯರು. ಚಿತ್ರತಂಡದ ಸಹಕಾರದಿಂದ “ಆಯುಧ” ಚಿತ್ರ ಚೆನ್ನಾಗಿ ಮೂಡಿಬಂದಿದೆ. ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಸಿರಿ ಮ್ಯೂಸಿಕ್ ನಲ್ಲಿ ನೋಡಲು ಲಭ್ಯವಿದೆ. ಮಾರ್ಚ್ 27 ರಂದು ಚಿತ್ರ ಲಿಖಿತ್ ಫಿಲಂಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ, ನಿರ್ಮಾಪಕ ಹಾಗೂ ನಿರ್ದೇಶಕ ದೇವರಾಜ್ ಕುಮಾರ್. ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಮಾರ್ಚ್ 27 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹಾರೈಸಿ ಎಂದರು ನಾಯಕಿ ಸಂಹಿತಾ ವಿನ್ಯ. ‌‌‌‌ ಚಿತ್ರದಲ್ಲಿ ನಟಿಸಿರುವ ಸೂರ್ಯಪ್ರವೀಣ್, ರಘುರಾಜ್ ಮಲ್ನಾಡ್, ಸುನೀಲ್ ಬೀರೂರು, ನಾರಾಯಣ್, ಸುರೇಂದ್ರ ಕುಮಾರ್ ಮುಂತಾದ ಕಲಾವಿದರು, ವಿತರಕ ರಮೇಶ್ ಬಾಬು ಹಾಗೂ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Spread the love

Continue Reading
Click to comment

Leave a Reply

Your email address will not be published. Required fields are marked *